Actor Yash Birthday : ನಟ‌‌ ಯಶ್ ಬರ್ತ್ ಡೇ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ: ಆದ್ರೆ ಪತ್ರದ ಮೂಲಕ ರಾಕಿಂಗ್ ಸ್ಟಾರ್ ಕೊಟ್ಟ ಸಿಹಿ ಸುದ್ದಿ ಏನು..?

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ (Actor Yash Birthday) ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ನಟ ಯಶ್‌ ಕೆಜಿಎಫ್‌ ಚಾಪ್ಟರ್‌ 1ರ ಬಿಡುಗಡೆ ಸಮಯದಲ್ಲಿ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಅದರ ನಂತರ ನಾನಾ ಕಾರಣಗಳಿಂದ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಈ ಬಾರಿ ಅಭಿಮಾನಿಗಳು ನೆಚ್ಚಿನ ನಟನನ್ನು ಭೇಟಿ ಮಾಡಲು ಕಾಯುತ್ತಿದ್ದರು. ಆದರೆ ಅವರಿಗೆಲ್ಲಾ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದ ಪತ್ರ ನಿರಾಸೆ ಹುಟ್ಟಿಸಿದೆ.

ಈ ಬಾರಿ ಕೂಡ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಅದನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಯಶ್‌ ತಮ್ಮ ಪತ್ರದಲ್ಲಿ”ಅಭಿಮಾನಿಗಳಿಗೆ ನಮಸ್ಕಾರ…ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೆ ಇತ್ತೀಚಿನ ವರ್ಷಗಳಲ್ಲಿ ಯಾವಾಗ ನೀವು ನನ್ನ ದಿನವನ್ನು ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನು ನೋಡಬೇಕು.

ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ . ಕ್ಷಮಿಸಿ..ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ, ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ ನಿಮ್ಮ ಪ್ರೀತಿಯ ಯಶ್” ಎಂದು ಪತ್ರವೊದನ್ನು ಬರೆದು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Producer Umesh Banaker: ಅಪ್ಪು ಸಾವಿನ ಹೊತ್ತಲ್ಲಿ ಕ್ರಾಂತಿ ಶೂಟಿಂಗ್ ನಿಲ್ಲಿಸಿದ್ದ ನಟ ದರ್ಶನ್‌ : ನಿರ್ಮಾಪಕ ಉಮೇಶ್ ಬಣಕರ್‌ ಬಿಚ್ಚಿಟ್ಟ ಸತ್ಯ

ಇದನ್ನೂ ಓದಿ : ಪರಂವಃ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಸಿದ್ದವಾಯ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’: ಪೋಸ್ಟರ್‌ ಬಿಡುಗಡೆಗೊಳಿಸಿದ ರಕ್ಷಿತ್‌ ಶೆಟ್ಟಿ

ಇದನ್ನೂ ಓದಿ : Sonam Kapoor : ಮುಂಬೈನ ತನ್ನ ಐಷಾರಾಮಿ ಅಪಾರ್ಟ್ ಮೆಂಟ್ ಮಾರಾಟ ಮಾಡಿದ ನಟಿ ಸೋನಂ‌ ಕಪೂರ್

ಈ ಬಾರಿ ಬಹಳ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಸಿದ್ದತೆ ನಡೆಸಿದ್ದಾರೆ. ಈಗಾಗಲೇ ಸ್ಪೆಷಲ್ ಕಾಮನ್ ಡಿಪಿ ಸಿದ್ಧಪಡಿಸಿ ವೈರಲ್ ಮಾಡಿದ್ದರು. ಈ ಬಾರಿ ನೆಚ್ಚಿನ ನಟನ ಮನೆ ಬಳಿ ಹೋಗಿ ಕೈ ಕುಲುಕಿ ಶುಭಾಶಯ ಕೋರಲು ಬಯಸಿದ್ದರು. ಜೊತೆಗೆ ಯಶ್19 ಅಪ್‌ಡೇಟ್‌ಗಾಗಿ ಕೂಡ ಕಾಯುತ್ತಿದ್ದರು. ಆದರೆ ಯಶ್ ನಿರ್ಣಯ ಕೊಂಚ ಬೇಸರ ತರಿಸಿದೆ. ಆದರೆ ಅವರ ಈ ಪತ್ರದಿಂದಾಗಿ ಬಹಳ ದೊಡ್ಡದಾಗಿ ಏನೋ ಕಾದಿದೆ ಎಂದು ಅಭಿಮಾನಿಗಳನ್ನು ಕಾಯುವಂತೆ ಮಾಡಿದೆ.

Actor Yash Birthday: Fans who were celebrating actor Yash’s birthday are disappointed again: What is the sweet news the rocking star gave through a letter..?

Comments are closed.