Vivo X90 Series :ವಿವೋ X90 ಸರಣಿ ಲಾಂಚ್‌; ಕಾಯುವಿಕೆಗೆ ಫುಲ್‌ಸ್ಟಾಪ್‌ ಇಟ್ಟ ವಿವೋ

ಬಹಳ ದಿನಗಳಿಂದ ಚರ್ಚಿಸಲಾಗುತ್ತಿದ್ದ ವಿವೋ X90 ಸರಣಿಯ (Vivo X90 Series) ಕಾಯುವಿಕೆ ಕೊನೆಯಾಗಿದೆ. ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ವಿವೋ X90 ಸರಣಿ ಬಿಡುಗಡೆಯಾಗಿದೆ. ಅನೇಕ ವೈಶಿಷ್ಟ್ಯಗಳನ್ನು ಮತ್ತು ವಿನ್ಯಾಸವನ್ನು ಪಡೆದುಕೊಂಡಿರುವ ಇದು ತಂತ್ರಜ್ಞಾನ ವಲಯದಲ್ಲಿ ಸೆನ್ಸೇಶನ್‌ ಅನ್ನೇ ಕ್ರಿಯೇಟ್‌ ಮಾಡಿದೆ. ವಿವೋ X90 ಸರಣಿಯು ಮೂರು ಮಾದರಿಗಳಲ್ಲಿ ವಿವೋ X90, ವಿವೋ X90 ಪ್ರೋ ಮತ್ತು ವಿವೋ X90 ಪ್ರೋ ಪ್ಲಸ್‌ ಬಿಡುಗಡೆಯಾಗಿದೆ. ಈ ಸರಣಿಯ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು ವಾಟರ್‌ ಪ್ರೂಫ್‌ ಮತ್ತು ಡಸ್ಟ್‌ ರೆಸಿಸ್ಟೆನ್ಸ್‌ ಪಡೆದುಕೊಂಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆಯಾಗಿದ್ದು ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ವಿವೋ X90 ಸರಣಿ ಸ್ಮಾರ್ಟ್‌ಫೋನ್‌ ನ ವೈಶಿಷ್ಟ್ಯತೆಗಳು :
ಕಂಪನಿಯು ಇದರ ವಿನ್ಯಾಸಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ ಎಂಬುದು ಇದರ ಹೊರನೋಟದಲ್ಲಿಯೇ ತಿಳಿಯುತ್ತದೆ. ಎಲ್ಲಾ ಮೂರು ಮಾದರಿಯ ಫೋನ್‌ ಆಂಡ್ರಾಯ್ಡ್‌ 13 ಅನ್ನು ಬೆಂಬಲಿಸುತ್ತದೆ. ವಿವೋ X90 ಯು 6.78 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್‌ 4nm ಮೀಡಿಯಾ ಟೆಕ್‌ ಡೈಮೆನ್ಸಿಟಿ 9200 SoC ಪ್ರೊಸೆಸ್ಸರ್‌ ದಿಂದ ವೇಗವನ್ನು ಪಡೆಯುತ್ತದೆ. ಇದರ ಸ್ಟೋರೇಜ್‌ ಸಾಮರ್ಥ್ಯವು 12GB RAM ಮತ್ತು 512 GB ಇಂಟರ್ನಲ್‌ ಸ್ಟೋರೇಜ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಟ್ರಿಪಲ್‌ ಕ್ಯಾಮರಾ ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾವು 50MP ಆಗಿದೆ. ಸೆಲ್ಪಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಹೊಂದಿದೆ.

ವಿವೋ X90 ಪ್ರೋ ಸಹ 6.78 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದರ ಪ್ರೊಸೆಸ್ಸರ್‌ ಮತ್ತು ಸ್ಟೋರೇಜ್‌ಗಳ ಕೂಡಾ ವಿವೋ X90 ರೀತಿಯಲ್ಲೇ ಇದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಇದರ ಮುಖ್ಯ ಕ್ಯಾಮೆರಾವು 50MP ಆಗಿದ್ದು, ಎರಡನೇ ಕ್ಯಾಮೆರಾವೂ 50MP ಯದ್ದಾಗಿದೆ. ಆದರೆ ಇದರ ಪ್ರಾಥಮಿಕ ಕ್ಯಾಮೆರಾವು Zeiss 1 ಇಂಚಿನ ಮುಖ್ಯ ಸೆನ್ಸಾರ್‌ ಹೊಂದಿದೆ. ಇದೂ ಕೂಡಾಸೆಲ್ಪಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾವನ್ನೇ ಹೊಂದಿದೆ.

ವಿವೋ X90 ಸರಣಿಯಲ್ಲಿ ಅತ್ಯಂತ ವಿಶೇಷವಾದ ಫೋನ್‌ ಎಂದರೆ ವಿವೋ X90 ಪ್ರೋ ಪ್ಲಸ್‌. ಈ ಸ್ಮಾರ್ಟ್‌ಫೋನ್‌ 6.78-ಇಂಚಿನ QHD+ LTP 4.0 AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಇತ್ತೀಚಿನ ಮತ್ತು ಶಕ್ತಿಯುತ ಪ್ರೊಸೆಸರ್ Snapdragon 8 Gen 2 ಅನ್ನು ಹೊಂದಿದೆ. ವಿಶೇಷವೆಂದರೆ ಇದು 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 80W ವೈರ್ಡ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ 4700mAh ಬ್ಯಾಟರಿಯನ್ನು ಕೂಡ ಸೇರಿಸಲಾಗಿದೆ. ವಿವೋ X90 ಪ್ರೋ ಪ್ಲಸ್‌ ನಲ್ಲಿ ಛಾಯಾಗ್ರಹಣಕ್ಕಾಗಿ ಕ್ಯಾಮೆರಾಗಳನ್ನು ವಿಶೇವಾಗಿ ಜೋಡಿಸಲಾಗಿದೆ. ಏಕೆಂದರೆ ಹಿಂಬದಿಯಲ್ಲಿ 4 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದು 1-ಇಂಚಿನ 50-ಮೆಗಾಪಿಕ್ಸೆಲ್ IMX989 ಪ್ರಾಥಮಿಕ ಸಂವೇದಕ, 50-ಮೆಗಾಪಿಕ್ಸೆಲ್ IMX758 ಭಾವಚಿತ್ರ ಸಂವೇದಕ, 48-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 64-ಮೆಗಾಪಿಕ್ಸೆಲ್ OV64BN0 ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ. ಇದು ಮುಂಭಾಗದಲ್ಲಿ ಸೆಲ್ಫಿಗಾಗಿ 32MP ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಲೆದರ್‌ ವಿನ್ಯಾಸ ಮತ್ತು ಸರ್ಕಲ್‌ ಆಕಾರದ ಕ್ಯಾಮೆರಾ ಮಾಡ್ಯೂಲ್‌ ಜನರನ್ನು ವಿಶೇಷವಾಗಿ ಆಕರ್ಷಿಸುತ್ತದೆ.

ಬೆಲೆ ಮತ್ತು ಲಭ್ಯತೆ :
ವಿವೋ X90 ಸರಣಿಯ ಸ್ಮಾರ್ಟ್‌ಫೋನ್‌ಗಳು ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ವಿವೋ X90 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ CNY 3,699 (ಅಂದಾಜು 42,000 ರೂ.)

ವಿವೋ X90 ಪ್ರೋ ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ CNY 4,999 (ಅಂದಾಜು 57,000 ರೂ. )

ವಿವೋ X90 ಪ್ರೋ ಪ್ಲಸ್‌ ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ CNY 6,499 (ಅಂದಾಜು 74,000 ರೂ.)

ಇದನ್ನೂ ಓದಿ : WhatsApp: ವಾಟ್ಸ್‌ಅಪ್‌ನ ಹೊಸ ವೈಶಿಷ್ಟ್ಯ : ಇದು ಡೆಸ್ಕ್‌ಟಾಪ್‌ ಬೀಟಾ ಬಳಕೆದಾರರಿಗೆ ಮಾತ್ರ

ಇದನ್ನೂ ಓದಿ : Airtel Recharge Plan : ಅಗ್ಗದ ಪ್ಲಾನ್‌ನ ಬೆಲೆ ಹೆಚ್ಚಿಸಿದ ಏರ್‌ಟೆಲ್

(Vivo X90 Series launched. Vivo X90, Vivo X90 Pro and Vivo X90 Pro Plus)

Comments are closed.