MLA Renukacharya: ಸ್ವಪಕ್ಷಿಯರ ವಿರುದ್ಧವೇ ಗುಡುಗಿದ ಶಾಸಕ ರೇಣುಕಾಚಾರ್ಯ: 15 ಸಚಿವರ ವಿರುದ್ಧ ರಾಜ್ಯಾಧ್ಯಕ್ಷ ರಿಗೆ ದೂರು

ಬೆಂಗಳೂರು : ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ರಾಜ್ಯ ಬಿಜೆಪಿಯಲ್ಲಿ ಒಳಜಗಳ ಎಲ್ಲೇ ಮೀರಲಾರಂಭಿಸಿದೆ.‌ ಇಷ್ಟು ದಿನಗಳ ಕಾಲ ವಲಸಿಗರ ಮೇಲೆ‌ ಮುನಿಸಿ ಕೊಂಡಿದ್ದ ಬಿಜೆಪಿ ಶಾಸಕರು ಈಗ ಸ್ವ ಪಕ್ಷಿಯ ಸಚಿವರು ಗಳ ಮೇಲೆಯೇ ತಿರುಗಿಬಿದ್ದಿದ್ದು, ಸಿಎಂ ವಿಶೇಷ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ (MLA Renukacharya) 15 ಕ್ಕೂ ಹೆಚ್ಚು ಸಚಿವರ ವಿರುದ್ಧ ರಾಜ್ಯಾಧ್ಯಕ್ಷರಿಗೆ ಮೌಖಿಕವಾಗಿ ದೂರು ನೀಡಿದ್ದಾರಂತೆ.

ರಾಜ್ಯದಲ್ಲಿ ಶತಾಯಗತಾಯ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದರೂ ಅಧಿಕಾರಕ್ಕಾಗಿ ಅಂತಃ ಕಲಹ ಹೆಚ್ಚಿದೆ. ಈ ಮಧ್ಯೆ 15 ಕ್ಕೂ ಹೆಚ್ಚು ಸಚಿವರು ಶಾಸಕರ ಬೇಡಿಕೆಗಳಿಗೆ, ಮಾತುಗಳಿಗೆ ಸ್ಪಂದಿಸುತ್ತಿಲ್ಲ.‌ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ. ಈ ಬಗ್ಗೆ ರೇಣುಕಾಚಾರ್ಯ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ್ ಬೊಮ್ಮಾಯಿಗೆ ದೂರು ಸಲ್ಲಿಸಿದ್ದಾರಂತೆ.

ಕೆಲವು ಸಚಿವರು ಅತಿಯಾದ ದುರಂಹಕಾರ ತೋರುತ್ತಿದ್ದಾರೆ. ಸರ್ಕಾರ ನಮ್ಮಿಂದಲೇ ಅಧಿಕಾರಕ್ಕೆ ಬಂದಿದೆ ಎಂಬಂತೆ ವರ್ತಿಸುತ್ತಿದ್ದಾರೆ. ಖುದ್ದು ಭೇಟಿ ಮಾಡಿ ಮನವಿ ಪತ್ರ, ದಾಖಲಾತಿ ನೀಡಿದರೇ ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಆಪ್ತ ಸಹಾಯಕರಿಗೆ ಪೋನ್ ಮಾಡಿದ್ರೆ ಸಚಿವರಿಗೆ ಕೊರೋನಾ ಬಂದಿದೆ ಎನ್ನುತ್ತಾರೆ. ಆದರೆ ಅದೇ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.

ಇದೆಲ್ಲ ಸರಿಯಲ್ಲ. ಪಕ್ಷದ ಶಾಸಕರಿಗೆ ಸರಿಯಾಗಿ ಸ್ಪಂದಿಸುವಂತೆ ಸಚಿವರಿಗೆ ಸ್ಪಷ್ಟ ಸೂಚನೆ ನೀಡಬೇಕು. ನಮ್ಮ ಸಚಿವರಾಗಿ ನಮಗೆ ಸುಳ್ಳು ಹೇಳುವ ವರ್ತನೆ ಸರಿಯಲ್ಲ ಎಂದು ರೇಣುಕಾಚಾರ್ಯ ತಮ್ಮ ದೂರಿನಲ್ಲಿ ಹೇಳಿದ್ದಾರಂತೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯದಲ್ಲೇ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪಕ್ಷದ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಎದುರಿನಲ್ಲೇ ಸಚಿವರುಗಳಿಗೆ ಬುದ್ಧಿ ಹೇಳುವುದಾಗಿ ಭರವಸೆ ನೀಡಿದ್ದಾರಂತೆ.

ರೇಣುಕಾಚಾರ್ಯ ಪೋನ್ ಮಾಡಿದಾಗ ಸಚಿವೆ ಶಶಿಕಲಾ ಜೊಲ್ಲೇ ಸೇರಿದಂತೆ ಹಲವು ಸಚಿವರು ಸರಿಯಾಗಿ ಸ್ಪಂದಿಸಿರಲಿಲ್ಲ. ಮಾಜಿ ಸಿಎಂ ಬಿಎಸ್ವೈಯಂತವರೇ ಸಂರ್ಪಕಕ್ಕೆ ಸಿಗುತ್ತಾರೆ ಇನ್ನು ಕೇವಲ ಸಚಿವರಾದವರ ದರ್ಪ ಸರಿಯಲ್ಲ ಎಂದು ರೇಣುಕಾಚಾರ್ಯ ಸ್ವಪಕ್ಷಿಯರೇ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಳೆದ ಸಚಿವ ಸಂಪುಟವಿಸ್ತರಣೆಯಲ್ಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ರೇಣುಕಾಚಾರ್ಯ ಗೆ ನಿರಾಸೆಯಾಗಿತ್ತು.‌ಇದಾದ ಬಳಿಕ ರೇಣುಕಾಚಾರ್ಯ ತಮ್ಮದೇ ಸರ್ಕಾರದ ಸಚಿವರುಗಳ ವಿರುದ್ಧ ಕಿಡಿಕಾರಲು ಆರಂಭಿಸಿದ್ದರು.

ಇದನ್ನೂ ಓದಿ : Puttaraju Meets Siddaramaiah : ಜೆಡಿಎಸ್ ಗೆ ಮತ್ತೊಂದು ಶಾಕ್ : ತೆನೆ ಇಳಿಸಿ ಕೈ ಹಿಡಿತಾರಾ ಸಿ.ಎಸ್.ಪುಟ್ಟರಾಜು

ಇದನ್ನೂ ಓದಿ : ಖಾಕಿ ಬಿಟ್ಟು ಖಾದಿ ತೊಡ್ತಾರಾ ಖಡಕ್ ಆಫೀಸರ್ : ಮತ್ತೆ ರವಿ ಚೆನ್ನಣ್ಣನವರ್ ಬಿಜೆಪಿ ಸೇರ್ಪಡೆ ಗಾಸಿಪ್

( MLA Renukacharya complains against 15 ministers to Karnataka state bjp president Nalin kumar)

Comments are closed.