Tata Play TV OTT : ಟಿವಿ+ಒಟಿಟಿ ಕೂಡಿ ಇನ್ಮೇಲೆ ಟಾಟಾ ಪ್ಲೇ; ರೂ. 399 ಕ್ಕೆ ಇಷ್ಟೆಲ್ಲಾ ನೋಡಬಹುದು!

ಭಾರತದ ಪ್ರಮುಖ ಡೈರೆಕ್ಟ್-ಟು-ಹೋಮ್ (DTH) ಕಂಪನಿ ಟಾಟಾ ಸ್ಕೈ ಕಂಪನಿಯು 18 ವರ್ಷಗಳ ನಂತರ ತನ್ನ ಬ್ರಾಂಡ್ ಹೆಸರಿನಿಂದ ‘ಸ್ಕೈ’ ಎಂಬ ಹೆಸರನ್ನು ಅನ್ನು ಕೈಬಿಡಲಿದೆ. ತನ್ನ ಟೆಲಿವಿಷನ್-ಕಮ್ ಓಟಿಟಿ (Tata Play TV OTT) ಬ್ರಾಂಡ್ ಆಗಿ ವಿಸ್ತರಿಸಲಿದೆ. ಜೊತೆಗೆ ಕಂಪೆನಿ ಹೆಸರು ‘ಟಾಟಾ ಪ್ಲೇ’ ಎಂದು ಮರುಬ್ರಾಂಡ್ ಮಾಡಲಿದೆ ಎಂದು ಘೋಷಿಸಿತು. ಬದಲಾಗುತ್ತಿರುವ ಸಮಯಕ್ಕೆ ಅನುಗುಣವಾಗಿ, ಡಿಟಿಎಚ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ಸೇರಿದಂತೆ 13 ಇತರ ಓಟಿಟಿ ಸೇವೆಗಳನ್ನು(Tata Play TV OTT) ತನ್ನ ಪ್ಯಾಕೇಜ್‌ನಲ್ಲಿ ಸೇರಿಸಿದೆ ಎಂದು ಹೇಳಿದೆ. ಜೊತೆಗೆ ಬಿಂಗೆ+ ಪ್ಯಾಕ್ ಗ್ರಾಹಕರಿಗೆ ಸಿಗಲಿದೆ.

ಒಂದೇ ಪ್ಯಾಕ್ ಹೊಂದಿದರೆ ಸ್ಮಾರ್ಟ್ ಟಿವಿಯಿಂದ ಮೊಬೈಲ್ ಫೋನಿನವರೆಗೆ ಎಲ್ಲಿ ಬೇಕಾದರೂ ಕಂಟೆಂಟ್ ವೀಕ್ಷಿಸಬಹುದು. ಒಂದು ವೇಳೆ ನೀವು ಹೆಚ್ಚಿನ ಸ್ಕ್ರೀನ್‌ನಲ್ಲಿ ನೋಡಲು ಬಯಸಿದರೆ ಹೆಚ್ಚು ಪಾವತಿಸಬೇಕಾಗುತ್ತದೆ. “ನಾವು ಮೂಲತಃ ಡಿಟಿಎಚ್ ಕಂಪನಿಯಾಗಿ ಪ್ರಾರಂಭಿಸಿ, ಈಗ ಸಂಪೂರ್ಣವಾಗಿ ಕಂಟೆಂಟ್ ವಿತರಣಾ ಕಂಪನಿಯಾಗಿ ಮಾರ್ಪಟ್ಟಿದ್ದೇವೆ” ಎಂದು ಟಾಟಾ ಪ್ಲೇಯ ಎಂಡಿ ಮತ್ತು ಸಿಇಒ ಹರಿತ್ ನಾಗ್ಪಾಲ್ ತಿಳಿಸಿದರು. ಅವರು ಗ್ರಾಹಕರ ನೆಲೆಯು ಬದಲಾಗುತ್ತಿದೆ ಮತ್ತು ಆದ್ದರಿಂದ, ಜನರಿಗೆ ಇಷ್ಟವಾಗುವ ಕಂಟೆಂಟ್ ತಲುಪಿಸುವ ಯೋಜನೆ ಹೊಂದಿದ್ದೇವೆ ಎಂದರು.

ಟಾಟಾ ಪ್ಲೇ ನೆಟ್‌ಫ್ಲಿಕ್ಸ್ ಕಾಂಬೊ ಪ್ಯಾಕ್‌ಗಳು ಜನವರಿ 27 ರಿಂದ ತಿಂಗಳಿಗೆ ರೂ 399 ರಿಂದ ಪ್ರಾರಂಭವಾಗಿದೆ. ಹೀಗಾಗಿ ಟಾಟಾ ಪ್ಲೇ ಇನ್ನು ಮುಂದೆ ಡಿಟಿಎಚ್ (ಕೇಬಲ್ ಚಾನೆಲ್) ಸೇವೆಗಳಷ್ಟೇ ಅಲ್ಲ, ಒಟಿಟಿ ಸೇವೆಗಳನ್ನು ಸಹ ತನ್ನ ಗ್ರಾಹಕರಿಗೆ ನೀಡಲಿದೆ.ಬಾಲಿವುಡ್ ನಟರಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರು ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಚಾರ ಮಾಡಲಿದ್ದಾರೆ.

ಟಾಟಾ ಸ್ಕೈ, 2004 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು. ಈ ಕಂಪನಿಯು ಟಾಟಾ ಸನ್ಸ್ ಮತ್ತು 21 ನೇ ಸೆಂಚುರಿ ಫಾಕ್ಸ್ ನಡುವೆ 80:20 ಜಂಟಿ ಉದ್ಯಮವಾಗಿ ಪ್ರಾರಂಭಿಸಲಾಯಿತು. ನಂತರ ಮುರ್ಡೋಕ್‌ನ ಫಾಕ್ಸ್ ಮನರಂಜನಾ ವ್ಯವಹಾರವನ್ನು ವಾಲ್ಟ್ ಡಿಸ್ನಿ ಕಂಪನಿಗೆ ಮಾರಾಟ ಮಾಡಿತು, ಅದರೊಂದಿಗೆ ಅದರ ಪಾಲನ್ನು ಸಹ ವರ್ಗಾಯಿಸಲಾಯಿತು. ಪ್ರಸ್ತುತ ಭಾರತದಲ್ಲಿ 23 ಮಿಲಿಯನ್ ಕುಟುಂಬಗಳಿಗೆ ಈ ಯೋಜನೆ ವಿಸ್ತರಿಸಿದೆ.

ಇದನ್ನೂ ಓದಿ: Indian Smartphone OS: ಆಂಡ್ರಾಯ್ಡ್ ಹಾಗೂ ಐಓಎಸ್ ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಒಎಸ್! ಮೇಡ್ ಇನ್ ಇಂಡಿಯಾ ತಂತ್ರಾಂಶ ತಯಾರಿಗೆ ಕೇಂದ್ರದ ಒಲವು

(Tata Play TV OTT new name for Tata Sky announce new pack with Netflix)

Comments are closed.