ವಿವೋ X300 FE ಅಬ್ಬಬ್ಬಾ ಎಂತಹಾ ಫೀಚರ್ಸ್ ! 6500mAh ಬ್ಯಾಟರಿ, 50MP ಸೋನಿ IMX921 ZEISS ಕ್ಯಾಮೆರಾ
Vivo X300 FE : ಟೆಕ್ ಜಗತ್ತಿನಲ್ಲಿ ಈಗ ಎಲ್ಲೇ ನೋಡಿದರೂ ವಿವೋ X300 FE ಸ್ಮಾರ್ಟ್ಪೋನ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕಾಂಪ್ಯಾಕ್ಟ್ ಡಿಸೈನ್ ಇಷ್ಟಪಡುವವರಿಗಾಗಿ ವಿವೋ ಕಂಪನಿಯು ವಿವೋ ಎಕ್ಸ್ 300 ಎಫ್ ಇ ಮಾದರಿಯ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Vivo X300 FE : ಟೆಕ್ ಜಗತ್ತಿನಲ್ಲಿ ಈಗ ಎಲ್ಲೇ ನೋಡಿದರೂ ವಿವೋ X300 FE ಸ್ಮಾರ್ಟ್ಪೋನ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕಾಂಪ್ಯಾಕ್ಟ್ ಡಿಸೈನ್ ಇಷ್ಟಪಡುವವರಿಗಾಗಿ ವಿವೋ ಕಂಪನಿಯು ವಿವೋ ಎಕ್ಸ್ 300 ಎಫ್ ಇ ಮಾದರಿಯ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕೇವಲ 6.31 ಇಂಚಿನ ಡಿಸ್ಪ್ಲೇಯಲ್ಲೇ ಇಡೀ ಜಗತ್ತನ್ನೇ ಅಡಗಿಸಿಟ್ಟಿರುವ ಈ ಫೋನ್ನ ಫೀಚರ್ಸ್ ಸದ್ಯ ಲೀಕ್ ಆಗಿದ್ದು, ಗ್ರಾಹಕರು ಫಿದಾ ಆಗಿದ್ದಾರೆ.
Vivo X300 FE : ಕಾಂಪ್ಯಾಕ್ಟ್ ಬಾಡಿಯಲ್ಲಿ ಬೃಹತ್ ಬ್ಯಾಟರಿ
ಸಾಮಾನ್ಯವಾಗಿ ಚಿಕ್ಕ ಫೋನ್ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಕಡಿಮೆ ಇರುತ್ತದೆ. ಆದರೆ ವಿವೋ ಇಲ್ಲಿ ಮ್ಯಾಜಿಕ್ ಮಾಡಿದೆ. ಕೇವಲ 8.1mm ತೆಳುವಾದ ಈ ಫೋನ್ನಲ್ಲಿ 6,500mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಲಾಗಿದೆ. ಇದರೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್ಲೆಸ್ ಚಾರ್ಜಿಂಗ್ ಸೌಲಭ್ಯವಿದ್ದು, ಕೇವಲ ಕೆಲವೇ ನಿಮಿಷಗಳಲ್ಲಿ ಫೋನ್ ಫುಲ್ ಚಾರ್ಜ್ ಆಗಲಿದೆ.
Vivo X300 FE : ಪ್ರೊಫೆಷನಲ್ ಝೈಸ್ (ZEISS) ಕ್ಯಾಮೆರಾ ಸೆಟಪ್
ಫೋಟೋಗ್ರಫಿ ಪ್ರಿಯರಿಗಾಗಿ ಇದರಲ್ಲಿ 50MP ಸೋನಿ IMX921 ZEISS ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ನೀಡಲಾಗಿದ್ದು, ಇದು 3x ಆಪ್ಟಿಕಲ್ ಜೂಮ್ ಬೆಂಬಲಿಸುತ್ತದೆ. ವಿಶೇಷವೆಂದರೆ, ವಿವೋ ಈ ಬಾರಿ ‘ZEISS ಟೆಲಿಫೋಟೋ ಎಕ್ಸ್ಟೆಂಡರ್ ಕಿಟ್’ ಸಪೋರ್ಟ್ ನೀಡುತ್ತಿದ್ದು, ವೃತ್ತಿಪರ ಕ್ಯಾಮೆರಾದಂತೆ ದೂರದ ದೃಶ್ಯಗಳನ್ನು ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿಯಬಹುದು.
Also Read : Vivo T5 Pro 5G : ವಿವೋ ಟಿ5 ಪ್ರೋ 5ಜಿ ಒಂದಲ್ಲ ಎರಡಲ್ಲ.. ಬರೋಬ್ಬರಿ 9020mAh ಬ್ಯಾಟರಿ ! ಬೆಲೆ ಎಷ್ಟು ಗೊತ್ತಾ ?
Vivo X300 FE : ಸೂಪರ್ ಫಾಸ್ಟ್ ಪರ್ಫಾರ್ಮೆನ್ಸ್
ಈ ಫೋನ್ನಲ್ಲಿ ಕ್ವಾಲ್ಕಾಮ್ನ ಅತ್ಯಂತ ಶಕ್ತಿಶಾಲಿ Snapdragon 8 Gen 5 ಪ್ರೊಸೆಸರ್ ಬಳಸಲಾಗಿದೆ ಎನ್ನಲಾಗುತ್ತಿದೆ.
- ಡಿಸ್ಪ್ಲೇ: 6.31 ಇಂಚಿನ 1.5K LTPO AMOLED ಸ್ಕ್ರೀನ್.
- ಬ್ರೈಟ್ನೆಸ್: ದಾಖಲೆಯ 5,000 ನಿಟ್ಸ್ ಪೀಕ್ ಬ್ರೈಟ್ನೆಸ್.
- ಸುರಕ್ಷತೆ: ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP69 ರೇಟಿಂಗ್ ಮತ್ತು ಅಲ್ಟ್ರಾಸಾನಿಕ್ ಫಿಂಗರ್ಪ್ರಿಂಟ್ ಸೆನ್ಸರ್ ಇದೆ.
Also Read : Google Pixel 10 : ಐಪೋನ್ ಬಿಟ್ಟು ಗೂಗಲ್ ಫಿಕ್ಸೆಲ್ 10 ಖರೀದಿಗೆ ಮುಂದಾದ ಜನ : ಅಷ್ಟಕ್ಕೂ ಇದರಲ್ಲಿ ಏನಿದೆ ಫೀಚರ್ಸ್
ಭಾರತಕ್ಕೆ ಬರಲಿದೆ ‘ಎಕ್ಸ್ಕ್ಲೂಸಿವ್ ಗ್ರೀನ್’ ಬಣ್ಣ
ರಷ್ಯಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಈ ಫೋನ್, ಭಾರತಕ್ಕೆ ಮೇ ಮೊದಲ ವಾರದಲ್ಲಿ (May 2026) ಲಾಂಚ್ ಆಗುವ ಸಾಧ್ಯತೆಯಿದೆ. ಭಾರತೀಯ ಗ್ರಾಹಕರಿಗಾಗಿ ವಿಶೇಷವಾಗಿ ‘ಗ್ರೀನ್’ (Nature Inspired Green) ಬಣ್ಣದ ವೇರಿಯಂಟ್ ಪರಿಚಯಿಸಲಾಗುತ್ತಿದೆ. ಇದರ ಬೆಲೆ ಸುಮಾರು ₹59,999 ರಿಂದ ₹65,000 ಇರಬಹುದು ಎಂದು ಅಂದಾಜಿಸಲಾಗಿದೆ.
vivo x300 fe 6500mah battery zeiss camera price india

