Tecno Pova 4 : ಭಾರತದಲ್ಲಿ ಬಿಡುಗಡೆಯಾದ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಟೆಕ್ನೋ ಪೊವಾ 4

ಭಾರತದಲ್ಲಿ ಟೆಕ್ನೋ ಪೊವಾ 4 (Tecno Pova 4 ) ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ (Android Smartphone) ಬಿಡುಗಡೆಯಾಗಿದೆ. ಕೆಲವು ದಿನಗಳ ಹಿಂದೆ ಈ ಫೋನ್‌ ಬಿಡುಗಡೆಯಾಗುವ ಮುನ್ಸೂಚನೆಯನ್ನು ಟೀಸರ್‌ ಮೂಲಕ ನೀಡಿತ್ತು. ಈಗ ಬಿಡುಗಡೆಯಾಗಿರುವ ಟೆಕ್ನೋ ಪೊವಾ 4 ಗೇಮಿಂಗ್‌ ಅನ್ನು ಬೆಂಬಲಿಸಲಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇಂದು ಬಿಡುಗಡೆಯಾಗಿರುವ ಈ ಫೋನ್‌ ಡಿಸೆಂಬರ್‌ 13 ರಿಂದ ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದೆ. ಇದು ಟೀಸರ್‌ನಲ್ಲಿ ಹೇಳಿರುವಂತೆ ಮೀಡಿಯಾ ಟೆಕ್‌ ಹೀಲಿಯೊ G99 Soc ಚಿಪ್‌ಸೆಟ್‌ ಹೊಂದಿದೆ. ಗೇಮಿಂಗ್‌–ಸೆಂಟ್ರಿಕ್‌ ಚಿಪ್‌ಸೆಟ್‌ LPDDR4X ಅನ್ನು 8 GB RAM ಮತ್ತು 128GB ಇಂಟರ್‍ನಲ್‌ ಸ್ಟೋರೇಜ್‌ ನೊಂದಿಗೆ ಹೊಂದಿಸಲಾಗಿದೆ. ಇದು ಬಳಕೆದಾರರಿಗೆ ವರ್ಚುವಲ್‌ RAM ಬಳಸಿಕೊಂಡು 13 GB RAM ಪಡೆಯಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾದ ಟೆಕ್ನೋ ಪೊವಾ 4 ರೂಪಾಂತರವು 6.82-ಇಂಚಿನ HD+ LCD ಡಿಸ್ಪ್ಲೇ ಪ್ಯಾನೆಲ್ ಅನ್ನು ಪಡೆದುಕೊಂಡಿದೆ. ಇದು 1640 × 720 ಪಿಕ್ಸೆಲ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ. ಇದರ ಪರದೆಯು 180Hz ಸ್ಯಾಂಪಲ್ನಿಂಗ್‌ ದರವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 OS ನಲ್ಲಿ ಕಾರ್ಯನಿರ್ವಹಿಸುತ್ತದೆ.

ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್‌ 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇದನ್ನು 6,000 mAh ಬ್ಯಾಟರಿಯೊಂದಿಗೆ ಪ್ಯಾಕ್‌ ಮಾಡಲಾಗಿದೆ. ಇದು USB-C ಪೋರ್ಟ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದರ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಪವರ್ ಬಟನ್‌ನೊಳಗೆ ಎಂಬೆಡೆಡ್ ಆಗಿದೆ. ಇದು ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 MP ಲೆನ್ಸ್‌ದಾಗಿದೆ. ವೀಡಿಯೋ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಹೊಂದಿದೆ. ಇದು ಫೇಸ್‌ ಲಾಕ್‌ ವೈಶಿಷ್ಟ್ಯವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ :
ಟೆಕ್ನೋ ಪೊವಾ 4 ಸ್ಮಾರ್ಟ್‌ಪೋನ್‌ನ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಕಾನ್ಫಿಗರೇಶನ್‌ ಅನ್ನು 11,999 ರೂ. ಗಳಿಗೆ ಬಿಡುಗಡೆ ಮಾಡಿದೆ. ಇದನ್ನು ಡಿಸೆಂಬರ್‌ 13 ರಿಂದ ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದೆ.

ಇದನ್ನೂ ಓದಿ : Hyundai December Discounts : ಡಿಸೆಂಬರ್‌ ತಿಂಗಳಿನಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡಿದ ಹುಂಡೈ

ಇದನ್ನೂ ಓದಿ : Volkswagen Tiguan : ಫೋಕ್ಸ್‌ವ್ಯಾಗನ್‌ ಎಕ್ಸ್‌ಕ್ಲೂಸಿವ್‌ ಎಡಿಷನ್‌ ಟಿಗಾನ್‌ ಅನಾವರಣ


(Tecno Pova 4 launched in India. This gaming smartphone has helio G99 chipset and 8GB RAM etc)

Comments are closed.