Ranji Trophy Karnataka : ಕರ್ನಾಟಕಕ್ಕೆ ಸರ್ವಿಸಸ್ ಮೊದಲ ಎದುರಾಳಿ : ಮೊದಲೆರಡು ಪಂದ್ಯಗಳಿಗೆ ಬೆಂಗಳೂರು ಆತಿಥ್ಯ

ಬೆಂಗಳೂರು : ರಣಜಿ ಟ್ರೋಫಿ 2022-23 (Ranji Trophy Karnataka) ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ತನ್ನ ಮೊದಲ ಪಂದ್ಯದಲ್ಲಿ ಸರ್ವಿಸಸ್ ತಂಡವನ್ನು ಎದುರಿಸಲಿದೆ.

ಕರ್ನಾಟಕ ಮತ್ತು ಸರ್ವಿಸಸ್ ನಡುವಿನ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಾಂಡಿಚೇರಿ ವಿರುದ್ಧದ 2ನೇ ಪಂದ್ಯವನ್ನೂ ಕರ್ನಾಟಕ ತವರು ನೆಲದಲ್ಲೇ ಆಡಲಿದೆ. ಕರ್ನಾಟಕ ತಂಡ ಈ ಬಾರಿ ಸರ್ವಿಸಸ್, ಪಾಂಡಿಚೇರಿ, ಗೋವಾ, ಛತ್ತೀಸ್’ಗಢ, ರಾಜಸ್ಥಾನ, ಕೇರಳ ಹಾಗೂ ಜಾರ್ಖಂಡ್ ತಂಡಗಳ ಜೊತೆ ಎಲೈಟ್ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಕರ್ನಾಟಕ ತಂಡ ಕಳೆದ 7 ವರ್ಷಗಳಿಂದ ರಣಜಿ ಟ್ರೋಫಿ ಗೆದ್ದಿಲ್ಲ. 2014-15ರಲ್ಲಿ ಆರ್.ವಿನಯ್ ಕುಮಾರ್ ನಾಯಕತ್ವದಲ್ಲಿ ರಾಜ್ಯ ತಂಡ ಕೊನೆಯ ಬಾರಿ ರಣಜಿ ಚಾಂಪಿಯನ್ ಆಗಿತ್ತು. ನಂತರ ಸತತ 7 ವರ್ಷಗಳಿಂದ ಒಮ್ಮೆಯೂ ಫೈನಲ್ ತಲುಪಿಲ್ಲ.

ಈ ಬಾರಿಯ ದೇಶೀಯ ಕ್ರಿಕೆಟ್’ನಲ್ಲಿ ಕರ್ನಾಟಕ ತಂಡವನ್ನು ಟೀಮ್ ಇಂಡಿಯಾ ಟೆಸ್ಟ್ ಆಟಗಾರ ಮಯಾಂಕ್ ಅಗರ್ವಾಲ್ (Mayank Agarwal) ಮುನ್ನಡೆಸುತ್ತಿದ್ದಾರೆ. ಮಯಾಂಕ್ ಸಾರಥ್ಯದಲ್ಲಿ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 (Syed Mushtaq Ali T20) ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್’ನಲ್ಲಿ ಸೋಲು ಕಂಡಿದ್ರೆ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಏಕದಿನ ಟೂರ್ನಿಯಲ್ಲಿ ಸೆಮಿಫೈನಲ್’ನಲ್ಲಿ ಮುಗ್ಗರಿಸಿತ್ತು.

ಇದನ್ನೂ ಓದಿ : IPLಗೆ ನಿವೃತ್ತಿ ಘೋಷಿಸಿದ ಡ್ವೇನ್ ಬ್ರಾವೋ : ಬೌಲಿಂಗ್ ಕೋಚ್ ಆಗಿ ನೇಮಿಸಿದ CSK

ಇದನ್ನೂ ಓದಿ : Pro Kabaddi 2023 Playoff : ಟಾಪ್-2 ಟೀಮ್‌ಗೆ ಡೆರೆಕ್ಟ್ ಸೆಮಿಫೈನಲ್ ಎಂಟ್ರಿ, ಹೀಗಿರಲಿದೆ ಪ್ಲೇ ಆಫ್ ಫೈಟ್

ಇದನ್ನೂ ಓದಿ : ಭಾರತಕ್ಕೆ ನೆಟ್ ಬೌಲರ್ ಆಗಿದ್ದಾತ ಇಂದು ಪಾಕಿಸ್ತಾನದ ಬೆಂಕಿ ಬೌಲರ್

ರಣಜಿ ಟ್ರೋಫಿ 2022-23: ಕರ್ನಾಟಕ ತಂಡದ ವೇಳಾಪಟ್ಟಿ (Ranji Trophy Karnataka) :

  • ಡಿಸೆಂಬರ್ 13-16 Vs ಸರ್ವಿಸಸ್; ಬೆಂಗಳೂರು
  • ಡಿಸೆಂಬರ್ 20-23 Vs ಪಾಂಡಿಚೇರಿ; ಬೆಂಗಳೂರು
  • ಡಿಸೆಂಬರ್ 27-30 Vs ಗೋವಾ, ಪೊರ್ವರಿಮ್
  • ಜನವರಿ 03-06 Vs ಛತ್ತೀಸ್’ಗಢ, ರಾಯ್ಪುರ
  • ಜನವರಿ 10-13 Vs ರಾಜಸ್ಥಾನ
  • ಜನವರಿ 17-20 Vs ಕೇರಳ, ಥುಂಬಾ
  • ಜನವರಿ 24-27 Vs ಜಾರ್ಖಂಡ್

Ranji Trophy Karnataka : Services first opponent for Karnataka; Bangalore hosts the first two matches

Comments are closed.