Virat Kohli twitter Followers : ಮೋದಿ ಬಿಟ್ಟರೆ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ಇಡೀ ಏಷ್ಯಾಗೇ ನಂ.1

ಬೆಂಗಳೂರು: (Virat Kohli twitter Followers) ಟೀಮ್ ಇಂಡಿಯಾದ ರನ್ ಮಷಿನ್, ಟನ್ ಮಷಿನ್ ವಿರಾಟ್ ಕೊಹ್ಲಿ ಅವರಿಗೆ ಇಡೀ ಜಗತ್ತಿನಾದ್ಯಂತ ದೊಡ್ಡ ಸಂಖ್ಯೆ ಯಲ್ಲಿ ಅಭಿಮಾನಿಗಳಿದ್ದಾರೆ. ಕೊಹ್ಲಿ ಯಾವ ದೇಶದಲ್ಲೇ ಕ್ರಿಕೆಟ್ ಆಡಿದ್ರೂ, ಕಿಂಗ್ ಆಟ ನೋಡಲು ಅಭಿಮಾನಿಗಳು ಕ್ರೀಡಾಂಗಣದಲ್ಲೆ ಬರುತ್ತಾರೆ.

ವಿರಾಟ್ ಕೊಹ್ಲಿಯವರ ಪಾಪ್ಯುಲಾರಿಟಿ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಸಾಮಾಜಿಕ ಜಾಲತಾಣ ಟ್ವಿಟರ್ ಫಾಲೋವರ್ಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಭಾರತದಲ್ಲಷ್ಟೇ ಅಲ್ಲ, ಇಡೀ ಏಷ್ಯಾದಲ್ಲಿ ನಂ.1 ಕ್ರೀಡಾಪಟು. ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಟ್ಟರೆ ಏಷ್ಯಾದಲ್ಲೇ ಅತೀ ಹೆಚ್ಚು ಟ್ವಿಟರ್ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ 50 ಮಿಲಿಯನ್ ದಾಟಿತ್ತು.

ಪ್ರಧಾನಿ ನರೇಂದ್ರ ಮೋದಿ ಟ್ವಿಟರ್’ನಲ್ಲಿ 82.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅಂದ್ರೆ 8 ಕೋಟಿಗೂ ಹೆಚ್ಚು. ವಿರಾಟ್ ಕೊಹ್ಲಿ 50 ಮಿಲಿಯನ್ ಟ್ವಿಟರ್ ಫಾಲೋವರ್ಸ್ ಹೊಂದಿದ್ದಾರೆ. ಅಂದ್ರೆ ಕೊಹ್ಲಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ 5 ಕೋಟಿ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ 47.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ನರೇಂದ್ರ ಮೋದಿ ಮತ್ತು ವಿರಾಟ್ ಕೊಹ್ಲಿಯವರ ನಂತರದ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಬಾಲಿವುಡ್ ನಟ ಅಕ್ಷಯ್ ಕುಮಾರ್ 45.2 ಟ್ವಿಟರ್ ಫಾಲೋವರ್ಸ್ ಹೊಂದಿದ್ದು, 4ನೇ ಸ್ಥಾನದಲ್ಲಿದ್ದಾರೆ. ಸಲ್ಮಾನ್ ಖಾನ್ 44.3 ಮಿಲಿಯನ್ ಹಾಗೂ ಶಾರುಖ್ ಖಾನ್ 42.6 ಟ್ವಿಟರ್ ಫಾಲೋವರ್ಸ್ ಹೊಂದಿದ್ದಾರೆ.

ಬಾಲಿವುಡ್’ನ ದೊಡ್ಡ ದೊಡ್ಡ ನಟರನ್ನೆಲ್ಲಾ ವಿರಾಟ್ ಕೊಹ್ಲಿ ಮೀರಿಸಿದ್ದು, ತಮ್ಮ ಪಾಪ್ಯುಲಾರಿಟಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 71ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು.

ಟ್ವಿಟರ್ ಫಾಲೋವರ್ಸ್ (Virat Kohli twitter Followers)

ನರೇಂದ್ರ ಮೋದಿ: 82.4 ಮಿಲಿಯನ್
ವಿರಾಟ್ ಕೊಹ್ಲಿ: 50 ಮಿಲಿಯನ್
ಅಮಿತಾಭ್ ಬಚ್ಚನ್: 47.9 ಮಿಲಿಯನ್
ಅಕ್ಷಯ್ ಕುಮಾರ್: 45.2 ಮಿಲಿಯನ್
ಸಲ್ಮಾನ್ ಖಾನ್: 44.3 ಮಿಲಿಯನ್
ಶಾರುಖ್ ಖಾನ್: 42.6 ಮಿಲಿಯನ್

ಇದನ್ನೂ ಓದಿ : ICC T20 World Cup India matches : ಭಾರತದ ಪಂದ್ಯಗಳು ಯಾವಾಗ, ಎಲ್ಲಿ, ಎದುರಾಳಿಗಳು ಯಾರು..? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಇದನ್ನೂ ಓದಿ : India Women Vs England Women: ಇಂಗ್ಲೆಂಡ್ ವನಿತೆಯರ ವಿರುದ್ಧ ಸ್ಮೃತಿ ಮಂಧನ ಅಬ್ಬರದ ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ

After Narendra Modi Virat Kohli is No1 Twitter followers whole of Asia

Comments are closed.