Tommoc Mobile App: ಟುಮೋಕೋ ಮುಖಾಂತರ ಬಿಎಂಟಿಸಿ ಬಸ್ ಪಾಸ್

ಭಾರತವನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿರುವುದು ತಿಳಿದಿರುವ ವಿಚಾರ. ಇದೇ ನಿಲುವನ್ನಿಟ್ಟುಕೊಂಡು ಭಾರತ ಒಂದೊದೇ ಹಂತದಲ್ಲಿ ತನ್ನ ಪ್ರತಿಕ್ರಿಯೆಯನ್ನು ಮುಂದುವರಿಸಿದ್ದು, ಸ್ಮಾರ್ಟ್ ಸಾರಿಗೆ ವ್ಯವಸ್ಥೆ (Tommoc Mobile App) ಸೇರ್ಪಡೆಗೊಂಡಿದೆ.

ಮೊದಲೆಲ್ಲಾ ಬಿಎಂಟಿಸಿ ಬಸ್‌ನ ಪ್ರಯಾಣಿಕರು ಡೈಲಿ ಪಾಸ್, ವೀಕ್ಲಿ ಪಾಸ್, ಮಂಥ್ಲಿ ಪಾಸ್‌ಗೆ ಸಾಲಿನಲ್ಲಿ ನಿಂತು ಪಾಸ್‌ನ್ನು ಮಾಡಿಸಿಕೊಳ್ಳಬೇಕಿತ್ತು. ಆದರೆ ಈಗ ಬಿಎಂಟಿಸಿ ತನ್ನ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸಲು ಡಿಜಿಟಲ್ ಬಸ್ ಪಾಸ್‌ನ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ರೀತಿಯಾಗಿ ಬಿಎಂಟಿಸಿ ನಿಗಮ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿ ಸಂಚಾರ ಸರಳವಾಗಿಸಿದೆ.

ಏನಿದು ‘ಟುಮೋಕೋ’ ಮೊಬೈಲ್ ಆಪ್
ಹೌದು ‘ಟುಮೋಕೋ’ ಮೊಬೈಲ್ ಆಪ್ ಬಿಎಂಟಿಸಿ ಬಸ್ ಪಾಸ್ ಮಾಡಿಸಿಕೊಳ್ಳುವ ಭಾರತದ ಮೊದಲ “ಮಲ್ಟಿ ಮಾಡೆಲ್ ಪಬ್ಲಿಕ್ ಟ್ರಾನ್ಸ್ ಪೋರ್ಟ್” ಆಪ್ ಇದಾಗಿದೆ. ತನ್ನ ಕಾರ್ಯವನ್ನು ಬೆಂಗಳೂರು, ಹೈದರಾಬಾದ್, ಕೊಲ್ಕತ್ತಾ, ಮುಂಬೈ ಮತ್ತು ಚೆನೈನಲ್ಲಿ ‘ಟುಮೋಕೋ’ ಪ್ರಾರಂಭಿಸಿದ್ದು ಬಿಎಂಟಿಸಿ ನಿಗಮದೊಂದಿಗೆ ಕೈ ಜೋಡಿಸಿದೆ.

ಸುಗಮವಾದ ಬಿಎಂಟಿಸಿ ಪ್ರಯಾಣದ ಅನುಭವ ಪಡೆಯಲು ‘ಟುಮೋಕೋ’ ಡೌನ್ಲೋಡ್ ಮಾಡಬೇಕು. ನಂತರ ಅವಧಿಯನ್ನು ಆಯ್ಕೆ ಮಾಡಿ, ಪಾಸ್ ವಿಧಾನವನ್ನು ತೆಗೆದುಕೊಂಡು, ವೈಯಕ್ತಿಕ ವಿವರವನ್ನು ನೀಡಿ ಭಾವಚಿತ್ರ ನಮೂದಿಸಿ, ಹಣ ಪಾವತಿ ಮಾಡಬೇಕು. ಆನಂತರ ಪ್ರಯಾಣಿಸುವಾಗ ಕ್ಯೂಆರ್ ಕೋಡ್‌ನ ಸ್ಕ್ಯಾನ್ ಮಾಡಿದರೆ ಬಿಎಂಟಿಸಿಯಲ್ಲಿ ಸಂಚರಿಸಬಹುದಾಗಿದೆ.

ಟುಮೋಕೋ’ ಆಪ್‌ನ ಅನುಕೂಲಗಳೇನು?
‘ಟುಮೋಕೋ’ ಆಪ್ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದ್ದು, ಸಾಲಿನಲ್ಲಿ ಕಾಯುವ ಸಮಸ್ಯೆಯನ್ನು ತಪ್ಪಿಸಿದೆ. ಡಿಜಿಟಲ್ ಬಸ್ ಪಾಸ್ ಉಪಯುಕ್ತತೆ ಉತ್ತಮ ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದು, ಪ್ರಯಾಣಿಸುವಾಗ ಪದೇ ಪದೇ ಬಸ್ ಪಾಸ್ ತೆಗೆಯುವ ಸಂಭವ ಕಡಿಮೆಯಾಗಿದೆ.

ಈ ಆಪ್ ಬಿಎಂಟಿಸಿ ಬಸ್ ಕಂಡಕ್ಟರ್‌ಗಳ ಕೆಲಸವನ್ನು ಕಡಿಮೆ ಮಾಡಿದ್ದು, ಸಿಬ್ಬಂದಿಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಸೃಷ್ಟಿಯಾಗಿದೆ. ಕೆಲವೊಮ್ಮೆ ಪ್ರಯಾಣಿಕರು ತಾಂತ್ರಿಕವಾಗಿಯೂ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ನೂತನ ತಂತ್ರಜ್ಞಾನ ಅಳವಡಿಕೆಯಿಂದಾಗಿ ಆಗುತ್ತಿರುವ ಸಮಸ್ಯೆಗಳನ್ನು ಆದಷ್ಟು ಶೀಘ್ರದಲ್ಲಿ ಬಗೆಹರಿಸಿ ಬಿಎಂಟಿಸಿ ಪಯಣ ಸುಗಮವಾಗಿ ಸಾಗಲು ಅನುವು ಮಾಡಿ ಕೊಟ್ಟು ಉದ್ಯೋಗಿಗಳಿಗೆ, ಪ್ರಯಾಣಿಕರಿಗೆ ಈ ಯೋಜನೆ ಸಹಕಾರಿಯಾಗಬೇಕಿದೆ.


ಇದನ್ನೂ ಓದಿ:Karnataka Heavy Rain Effect : ಮಾನ್ಸೂನ್ ಮಳೆ ಅಬ್ಬರಕ್ಕೆ ತತ್ತರಿಸಿದ ಕರುನಾಡು: ರಾಜ್ಯಕ್ಕೆ ಆಗಮಿಸಲಿದೆ NDRF TEAM

ಇದನ್ನೂ ಓದಿ: What Next After SSLC or 10th : ಎಸ್‌ಎಸ್‌ಎಲ್‌ಸಿ  ನಂತರ ಮುಂದೇನು?

(Tommoc Mobile App helps to book BMTC Bus Ticket very easily)

Comments are closed.