ಹೊಸ ವರ್ಷ 2024ಕ್ಕೆ ಏರ್‌ಟೆಲ್ ಬಿಗ್ ಆಫರ್ : ಕೇವಲ 148 ರೂ. ರಿಚಾರ್ಜ್‌ನಲ್ಲಿ ಡೇಟಾ, ಜೊತೆ 15 ಕ್ಕೂ ಹೆಚ್ಚು OTT ಉಚಿತ

New Year 2024 Airtel Big Offer :ಏರ್‌ಟೆಲ್‌ ತನ್ನ ಗ್ರಾಹಕರಿಗಾಗಿಯೇ ವಿಶೇಷ ಏರ್‌ಟೆಲ್‌ 148 ರೂ. ಪ್ರಿಪೇಯ್ಡ್ (Airtel 148rs Recharge Plan) ಯೋಜನೆಯು ಘೋಷಿಸಿದೆ. ಡೇಟಾ ಜೊತೆಗೆ 15 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳನ್ನು ಉಚಿತವಾಗಿ ನೀಡಲಿದೆ.

New Year 2024 Airtel Big Offer : ಹೊಸ ವರ್ಷ ಆರಂಭವಾಗಿದೆ. ಈ ಹೊತ್ತಲ್ಲೇ ಭಾರತ ಪ್ರಮುಖ ಟೆಲಿಕಾಂ ಕಂಪೆನಿ ಏರ್‌ಟೆಲ್‌ ಹೊಸ ಯೋಜನೆಯನ್ನು ಘೋಷಣೆ ಮಾಡಿದೆ. ಅದ್ರಲ್ಲೂ ಏರ್‌ಟೆಲ್‌ ತನ್ನ ಗ್ರಾಹಕರಿಗಾಗಿಯೇ ವಿಶೇಷ ಏರ್‌ಟೆಲ್‌ 148 ರೂ. ಪ್ರಿಪೇಯ್ಡ್ (Airtel 148rs Recharge Plan) ಯೋಜನೆಯು ಘೋಷಿಸಿದೆ. ಡೇಟಾ ಜೊತೆಗೆ 15 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳನ್ನು ಉಚಿತವಾಗಿ ನೀಡಲಿದೆ.

New Year 2024 Airtel Big Offer Airtel Rs 148 Special Recharge Plan Data and 15 Ott free
Image Credit to Original Source

ಏರ್‌ಟೇಲ್‌ ಆಗಾಗ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಹೊಸ ವರ್ಷಾಚರಣೆಗೆ ತನ್ನ ಗ್ರಾಹಕರಿಗೆ ಒಟಿಟಿ ಸೇವೆಗಳನ್ನು ಉಚಿತವಾಗಿ ಘೋಷಣೆ ಮಾಡಿದೆ. ಒಟಿಟಿ ಆಪ್‌ಗಳ ಮೂಲಕ ಗ್ರಾಹಕರು ಚಲನಚಿತ್ರ, ವೆಬ್‌ ಸೀರಿಸ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಮಾಸಿಕ, ವಾರ್ಷಿಕವಾಗಿ ಒಟಿಟಿ ಆಪ್‌ಗಳಿಗೆ ದುಬಾರಿ ಹಣ ಪಾವತಿಸುತ್ತಿರುವ ಜನರಿಗೆ ಏರ್‌ಟೆಲ್‌ ಅನುಕೂಲ ಕಲ್ಪಿಸಿದೆ.

ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ಬಾರ್ತಿ ಏರ್‌ಟೆಲ್‌ನ 148 ರೂ. ರಿಚಾರ್ಜ್‌ ಯೋಜನೆಯು ಗ್ರಾಹಕರಿಗೆ ಹಲವು ರೀತಿಯಲ್ಲಿಯೂ ಅನುಕೂಲಕರವಾಗಿದೆ. ಒಂದೊಮ್ಮೆ ಏರ್‌ಟೆಲ್‌ ಯೋಜನೆಗೆ ನೀವು ಹೊಸಬರಾಗಿದ್ದರೆ ಒಟಿಟಿ ಯೋಜನೆ ನಿಮಗೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ. ಅಷ್ಟೇ ಅಲ್ಲದೇ ಹಳೆಯ ಗ್ರಾಹಕರಿಗೂ ಲಾಭದಾಯಕವಾಗಿರಲಿದೆ.

ಇದನ್ನೂ ಓದಿ : Oppo A59 5G : ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂತು ಒಪ್ಪೋ A59 5G ಸ್ಮಾರ್ಟ್‌ಪೋನ್‌

ಏರ್‌ಟೆಲ್ ರೂ 148 ಪ್ರಿಪೇಯ್ಡ್ ಯೋಜನೆಯು ಬಳಕೆದಾರರಿಗೆ ಡೇಟಾವನ್ನು ಹೊರತುಪಡಿಸಿ 15 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಏರ್‌ಟೆಲ್ 148 ಪ್ಲಾನ್‌ನಲ್ಲಿ ತನ್ನ ಗ್ರಾಹಕರಿಗೆ ಏರ್‌ಟೆಲ್‌ 15 GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ನೀಡಲಿದೆ.

ಅಷ್ಟೇ ಅಲ್ಲದೇ ಡೇಟಾ ಜೊತೆಗೆ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ, ನೀವು Sony LIV, Lionsgate Play, Fancode, Eras Now, Hoichoi ಮತ್ತು Manorama Max ನಂತಹ OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ. ಈ ಯೋಜನೆಯೊಂದಿಗೆ 15 GB ಡೇಟಾ ಲಭ್ಯವಿದೆ, ಆದರೆ ಡೇಟಾ ಮುಗಿದ ನಂತರ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ.

ಇದನ್ನೂ ಓದಿ : 50MP ಕ್ಯಾಮೆರಾ, 5,000mAh ಬ್ಯಾಟರಿ : ಕೇವಲ 6,799 ರೂ.ಗೆ ಸಿಗುತ್ತೆ ರೆಡ್‌ಮೀ 12C ಸ್ಮಾರ್ಟ್‌ಫೋನ್

ಈ ಯೋಜನೆಯಲ್ಲಿ ಕೇವಲ ಡೇಟಾ ಪ್ಯಾಕ್‌ ಮಾತ್ರವೇ ಗ್ರಾಹಕರಿಗೆ ದೊರೆಯಲಿದೆ. ಆದರೆ ಕರೆ ಮಾಡುವ ಅಥವಾ ಎಸ್‌ಎಂಎಸ್‌ ಪ್ಯಾಕ್‌ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಹೊಸ ಗ್ರಾಹಕರು ಹೊಸದಾಗಿ ರಿಚಾರ್ಜ್‌ ಮಾಡಬೇಕಾಗಿದೆ. ಆದರೆ ಹಳೆಯ ಗ್ರಾಹಕರಿಗೆ ಅಸ್ತಿತ್ವದಲ್ಲಿರುವ ಯೋಜನೆ ಮಾನ್ಯತೆಗೆ ಸಮನಾಗಿರುತ್ತದೆ.

New Year 2024 Airtel Big Offer Airtel Rs 148 Special Recharge Plan Data and 15 Ott free
Image Credit to Original Source

ನಿಮ್ಮ ಹಾಲಿ ಯೋಜನೆಯ ವ್ಯಾಲಿಡಿಟಿ ಫೆಬ್ರವರಿಯ ವರೆಗೆ ಇದ್ದಾಗ, ನೀವು ಈ ಯೋಜನೆಯನ್ನು ಖರೀದಿಸಿದ್ರೆ ಈ ಯೋಜನೆಯು 1 ಫೆಬ್ರವರಿ 2024 ರವರೆಗೆ ಮಾನ್ಯವಾಗಿರುತ್ತದೆ. ಏರ್‌ಟೆಲ್‌ಗೆ ಪೈಪೋಟಿ ನೀಡಲು ರಿಲಯನ್ಸ್ ಜಿಯೋ ರೂ. 148 ಡೇಟಾ ಯೋಜನೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ನೀವು 15 ಬದಲಿಗೆ 10 GB ಡೇಟಾವನ್ನು ಪಡೆಯುತ್ತೀರಿ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ದುರ್ಬಳಕೆ ಆಗ್ತಾ ಇದ್ಯಾ ? ಪತ್ತೆ ಹಚ್ಚುವುದು ಬಹಳ ಸುಲಭ, ಯಾವುದಕ್ಕೂ ಒಮ್ಮೆ ಚೆಕ್‌ ಮಾಡಿ

12 OTT ಅಪ್ಲಿಕೇಶನ್‌ಗಳನ್ನು Jio ಅಧಿಕೃತ ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು Sony Liv, Zee5, Jio Cinema Premium, Lionsgate Play, Discovery Plus, S Next, Epic ON ನಂತಹ OTT ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಒಳಗೊಂಡಿದೆ.

New Year 2024 Airtel Big Offer Airtel Rs 148 Special Recharge Plan Data and 15 Ott free

Comments are closed.