Samsung Galaxy SmartTag : ಶೀಘ್ರದಲ್ಲೇ ನೆಕ್ಸ್ಟ್‌ ಜನರೇಷನ್‌ ಸ್ಮಾರ್ಟ್‌ಟ್ಯಾಗ್‌ ಬಿಡುಗಡೆ ಮಾಡಲಿರುವ ಸ್ಯಾಮ್‌ಸಂಗ್

‌ಸ್ಮಾರ್ಟ್‌ಫೋನ್‌ಗಳ (Smartphones) ತಯಾರಿಕೆಯಲ್ಲಿ ಅತ್ಯಂತ ಜನಪ್ರಿಯ ಹೆಸರು ಗಳಿಸಿರುವ ಸ್ಯಾಮ್‌ಸಂಗ್‌ (Samsung) ನೆಕ್ಸ್ಟ್‌ ಜನರೇಷನ್‌ನ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್‌ (Samsung Galaxy SmartTag) ಅನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಗ್ಯಾಲೆಕ್ಸಿ ಸ್ಮಾರ್ಟ್‌ಟ್ಯಾಗ್‌, ಇದೊಂದು ಒಬ್ಜೆಕ್ಟ್‌ ಟ್ರ್ಯಾಕರ್‌ ಆಗಿದೆ. ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಇದನ್ನು ಮೊದಲ ಬಾರಿಗೆ ಅಧಿಕೃತವಾಗಿ 2021 ರಲ್ಲಿ ಬಿಡುಗಡೆ ಮಾಡಿತ್ತು. ಸ್ಯಾಮ್‌ಮೊಬೈಲ್‌ ಪ್ರಕಾರ, ಜಾಗತಿಕವಾಗಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟ ನಂತರ ಕಳೆದ ಎರಡು ವರ್ಷಗಳಲ್ಲಿ ಸಾಧನದ ಅಪ್ಡೇಟೆಡ್‌ ವರ್ಷನ್‌ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಸ್ಯಾಮ್‌ಸಂಗ್ 2023 ರ ಮೂರನೇ ತ್ರೈಮಾಸಿಕದಲ್ಲಿ ಸೆಕೆಂಡ್‌ ಜನರೇಷನ್‌ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ ಶ್ರೇಣಿಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ಶೀಘ್ರದಲ್ಲೇ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿರುವ ಆಬ್ಜೆಕ್ಟ್‌ ಟ್ರಾಕರ್‌ ಸುಧಾರಿತ ವೈರ್‌ಲೆಸ್‌ ಶ್ರೇಣಿ, ಬೀಪರ್ ವಾಲ್ಯೂಮ್ ಮತ್ತು ಅನಧಿಕೃತ ಟ್ರ್ಯಾಕಿಂಗ್ ಅನ್ನು ತಡೆಯಲು ಹೆಚ್ಚಿನ ಭದ್ರತಾ ಕ್ರಮಗಳೊಂದಿಗೆ ಬರುವ ನಿರೀಕ್ಷೆಯಿದೆ. ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ ಅನ್ನು ನೆಕ್ಸ್ಟ್‌ ಜನರೇಷನ್‌ನ ಧರಿಸಬಹುದಾದ ಸಾಧನಗಳಾದ ಗ್ಯಾಲಕ್ಸಿ ವಾಚ್ 6 ಮತ್ತು ಗ್ಯಾಲಕ್ಸಿ ಬಡ್ಸ್ 3 ನೊಂದಿಗೆ ಅನಾವರಣಗೊಳಿಸುವ ಸಾಧ್ಯತೆಯಿದೆ.

ಇದಲ್ಲದೇ ಕಂಪನಿಯು ತನ್ನ ನೆಕ್ಸ್ಟ್‌ ಜನರೇಷನ್‌ನ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಅದೇ ಸಮಾರಂಭದಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ಗ್ಯಾಲೆಕ್ಸಿ Z ಫ್ಲಿಪ್‌ 5 ಮತ್ತು ಗ್ಯಾಲೆಕ್ಸಿ Z ಫೋಲ್ಡ್‌ 5 ಎಂಬ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ಗ್ಯಾಲೆಕ್ಸಿ Z ಸರಣಿಯ ಅಡಿಯಲ್ಲಿ ಬರಲಿದೆ. ಸ್ಯಾಮ್‌ಸಂಗ್‌ ಸದ್ಯದ ಗ್ಯಾಲೆಕ್ಸಿ ಸ್ಮಾರ್ಟ್‌ಟ್ಯಾಗ್‌ ಅನ್ನು 2021 ರಲ್ಲಿ $29.99 ಅಂದರೆ 2,460 ರೂ. ಗಳಿಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟ್ಯಾಗ್‌ ಅನ್ನು ಕೀಗಳಿಗೆ, ಬ್ಯಾಗ್‌ಗಳಿಗೆ ಅಥವಾ ಪೆಟ್‌ ಕಾಲರ್‌ಗಳು ಹೀಗೆ ಬೆಲೆಬಾಳುವ ವಸ್ತುಗಳಿಗೆ ಲಗತ್ತಿಸಬಹುದು. ಆ ವಸ್ತುಗಳನ್ನು ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಟ್ರ್ಯಾಕ್‌ ಮಾಡಬಹುದಾಗಿದೆ.

ಇದನ್ನೂ ಓದಿ : Solo trekking is prohibited: ಈ ಜನಪ್ರಿಯ ಟ್ರೆಕ್ಕಿಂಗ್ ತಾಣಗಳಲ್ಲಿ ಸೋಲೋ ಟ್ರೆಕ್ಕಿಂಗ್ ನಿಷೇಧ : ಕಾರಣವೇನು ಗೊತ್ತಾ…

ಇದನ್ನೂ ಓದಿ : Moto G73 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅನಾವರಣ; 1TB ವರೆಗೆ ಸ್ಟೊರೇಜ್‌ ವಿಸ್ತರಣೆ

(Samsung Galaxy SmartTag to launch soon. Know everything about this next-generation smart tag)

Comments are closed.