ಹೊಸ ಬಗೆಯ ಅಪ್ಡೇಟ್ಗಳನ್ನು ಹೊರಬಿಡೋದ್ರಲ್ಲಿ ಸ್ಯಾಮ್ಸಂಗ್ ಕಂಪನಿಗೆ ಸರಿಸಾಟಿ ಯಾವುದೂ ಇಲ್ಲ.ಸದಾ ಒಂದಿಲ್ಲೊಂದು ರೀತಿಯ ಮೊಬೈಲ್ಗಳನ್ನು ಲಾಂಚ್ ಮಾಡುವ ಮೂಲಕ ಆಪಲ್ ಕಂಪನಿಯ ಮೊಬೈಲ್ಗಳಿಗೆ ಠಕ್ಕರ್ ನೀಡುತ್ತಲೇ ಬಂದಿದೆ. ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ಎಂಬಂತೆ ಇದುವರೆಗೆ ಯಾವ ಮೊಬೈಲ್ ಕಂಪನಿಯು ಮಾರುಕಟ್ಟೆಗೆ ತಂದಿರದ ಒಂದು ಹೊಸ ವೈಶಿಷ್ಟ್ಯವನ್ನು ತರೋಕೆ ಸ್ಯಾಮ್ಸಂಗ್ (Samsung) ಕಂಪನಿಯು ಮುಂದಾಗಿದೆ.

ಈ ಹೊಸ ವೈಶಿಷ್ಟ್ಯ ಯಾವ ರೀತಿ ಇದೆ ಎಂದರೆ ಮತ್ತೊಬ್ಬರ ಭಾಷೆ ನಿಮಗೆ ಅರ್ಥವಾಗದೇ ಇದ್ದರೂ ಸಹ ನೀವು ಅನಾಯಾಸವಾಗಿ ಅವರೊಂದಿಗೆ ಮಾತನಾಡಬಹುದಾಗಿದೆ. ಇದೀಗ ಸ್ಯಾಮ್ಸಂಗ್ Galaxy AI ಯನ್ನು ಪರಿಚಯಿಸಿದ್ದು ಈ ಹೊಸ ವೈಶಿಷ್ಟ್ಯವು ಸ್ಯಾಮ್ಸಂಗ್ ಫೋನ್ ಬಳಕೆದಾರರಿಗೆ ಇನ್ನೂ ಉತ್ತಮ ಅನುಭವವನ್ನು ನೀಡುತ್ತಿದೆ. ಉತ್ತಮ ಸ್ಮಾರ್ಟ್ಫೋನ್ ಅನುಭವಕ್ಕಾಗಿ AI ಆಧಾರಿತ ಈ ವೈಶಿಷ್ಟ್ಯವನ್ನು ಬಳಸುವಂತೆ ಸ್ಯಾಮ್ಸಂಗ್ ಕಂಪನಿ ಕೂಡ ಕೇಳಿಕೊಂಡಿದೆ.
ಇದನ್ನೂ ಓದಿ : ಹೊಸ ಮೊಬೈಲ್ ಖರೀದಿಸುವ ಆಲೋಚನೆಯಲ್ಲಿದ್ದೀರೇ..? : ಈ ಮೊಬೈಲ್ ಪರಿಶೀಲಿಸೋದನ್ನ ಮರೀಬೇಡಿ
AI ತಂತ್ರಜ್ಞಾನದಿಂದ ಸ್ಯಾಮ್ಸಂಗ್ ಮೊಬೈಲ್ನಲ್ಲಿ ಯಾವೆಲ್ಲ ರೀತಿಯಲ್ಲಿ ಲಾಭ ಪಡೆಯಬಹುದು ಎಂಬುದರ ಬಗ್ಗೆ ಕಂಪನಿಯು ಪೂರ್ಣ ಮಾಹಿತಿ ನೀಡಿಲ್ಲವಾದರೂ ಸಹ ಸ್ಯಾಮ್ಸಂಗ್ ಬಳಕೆದಾರರು ಶೀಘ್ರದಲ್ಲಿಯೇ Galaxy AI ಬಳಸಿ ಕರೆಯನ್ನು ಟ್ರಾನ್ಸ್ಲೇಟ್ ಮಾಡುವ ಅವಕಾಶ ಪಡೆದುಕೊಳ್ತಾರೆ ಎನ್ನಲಾಗಿದೆ. ಏನಿದು ಕರೆ ಟ್ರಾನ್ಸ್ಲೇಟ್ ಎಂದು ಯೋಚಿಸುತ್ತಿದ್ದೀರೇ..? ಈ ಹೊಸ ವೈಶಿಷ್ಟ್ಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಹೆಸರೇ ತಿಳಿಸುವಂತೆ ಈ ಆಯ್ಕೆಯು ನಿಮಗೆ ಕರೆಯನ್ನು ಅನುವಾದ ಮಾಡಲು ಸಹಾಯ ಮಾಡುತ್ತದೆ. AI ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನೀವು ಬೇರೆ ಭಾಷೆಯ ಕರೆಗಳು ಹಾಗೂ ಮೆಸೇಜ್ಗಳನ್ನು ನಿಮಗೆ ಗೊತ್ತಿರುವ ಭಾಷೆಗೆ ಅನುವಾದಿಸಿಕೊಳ್ಳಬಹುದಾಗಿದೆ. ಅಲ್ಲದೇ ಈ ವೈಶಿಷ್ಟ್ಯವು ನಿಮ್ಮ ಡೇಟಾ ಹಾಗೂ ಗೌಪ್ಯತೆಗೆ ಯಾವುದೇ ರೀತಿಯ ತೊಂದರೆಯನ್ನೂ ಉಂಟು ಮಾಡೋದಿಲ್ಲ ಎಂದು ಸ್ಯಾಮ್ಸಂಗ್ ಕಂಪನಿಯು ಮಾಹಿತಿ ನೀಡಿದೆ.
ಇದನ್ನೂ ಓದಿ : ಐಫೋನ್ 13ಗೆ 10,000 ರೂ. ಡಿಸ್ಕೌಂಟ್ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್ ಮಿಸ್ ಮಾಡ್ಲೇಬೇಡಿ
AI ತಂತ್ರಜ್ಞಾನವನ್ನು ಬಳಸಿ ಮೊಬೈಲ್ ಕರೆಗಳನ್ನು ಅನುವಾದ ಮಾಡುವ ಈ ಹೊಸ ವೈಶಿಷ್ಟ್ಯವು ಶೀಘ್ರದಲ್ಲಿಯೇ ಗ್ಯಾಲಕ್ಸಿ ಫೋನ್ ಬಳಕೆದಾರರಿಗೆ ಸಿಗಲಿದೆ ಎನ್ನಲಾಗಿದೆ. ಇದರಿಂದ ನೀವು ಈ ರೀತಿಯ ಕೆಲಸಕ್ಕಾಗಿ ಯಾವುದೋ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಕೆ ಮಾಡಿ ಗೌಪ್ಯತೆಗಳ ಬಗ್ಗೆ ಅನುಮಾನ ಪಡುವ ಅಗತ್ಯ ಇರೋದಿಲ್ಲ. ಇದರಿಂದ ನೀವು ನಿಮಗೆ ಗೊತ್ತಿಲ್ಲದ ಭಾಷೆಯನ್ನು ಮಾತನಾಡುವ ವ್ಯಕ್ತಿಯೊಂದಿಗೂ ಅನಾಯಾಸವಾಗಿ ಮಾತನಾಡಬಹುದಾಗಿದೆ.
Galaxy AI ಮುಂದಿನ ವರ್ಷದ ಆರಂಭದಲ್ಲಿ ಲಾಂಚ್ಗೊಳ್ಳಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ಆದರೆ ಸ್ಯಾಮ್ಸಂಗ್ನ ಯಾವ ಫೋನ್ನಿಂದ ಈ ಸೌಕರ್ಯ ಸಿಗಲಿದೆ ಎಂಬುದರ ಬಗ್ಗೆ ಕಂಪನಿಯು ಇನ್ನೂ ಯಾವುದೇ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಮುಂಬರುವ ಗ್ಯಾಲಕ್ಸಿ ಎಸ್ 24 ನಲ್ಲಿ ಈ ವೈಶಿಷ್ಟ್ಯ ಇರಬಹುದು ಅಂತಾ ಅಂದಾಜಿಸಲಾಗ್ತಿದೆ. ಈ ಸರಣಿಯು 2024ರ ಜನವರಿ ತಿಂಗಳಲ್ಲಿ ಲಾಂಚ್ ಆಗಲಿದೆ.
ಇದನ್ನೂ ಓದಿ : ಆಧಾರ್ ಕಾರ್ಡ್ನಲ್ಲಿ ನಿಮ್ಮ ಫೋಟೋ ಬದಲಿಸುವುದು ಈಗ ಇನ್ನಷ್ಟು ಸುಲಭ : ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
samsung galaxy phones AI features can translate any Language call into your Language