Chetan Sharma : ವಿವಾದಗಳಿಗೆ ವಿರಾಮ ನೀಡಿ ಭಾರತ ತಂಡವನ್ನು ಅತ್ಯುತ್ತಮ ತಂಡವಾಗಿಸಲು ಸಹಕರಿಸೋಣ: ಚೇತನ್‌ ಶರ್ಮ

ಭಾರತೀಯ ಕ್ರಿಕೆಟ್‌ ತಂಡದ ಇತ್ತೀಚಿನ ಪ್ರಮುಖ ವಿವಾದಗಳಲ್ಲೊಂದು ವಿರೋಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮ (Rohit Sharma) ನಡುವಿನ ಮನಸ್ತಾಪದ ವದಂತಿ. ಕೆಲ ಮಾಧ್ಯಮ ವರದಿಗಳ ಪ್ರಕಾರ ಈ ಮನಸ್ತಾಪ ಕಳೆದ 2-3 ವರ್ಷಗಳಿಂದ ಸಾಗಿ ಬಂದಿದೆ. ಇದನ್ನು ಈ ಹಿರಿಯ ಆಟಗಾರರ ಅಭಿಮಾನಿಗಳೂ ಕೆಲ ಕಾಲದಿಂದ ಅವರ ಕೆಲ ಮೈದಾನದ ನಡವಳಿಕೆಗಳಿಂದ ಗಮನಿಸಿಕೊಂಡು ಬಂದಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದ (Indian Cricket Team) ಮುಖ್ಯ ಆಯ್ಕೆಗಾರ ಚೇತನ್‌ ಶರ್ಮ (Chetan Sharma) ಶುಕ್ರವಾರ ವರದಿಗಾರರೊಂದಿಗೆ ಮಾತನಾಡುತ್ತಾ ಕಳೆದ ವರ್ಷದ ವಿವಾದಗಳಿಗೆ ಮಂಗಳ ಹಾಡಿ ಹೊಸ ವರ್ಷವನ್ನು ಮುಕ್ತ ಮನದಿಂದ ಆರಂಭಿಸಬೇಕೆಂದು ಭಾರತೀಯ ಕ್ರಿಕಟ್‌ ಜಗತ್ತನ್ನು ಕೋರಿದ್ದಾರೆ.

ವದಂತಿಗಳು ಪ್ರಾರಂಭವಾಗಿದ್ದು ಸರಿ ಸುಮಾರು 2018ರಲ್ಲಿ ರೋಹಿತ್‌ ಶರ್ಮ ಪ್ರಪ್ರಥಮವಾಗಿ ಭಾರತೀಯ ಏಕದಿನ ಕ್ರಿಕೆಟ್‌ ತಂಡದ ನಾಯಕನ ಹೊಣೆಹೊತ್ತು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಏಷ್ಯ ಕಪ್‌ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಜಯ ತಂದು ತಂದಿತ್ತಾಗ. ರೋಹಿತ್‌ ಮತ್ತೊಮ್ಮೆ ಸೀಮಿತ ಓವರುಗಳ ಕ್ರಿಕೆಟ್‌ ತಂಡದ ನಾಯಕರಾಗಿ ಆಯ್ಕೆಯಾದಾಗ ಈ ವಿವಾದಕ್ಕೆ ಮರುಜೀವ ಸಿಕ್ಕಿತು.

ವಿರಾಟ್‌ ಮತ್ತು ರೋಹಿತ್‌ ಇಬ್ಬರನ್ನೂ ಒಟ್ಟಿಗೆ ಸೇರಿಸಿ ವಿವಾದ ಬಗೆಹರಿಸಲು ಪ್ರಯತ್ನಿಸಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಚೇತನ್‌ ಶರ್ಮ “ಅಂತಹದೇನೂ ಅವರಿಬ್ಬರ ನಡುವೆ ಇಲ್ಲ, ಇವೆಲ್ಲಾ ವದಂತಿಗಳಷ್ಟೇ, ನಾವೆಲ್ಲಾ ಮೊದಲಿಗೆ ಕ್ರಿಕೆಟಿಗರು ನಂತರ ಆಯ್ಕೆಗಾರರು ಎಂದು ಅವರು ತಿಳಿಸಿದರು.

ಭಾರತದ ಮಾಜಿ ಆಟಗಾರ ಚೇತನ್‌ ಶರ್ಮ (Chetan Sharma) ಮುಂದುವರೆದು “ಅವರಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದ್ದು ಭಾರತೀಯ ಕ್ರಿಕೆಟ್‌ನ ಭವಿಷ್ಯದ ಬಗ್ಗೆಯೂ ಕಾಳಜಿಯಿದೆ ಎಂದರಲ್ಲದೇ ಇವರಿಬ್ಬರೂ ಒಟ್ಟಿಗೆ ಭಾರತೀಯ ಕ್ರಿಕೆಟ್‌ನ ಒಳಿತಿಗಾಗಿ ಶ್ರಮಿಸುತ್ತಿರುವುದು ನನಗೆ ಅತೀವ ಆನಂದ ತಂದಿದೆ” ಎಂದರು. ಕೆಲವೊಮ್ಮ ಇಂತಹ ಕಪೋಲಕಲ್ಪಿತ ವರದಿಗಳು ನಗು ತರಿಸುತ್ತಿವೆ, ನೀವು ನನ್ನ ಸ್ಥಾನದಲ್ಲಿದ್ದಿದ್ದರೆ ಅವರಿಬ್ಬರೂ ಹೇಗೆ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದಾರೆಂದು ನೋಡಿದ್ದರೆ ನೀವೂ ಸಹ ನನ್ನಂತೆಯೇ ಆನಂದಿಸುತ್ತಿದ್ದಿರಿ ಎಂದು ಚೇತನ್ನ ಶರ್ಮ ಹೇಳಿದರು.

ಇದರ ಕಲ್ಪನೆಯಿಲ್ಲದ ಜನ ಈ ರೀತಿಯ ವಿವಾದಗಳನ್ನು ಹುಟ್ಟುಹಾಕಿದಾಗ ವಿಷಾದ ಉಂಟಾಗುತ್ತದೆ ಎಂದರು. ಆದ್ದರಿಂದ, ಇನ್ನು ಮುಂದಾದರು ವಿವಾದಗಳಿಗೆ ಕೊನೆ ಹಾಡಿ ಅವರಿಬ್ಬರೂ ಒಂದು ತಂಡವಾಗಿ ಕಾರ್ಯ ನಿರ್ವಹಿಸಲು ಸಹಕರಿಸೋಣ ಎಂದರು.

ಇದನ್ನೂ ಓದಿ: KL Rahul as captain : ದಕ್ಷಿಣ ಆಫ್ರಿಕಾ ಸರಣಿಗೆ ಕೆ.ಎಲ್.‌ ರಾಹುಲ್‌ ನಾಯಕ, ರಾಹುಲ್‌ ನಾಯಕತ್ವದಲ್ಲಿ ಆಡಲಿದ್ದಾರೆ ಕೊಯ್ಲಿ

ಇದನ್ನೂ ಓದಿ: Sachin Tendulkar : ಉಡುಪಿ ಮೂಲದವರಂತೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​​

Chetan Sharma asks Indian cricketing fraternity to leave behind the controversies

Comments are closed.