ಆಪಲ್‌ ಐಪೋನ್‌ 16 ನಿಂದ ಸ್ಯಾಮಸಂಗ್‌ ಗ್ಯಾಲಕ್ಸಿ ಎಸ್‌ 24 ವರೆಗೆ : 2024ರಲ್ಲಿ ಬಿಡುಗಡೆ ಆಗಲಿವೆ ಈ ಟಾಪ್ 5 ಸ್ಮಾರ್ಟ್‌ಫೋನ್

Upcoming Smartphones in 2024 : Samsung Galaxy S24, Apple iPhone 16, OnePlus 12, Xiaomi 14 Pro ಮತ್ತು Vivo X100 ಸರಣಿಗಳು 2024 ರ ಕೆಲವು ನಿರೀಕ್ಷಿತ ಸ್ಮಾರ್ಟ್‌ಫೋನ್ ಬಿಡುಗಡೆಗಳಾಗಿವೆ.

Upcoming Smartphones in 2024 : ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಪೋನ್‌ಗಳು ಲಗ್ಗೆ ಇಡಲು ಸಜ್ಜಾಗಿವೆ. ಆಪಲ್ ಐಪೋನ್‌ 16  (Apple iPhone 16), ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌24 (Samsung Galaxy S24), ರೆಡ್‌ಮೀ 14 ಪ್ರೋ (Xiaomi 14 Pro) , ಒನ್‌ ಪ್ಲಸ್‌ 12 (OnePlus 12), ವಿವೋ X100 (Vivo X100) ಕಂಪೆನಿಗಳು ವಿವಿಧ ಮಾದರಿಯ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಲಿವೆ. 2024ರಲ್ಲಿ ಭಾರತದಲ್ಲಿ ಬಿಡುಗಡೆ ಆಗಲಿರುವ ಸ್ಮಾರ್ಟ್‌ಪೋನ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Upcoming  Smartphones in 2024 Samsung Galaxy S24 Apple iPhone 16, OnePlus 12, Xiaomi 14 Pro Vivo X100
Image Credit to Original Source

ಆಪಲ್‌ ಐಪೋನ್‌ 16(Apple iPhone 16 ) ಸರಣಿ

ಆಪಲ್‌ (Apple)ಕಂಪೆನಿಯು ತನ್ನ ಪ್ರಮುಖ ಐಪೋನ್‌ 16 (iPhone16) ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಮಾಡಲಾಗಿದೆ. ಗ್ರಾಹಕರು ಹೊಸ ಸರಣಿಯ ಸ್ಮಾರ್ಟ್‌ಪೋನ್‌ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಆದರೆ ಈ ಸ್ಮಾರ್ಟ್‌ ಪೋನ್‌ ಬಿಡುಗಡೆಯ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಐಪೋನ್‌ ಕಂಪೆನಿಯು ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ನವೆಂಬರ್‌ನಲ್ಲಿ ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ನ್‌ಮ್ಯಾನ್ ಅವರ ವರದಿಯು ಕ್ಯುಪರ್ಟಿನೋ-ಆಧಾರಿತ ಟೆಕ್ ದೈತ್ಯ ಅನೇಕ ಹೊಸ ಹಾರ್ಡ್‌ವೇರ್ ಪ್ರಗತಿಗಳನ್ನು ತರದೇ ಇರಬಹುದು, ಬದಲಿಗೆ ಹೊಸ ಗ್ರಾಹಕರನ್ನು ಆಕರ್ಷಿಸಲು iOS 18 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಸಾಫ್ಟ್‌ವೇರ್ ವಿಭಾಗದಲ್ಲಿ ಉತ್ಪಾದಕ AI-ಆಧಾರಿತ ನವೀಕರಣಗಳನ್ನು ಅವಲಂಬಿಸಿದೆ ಎಂದು ಸೂಚಿಸಿದೆ.

Upcoming  Smartphones in 2024 Samsung Galaxy S24 Apple iPhone 16, OnePlus 12, Xiaomi 14 Pro Vivo X100
Image Credit to Original Source

ಒನ್‌ ಪ್ಲಸ್‌ 12 (OnePlus 12)

ಭಾರತದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಒನ್‌ ಪ್ಲಸ್‌ ಕಂಪೆನಿ ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ಪೋನ್‌ ಒನ್‌ ಪ್ಲಸ್‌ 12(OnePlus 12) ಮಾದರಿಯ ಮೊಬೈಲ್‌ ಅನ್ನು ಚೀನಾದಲ್ಲಿ ಈಗಾಗಲೇ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಜನವರಿ ತಿಂಗಳಿನಲ್ಲಿ ಈ ಸ್ಮಾರ್ಟ್‌ಪೋನ್‌ ಬಿಡುಗಡೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಯಾಗಿರುವ ಒನ್‌ಪ್ಲಸ್‌ OnePlus 12R ಜೊತೆಗೆ OnePlus 12 ಮಾದರಿಯನ್ನು ಏಕಕಾಲದಲ್ಲಿ ಬಿಡುಗಡೆ ಮಾಡಲಿದೆ. 120Hz ಮತ್ತು HDR10+ ಬೆಂಬಲದ ರಿಫ್ರೆಶ್ ದರದೊಂದಿಗೆ, OnePlus 12 Fluid AMOLED ತಂತ್ರಜ್ಞಾನವನ್ನು ಒಳಗೊಂಡಿದೆ. ಅಲ್ಲದೇ 6.82-ಇಂಚಿನ ಡಿಸ್ಪ್ಲೇ ಜೊತೆಗೆ ರೆಸಲ್ಯೂಶನ್ ಗರಿಗರಿಯಾದ 1440 x 3168 ಪಿಕ್ಸೆಲ್‌ಗಳು, ಪ್ರತಿ ಇಂಚಿಗೆ 557 ಪಿಕ್ಸೆಲ್‌ಗಳ ಪಿಕ್ಸೆಲ್ ,ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ ಗ್ಲಾಸ್‌ ಹೊಂದಿದೆ.

ಇನ್ನು ಒನ್‌ ಪ್ಲಸ್‌ ಹೊಸ ಮಾದರಿಯು Qualcomm Snapdragon 8 Gen 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ CPU 3.2GHz ನಲ್ಲಿ ಪ್ರೈಮ್ ಕೋರ್ ಅನ್ನು ಹೊಂದಿರುವ ಕ್ರಿಯೋ 780 ಆರ್ಕಿಟೆಕ್ಚರ್ ಅನ್ನು ಹೊಂದಿದೆ, ಮೂರು ಗೋಲ್ಡ್ ಕೋರ್‌ಗಳು 2.7GHz ನಲ್ಲಿ ಮತ್ತು ನಾಲ್ಕು ಸಿಲ್ವರ್ ಕೋರ್‌ಗಳನ್ನು 2.0GHz ನಲ್ಲಿ ಕ್ಲಾಕ್ ಮಾಡಲಾಗಿದೆ. ಮೃದುವಾದ ಗ್ರಾಫಿಕ್ಸ್ ಕಾರ್ಯಕ್ಷಮತೆಗಾಗಿ Adreno 730 ಗ್ರಾಫಿಕ್ಸ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ.

Upcoming  Smartphones in 2024 Samsung Galaxy S24 Apple iPhone 16, OnePlus 12, Xiaomi 14 Pro Vivo X100
Image Credit to Original Source

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24(Samsung Galaxy S24):

ಕೊರಿಯಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಯಾಗಿರುವ ಸ್ಯಾಮ್‌ಸಂಗ್‌ ತನ್ನ ಮುಂಬರುವ ಸ್ಮಾರ್ಟ್‌ಪೋನ್‌ ಆವೃತ್ತಿಯನ್ನು ಈಗಾಗಲೇ ಘೋಷಣೆ ಮಾಡಿದೆ. ಅಲ್ಲದೇ Samsung Galaxy S24 ಬಿಡುಗಡೆಯು ಜನವರಿ 17, 2024 ರಂದು ನಡೆಯಬಹುದು ಎಂದು ಹೇಳಲಾಗುತ್ತಿದೆ.

ಹಿಂದಿನ ವರದಿಗಳು S24 ಸರಣಿಯ ಬಿಡುಗಡೆಗೆ ಮುಂಚಿತವಾಗಿ, ಸ್ಯಾಮ್‌ಸಂಗ್ ಯುಕೆ ಮತ್ತು ಯುರೋಪ್‌ನಲ್ಲಿ ‘AI ಫೋನ್’ ಮತ್ತು ‘AI ಸ್ಮಾರ್ಟ್‌ಫೋನ್’ ಸೇರಿದಂತೆ ಹಲವಾರು ಕೃತಕ ಬುದ್ಧಿಮತ್ತೆ-ಸಂಬಂಧಿತ ಟ್ರೇಡ್‌ಮಾರ್ಕ್‌ಗಳಿಗೆ ಅರ್ಜಿ ಸಲ್ಲಿಸಿದೆ, AI- ಸಂಬಂಧಿತ ವೈಶಿಷ್ಟ್ಯತೆಗಳು ಈ ಹೊಸ ಪೋನ್‌ನಲ್ಲಿ ಒಳಗೊಂಡಿರಬಹುದು.

ಇದನ್ನೂ ಓದಿ : Redmi Note 13 5G : ಅತ್ಯಂತ ಕಡಿಮೆ ಬೆಲೆ ಭಾರತದ ಮಾರುಕಟ್ಟೆಗೆ ಎಂಟ್ರಿಯಾಗಲಿದೆ ರೆಡ್ ಮೀ ನೋಟ್‌ 13 5ಜಿ ಮೊಬೈಲ್‌, ಏನಿದರ ವಿಶೇಷತೆ ?

Upcoming  Smartphones in 2024 Samsung Galaxy S24 Apple iPhone 16, OnePlus 12, Xiaomi 14 Pro Vivo X100
Image Credit to Original Source

ಶಿಯೋಮಿ 14 ಪ್ರೋ (Xiaomi 14 Pro):

ಮತ್ತೊಂದು ಚೀನಾ ಮೂಲದ ಸ್ಮಾರ್ಟ್‌ಪೋನ್‌ ಕಂಪೆನಿಯಾಗಿರುವ ಶಿಯೋಮಿ 14 ಪ್ರೋ (Xiaomi 14 Pro)ಮಾದರಿಯ ಸ್ಮಾರ್ಟ್‌ ಪೋನ್‌ ಬಿಡುಗಡೆ ಘೋಷಣೆ ಮಾಡಿದೆ. ಫೆಬ್ರವರಿ ತಿಂಗಳಿನಲ್ಲಿ ಈ ಸ್ಮಾರ್ಟ್‌ಪೋನ್‌ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಶಿಯೋಮಿ 14 ಪ್ರೋ (Xiaomi 14 Pro) ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 3 ಪ್ರೊಸೆಸರ್ ಅನ್ನು ಒಳಗೊಂಡಿದೆ ಮತ್ತು WQHD + ರೆಸಲ್ಯೂಶನ್ ಹೊಂದಿರುವ 6.7-ಇಂಚಿನ ಡಿಸ್ಪ್ಲೇ, 3,000 nits ನ ಗರಿಷ್ಠ ಹೊಳಪು ಮತ್ತು 522ppi ಪಿಕ್ಸೆಲ್ ಹೊಂದಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ 120W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4880mAh ಬ್ಯಾಟರಿಯನ್ನು ಒಳಗೊಂಡಿದೆ.

ಶಿಯೋಮಿ 14 ಪ್ರೋ 50MP ಕ್ಯಾಮೆರಾ ಒಳಗೊಂಡಿದ್ದು, ಫ್ಲಾಶ್‌ಲೈಟ್‌ ಜೊತೆಗೆ f/1.42 – f/4.0 ವೇರಿಯಬಲ್ ಅಪರ್ಚರ್‌ ಒಳಗೊಂಡಿದೆ. ಕ್ಯಾಮೆರಾಗಳಲ್ಲಿ 50MP ಟೆಲಿಫೋಟೋ ಲೆನ್ಸ್, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 32MP ಸೆಲ್ಫಿ ಶೂಟ್‌ ಮಾಡಬಹುದಾಗಿದೆ.

ಇದನ್ನೂ ಓದಿ : Oppo A59 5G : ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂತು ಒಪ್ಪೋ A59 5G ಸ್ಮಾರ್ಟ್‌ಪೋನ್‌

Upcoming  Smartphones in 2024 Samsung Galaxy S24 Apple iPhone 16, OnePlus 12, Xiaomi 14 Pro Vivo X100
Image Credit to Original Source

ವಿವೋ ಎಕ್ಸ್‌ 100 (Vivo X100 ) ಸರಣಿ:

ವಿವೋ (Vivo) ಕಂಪೆನಿಯು ತನ್ನ ವಿವೋ ಎಕ್ಸ್‌ 100 (Vivo X100) ಮತ್ತು ವಿವೋ ಎಕ್ಸ್‌ 100 (Vivo X100 Pro) ಸ್ಮಾರ್ಟ್‌ಫೋನ್‌ ಗಳನ್ನು ಜನವರಿ 4, 2024 ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪೆನಿಯು ಘೋಷಣೆ ಮಾಡಿದೆ. ವಿವೋ ಕಂಪೆನಿಯ ಎರಡು ಸ್ಮಾರ್ಟ್‌ಪೋನ್‌ಗಳನ್ನು ಭಾರತದಲ್ಲಿ ನವೆಂಬರ್‌ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು.

Vivo X100 ಮತ್ತು X100 Pro ಸರಣಿಗಳು ಎರಡೂ 4-ನ್ಯಾನೊಮೀಟರ್ ಪ್ರಕ್ರಿಯೆಯ ಆಧಾರದ ಮೇಲೆ MediaTek ಡೈಮೆನ್ಸಿಟಿ 9300 ಪ್ರೊಸೆಸರ್‌ನಿಂದ ಚಾಲಿತವಾಗಿವೆ. ಅಲ್ಲದೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್, 2,160Hz PWM ಮಬ್ಬಾಗಿಸುವಿಕೆ ಮತ್ತು 300 ಗರಿಷ್ಟ ಹೊಳಪಿನ ಬೆಂಬಲದೊಂದಿಗೆ 6.78-ಇಂಚಿನ ಬಾಗಿದ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಇದನ್ನೂ ಓದಿ : ಹೊಸ ವರ್ಷ 2024ಕ್ಕೆ ಏರ್‌ಟೆಲ್ ಬಿಗ್ ಆಫರ್ : ಕೇವಲ 148 ರೂ. ರಿಚಾರ್ಜ್‌ನಲ್ಲಿ ಡೇಟಾ, ಜೊತೆ 15 ಕ್ಕೂ ಹೆಚ್ಚು OTT ಉಚಿತ

Upcoming  Smartphones in 2024 Samsung Galaxy S24 Apple iPhone 16, OnePlus 12, Xiaomi 14 Pro Vivo X100

Comments are closed.