Mangaluru hindu worker death: ನೇತ್ರಾವತಿ ನದಿಯಲ್ಲಿ ಹಿಂದೂ ಕಾರ್ಯಕರ್ತನ ಶವ ಪತ್ತೆ: ಸಾವಿನ ಸುತ್ತ ಹಲವು ಶಂಕೆ

ಮಂಗಳೂರು: (Mangaluru hindu worker death) ಪಾಣೆಮಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಹಿಂದೂ ಕಾರ್ಯಕರ್ತನ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರಾಜೇಶ್‌ ಸುವರ್ಣ ಸಾನದಮನೆ ಎಂದು ಗುರುತಿಸಲಾಗಿದೆ.

ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ದ್ವಿಚಕ್ರವಾಹನವೊಂದು ಪತ್ತೆಯಾದ ಹಿನ್ನಲೆಯಲ್ಲಿ ವಾಹನ ಸವಾರರು ಅನುಮಾನಗೊಂಡು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಮೊದಲು ನದಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದು, ರಾಜೇಶ್‌ ಪೂಜಾರಿಯವರ ಮೃತದೇಹ (Mangaluru hindu worker death) ಪತ್ತೆಯಾಗಿದೆ.

ನದಿಗೆ ಬೀಳುವುದಕ್ಕೂ ಮೊದಲು ರಾಜೇಶ್‌ ಅವರು ಸಜೀಪ ಮನೆಯಿಂದ ಬರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬೇರೊಂದು ವಾಹನಕ್ಕೋ ಅಥವಾ ಸೇತುವೆಗೋ ವಾಹನ ಢಿಕ್ಕಿಯಾಗಿ ನದಿಗೆ ಬಿದ್ದು ಸಾವನ್ನಪ್ಪಿರಬಹುದಾ ಎಂಬ ಸಂದೇಹ ವ್ಯಕ್ತವಾಗಿದೆ.

ರಾಜೇಶ್‌ ಅವರು ಕಲ್ಲಡ್ಕ ಪ್ರಖಂಡದ ಗೋರಕ್ಷಕ ಪ್ರಾಮುಕ್‌ ಹಾಗೂ ಸಜೀಪ ವಿಶ್ವ ಹಿಂದೂ ಪರಿಷತ್ತಿನ ಸಕ್ರೀಯ ಕಾರ್ಯಕರ್ತರಾಗಿದ್ದರು. ಇವರು ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಹಿಂದುತ್ವದ ಪರ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇವರ ಸಾವಿನ ಬಗ್ಗೆ ಸರಿಯಾದ ತನಿಖೆಗಳು ನಡೆದು ಸಾವಿಗೆ ನ್ಯಾಯ ಸಿಗಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ.

ಸದ್ಯ ಪ್ರಕರಣ ದಾಖಲಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪಘಾತವಿರಬಹುದಾ ಅಥವಾ ಇನ್ನ್ಯಾವುದೇ ಕಾರಣವಿರಬಹುದಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ : Doctor K. jayaram shetty: ಮಂಗಳೂರಿನ ಖ್ಯಾತ ವೈದ್ಯ ಕೆ. ಜಯರಾಮ್‌ ಶೆಟ್ಟಿ ಹೃದಯಾಘಾತದಿಂದ ನಿಧನ

ಇದನ್ನೂ ಓದಿ : Mangalore 10 People Arrested : ವೈದ್ಯರು, ವಿದ್ಯಾರ್ಥಿಗಳಿಂದ ಡ್ರಗ್ಸ್ ದಂಧೆ : 10 ಮಂದಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಇದನ್ನೂ ಓದಿ : ಹೆಬ್ರಿ : ಭಕ್ತರಿಗೆ ಗನ್ ತೋರಿಸಿ ಜೀವಬೆದರಿಕೆ, ಮಾನಹಾನಿ : ಚರ್ಚ್ ಧರ್ಮಗುರು ವಿರುದ್ದ ದೂರು, ಪ್ರತಿದೂರು ದಾಖಲು

Mangaluru hindu worker death: Dead body of Hindu worker found in Netravathi river: Many suspicions surrounding the death

Comments are closed.