Schedule an email : Gmail ನ ಇಮೇಲ್‌ ಸಹ ಶೆಡ್ಯೂಲ್‌ ಮಾಡಬಹುದು! ಹೇಗೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ Gmail ಜಗತ್ತಿನ ಅತ್ಯಂತ ಜನಪ್ರಿಯ ಇಮೇಲ್‌ (email) ಸೇವೆಯಾಗಿದೆ. ಗೂಗಲ್‌(Google) ಇದನ್ನು ಇನ್ನೂ ಆಕರ್ಷಕವಾಗಿ ಮತ್ತು ಬಳಕೆದಾರರ ಹಿತಕ್ಕಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತೇಲೆ ಬಂದಿದೆ. ಅದರಲ್ಲಿ ಒಂದು ಮಹತ್ವದ ವೈಶಿಷ್ಟ್ಯವೆಂದರೆ ಬಳಕೆದಾರರು ವೈಯಕ್ತಿಕ ಮತ್ತು ವೃತ್ತಿಪರ ಇಮೇಲ್‌ ಅನ್ನು ಶೆಡ್ಯೂಲ್‌ ಮಾಡಿ ಸೆಂಡ್‌(Schedule an email) ಮಾಡಬಹುದಾಗಿದೆ. ಇದು ಬೇರೆ ಬೇರ ಸಮಯದ ಸ್ಥಳಗಳ ಜನರನ್ನು ಸಂಪರ್ಕಿಸಲು ನೀವು ಬಯಸಿದಾಗ ಈ ವೈಶಿಷ್ಟ್ಯವು ನಿಮಗೆ ಸಹಾಯ ಮಾಡುವುದು. ಮತ್ತು ನಿರ್ದಿಷ್ಟ ಸಮಯದ ಇವೆಂಟ್‌ಗಳನ್ನು ನಿಮಗೆ ಮತ್ತು ಇತರರಿಗೆ ನೆನಪಿಸಲು ಸಹಾಯವಾಗುವುದು.

ಹಾಗಾದರೆ Gmail ನ ಇಮೇಲ್‌ ನಲ್ಲಿರುವ ಶೆಡ್ಯೂಲ್‌ ಆಂಡ್‌ ಸೆಂಡ್‌(Schedule and Send) ವೈಶಿಷ್ಟ್ಯವನ್ನು ಅಳವಡಿಸಿಕೊಳ್ಳುವುದು ಹೇಗೆ ಅನ್ನುವ ಗೊಂದಲವಿದ್ದರೆ ಇದನ್ನು ಓದಿ. ಇಲ್ಲಿ ಶೆಡ್ಯೂಲ್‌ ಮಾಡುವುದು ಮತ್ತು ಈಗಾಗಲೇ ಮಾಡಿದ ಶೆಡ್ಯೂಲ್‌ ಅನ್ನು ಕ್ಯಾನ್ಸಲ್‌ ಮಾಡುವುದು ಹೇಗೆ ಅನ್ನುವುದರ ಹಂತ ಹಂತದ ಮಾಹಿತಿ ಇಲ್ಲಿದೆ.

Gmail ನ ಇಮೇಲ್‌ ಶೆಡ್ಯೂಲ್‌ ಮಾಡುವುದು ಹೇಗೆ?

  • ಸೈನ್‌ ಇನ್‌ ಆಗುವುದರ ಮೂಲಕ ನಿಮ್ಮ Gmail ಖಾತೆ ತೆರಯಿರಿ.
  • ಕಂಪೋಸ್‌ ಆಪ್ಷನ್‌ ಅನ್ನು ಟ್ಯಾಪ್‌ ಮಾಡಿ, ಮತ್ತು ಅಗತ್ಯ ಮಾಹಿತಿ ಬರೆಯಿರಿ.
  • ಸೆಂಡ್‌ ಆಪ್ಷನ್‌ ನ ಪಕ್ಕದಲ್ಲಿರುವ 3 ಡಾಟ್‌ಗಳಿರುವ ಮೆನ್ಯುವನ್ನು ಕ್ಲಿಕ್ಕಿಸಿ.
  • ಅಲ್ಲಿ ಶೆಡ್ಯೂಲ್‌ ಸೆಂಡ್‌ (Schedule Send) ಆಯ್ದುಕೊಳ್ಳಿ.
  • ಪರದೆಯ ಮೇಲೆ ಕಾಣಿಸುವು 4 ಆಪ್ಷನ್‌ಗಳಲ್ಲಿ ಪಿಕ್‌ ಡೇಟ್‌ ಆಂಡ್‌ ಟೈಮ್‌ ಆಯ್ದುಕೊಳ್ಳಿ.
  • ಅಲ್ಲಿ ಇಮೇಲ್‌ ಕಳುಹಿಸಬೇಕಾದ ಡೇಟ್‌ ಮತ್ತು ಟೈಮ್‌ ಹೊಂದಿಸಿ.
  • ನಂತರ ಶೆಡ್ಯೂಲ್‌ ಸೆಂಡ್‌ ಕ್ಲಿಕ್ಕಿಸಿ.

ಹೀಗೆ ಸುಲಭವಾಗಿ ನಿಮ್ಮ ಇಮೇಲ್‌ ಅನ್ನು ಶೆಡ್ಯೂಲ್‌ ಮಾಡಬಹುದು. ನಾವು ಇಲ್ಲಿ ಮೊಬೈಲ್‌ ನಲ್ಲಿ ಹೇಗೆ ಮಾಡುವುದು ಎಂದು ಹೇಳಿದ್ದೇವೆ. ಡೆಸ್ಕಟಾಪ್‌ನಲ್ಲಿ ನೀವು ಸೆಂಡ್‌ ಪಕ್ಕದಲ್ಲಿರುವ ಡ್ರಾಪ್‌–ಡೌನ್‌ ಆಪ್ಷನ್‌ ಕ್ಲಿಕ್ಕಿಸುವುದರ ಮೂಲಕ ಶೆಡ್ಯೂಲ್‌ ಸೆಂಡ್‌ ಅನ್ನು ಸುಲಭವಾಗಿ ಮಾಡಬಹುದು.

ಇದನ್ನೂ ಓದಿ :Mark Zuckerberg : ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಣ ಗಳಿಸುವ ಹೊಸ ದಾರಿ ಹೇಳಿದ ಮಾರ್ಕ್‌ ಜುಕರ್‌ಬರ್ಗ್‌!!

ಈಗಾಗಲೇ Gmail ನಲ್ಲಿ ಶೆಡ್ಯೂಲ್‌ ಮಾಡಿರುವ ಇಮೇಲ್‌ ಅನ್ನು ಕ್ಯಾನ್ಸಲ್‌ ಮಾಡುವುದು ಹೇಗೆ?
ನೀವು ಈಗಾಗಲೇ ಶೆಡ್ಯೂಲ್‌ ಮಾಡಿರುವ ಇಮೇಲ್‌ ನಲ್ಲಿ ಕೆಲವು ಗೊಂದಲಗಳಿದ್ದರೆ ಅದನ್ನು ಕ್ಯಾನ್ಸಲ್‌ ಮಾಡಲು ಹೀಗೆ ಮಾಡಿ:

  • ಬಲಗಡೆಯ ಫೋಲ್ಡರ್‌ ನಲ್ಲಿರುವ “Scheduled” ಅನ್ನು ಟ್ಯಾಪ್‌ ಮಾಡಿ.
  • ಅಲ್ಲಿ ನಿಮಗೆ ಶೆಡ್ಯೂಲ್‌ ಆದ ದಿನಾಂಕದ ಜೊತೆ ಇಮೇಲ್‌ ಕಾಣಿಸುವುದು.
  • ಏನಾದರೂ ಬದಲಾವಣೆಗಳಿದ್ದರೆ ಪಾಪ್‌–ಅಪ್‌ ನಲ್ಲಿರುವ ಅನ್‌ಡೂ(Undo) ಅನ್ನು ಕ್ಲಕ್ಕಿಸಿ. ಅದು ಡ್ರಾಫ್ಟ್‌ಗೆ ಕಳುಹಿಸಲ್ಪಡುವುದು.
  • ಒಂದು ವೇಳೆ ನೀವು ಕ್ಯಾನ್ಸಲ್‌ ಮಾಡಬೇಕೆಂದರೆ ಕ್ಯಾನ್ಸಲ್‌ ಸೆಂಡ್‌ (Cancel Send) ಕ್ಲಿಕ್ಕಿಸಿ. ಆಗ ಇಮೇಲ್‌ ತ್ರಾಷ್‌ಗೆ ವರ್ಗಾಯಿಸಲ್ಪಡುವುದು. (ಅಲ್ಲಿ ಸೆಂಡ್‌ ಟು ಡ್ರಾಫ್ಟ್‌ ಮಾಡುವುದರ ಮೂಲಕ ಪುನಃ ಅದೇ ಇಮೇಲ್‌ ಅನ್ನು ಡ್ರಾಫ್ಟ್‌ ನಲ್ಲಿ ಪಡೆಯಬಹುದಾಗಿದೆ).

ಇದನ್ನೂ ಓದಿ :Crazy Structure : ಜಗತ್ತಿನ ವಿಚಿತ್ರ ಕಟ್ಟಡಗಳು ನಿಮಗೆ ಗೊತ್ತಾ? ಇದು ಆಗರ್ಭ ಶ್ರೀಮಂತರ ಆಲೋಚನೆಯಿಂದ ಹುಟ್ಟಿದ್ದು!!

(Schedule an email how to schedule and cancel an email in Gmail)

Comments are closed.