Facial Beauty Tips :ಮುಖದ ಅಂದ ಹೆಚ್ಚಿಸಲು ಈ ನಾಲ್ಕು ಬ್ಯೂಟಿ ಟಿಪ್ಸ್‌ ಅನುಸರಿಸಿ

(Facial Beauty Tips)ಮಹಿಳೆಯರು ಮುಖದ ಅಂದ ಹೆಚ್ಚಿಸಿಕೊಳ್ಳಲು ವಿಶೇಷ ಕಾಳಜಿಯನ್ನು ವಹಿಸಿ ಮುಖದ ಆರೈಕೆಯನ್ನು ಮಾಡುತ್ತಾರೆ. ಹಾಗಾಗಿ ಮಹಿಳೆಯರು ತಮ್ಮ ದಿನಚರಿಯ ಕೆಲವು ಸಮಯವನ್ನು ಮುಖದ ಆರೈಕೆ ಮಾಡಿಕೊಳ್ಳಲು ಬಿಡುತ್ತಾರೆ. ಮುಖದ ಅಂದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಕುರಿತು ಮಾಹಿತಿಯನ್ನು ನೀಡಲಾಗಿದೆ. ಇದರ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Facial Beauty Tips)ಫೇಸ್‌ ಪ್ಯಾಕ್‌

ಬೇಕಾಗುವ ಸಾಮಾಗ್ರಿಗಳು:

  • ಆಲೂಗಡ್ಡೆ ರಸ
  • ಸೌತೆಕಾಯಿ ರಸ
  • ಟೊಮೇಟೊ ರಸ
  • ನಿಂಬೆ ರಸ
  • ಮುಲ್ತಾನಿ ಮಿಟ್ಟಿ
  • ಶ್ರೀಗಂಧ ಪುಡಿ

ಮಾಡುವ ವಿಧಾನ:
ಒಂದು ಬೌಲ್‌ ನಲ್ಲಿ ಎರಡು ಚಮಚ ಆಲೂಗಡ್ಡೆ ರಸ, ಎರಡು ಚಮಚ ಸೌತೆಕಾಯಿ ರಸ,ಒಂದು ಚಮಚ ಟೊಮೇಟೊ ರಸ,ಒಂದು ಚಮಚ ನಿಂಬೆ ರಸ, ಒಂದು ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಶ್ರೀಗಂಧ ಪುಡಿ ಹಾಕಿಕೊಂಡು ಫೇಸ್‌ ಪ್ಯಾಕ್‌ ತಯಾರಿಸಿಕೊಳ್ಳಬೇಕು. ಈ ಫೇಸ್‌ ಪ್ಯಾಕ್‌ ಅನ್ನು ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷ ಬಿಡಬೇಕು . ನಂತರ ತಣ್ಣಿರಿನಲ್ಲಿ ಮುಖ ತೊಳೆಯಬೇಕು. ಹೀಗೆ ವಾರದಲ್ಲಿ ಎರಡು ಬಾರಿ ಫೇಸ್‌ ಪ್ಯಾಕ್‌ ಮಾಡಿ ಮುಖಕ್ಕೆ ಹಚ್ಚುವುದರಿಂದ ಹಲವು ಪ್ರಯೋಜನ ಪಡೆದುಕೊಳ್ಳಬಹುದು.

ಹಾಲಿನ ಪೌಡರ್‌ ಬ್ಲಿಚ್‌
ಹಾಲಿನ ಪೌಡರ್‌ ಬ್ಲಿಚ್‌ ಮಾಡುವುದರಿಂದ ಮುಖದಲ್ಲಿ ನಯವಾದ ಚರ್ಮವನ್ನು ಪಡೆಯಬಹುದು. ಮತ್ತು ಮುಖದಲ್ಲಿರುವ ಕಲೆ ಮತ್ತು ಪಿಂಪಲ್‌ ಕಡಿಮೆ ಮಾಡಿ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಹಾಲಿನ ಪೌಡರ್‌ ಬ್ಲಿಚ್‌ ಹೇಗೆ ಮಾಡುವುದು ಎಂಬುದರ ಕುರಿತು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

ಬೇಕಾಗುವ ಸಾಮಾಗ್ರಿಗಳು:

  • ಹಾಲಿನ ಪುಡಿ
  • ಸಕ್ಕರೆ
  • ನಿಂಬೆ ರಸ
  • ಟೊಮೇಟೊ ರಸ

ಮಾಡುವ ವಿಧಾನ:
ಒಂದು ಬೌಲ್‌ ನಲ್ಲಿ ಎರಡು ಚಮಚ ಹಾಲಿನ ಪುಡಿ, ಒಂದು ಚಮಚ ಸಕ್ಕರೆ, ಒಂದು ಚಮಚ ನಿಂಬೆ ರಸ, ಎರಡು ಚಮಚ ಟೊಮೇಟೊ ರಸ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಅದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಡಬೇಕು. ನಂತರ ತಣ್ಣಿರಿನಲ್ಲಿ ಮುಖ ತೊಳೆಯಬೇಕು.

ಇದನ್ನೂ ಓದಿ:Honey Face Wash:ಮನೆಯಲ್ಲಿಯೇ ತಯಾರಿಸಿಕೊಳ್ಳಿ ಜೇನುತುಪ್ಪದ ಫೇಸ್‌ ವಾಶ್‌

ಇದನ್ನೂ ಓದಿ:Long Hair Beauty Tips: ನೀಳ ಕೇಶರಾಶಿ ನಿಮ್ಮದಾಗಬೇಕಾ ? ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

ಆಲವೇರಾ ಫೇಸ್‌ ಮಾಸ್ಕ್‌
ಒಂದು ಬೌಲ್‌ ನಲ್ಲಿ ಆಲವೇರಾ ಜೆಲ್‌ ಮತ್ತು ಅರಿಶಿಣ ಪುಡಿಯನ್ನು ಮಿಶ್ರಣಮಾಡಿ ಫೇಸ್‌ ಮಾಸ್ಕ್‌ ತಯಾರಿಸಿಕೊಳ್ಳಬೇಕು. ನಂತರ ಈ ಫೇಸ್‌ ಮಾಸ್ಕ್‌ ಅನ್ನು ಒಂದು ಸಣ್ಣ ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ಫೇಸ್‌ ಮಾಸ್ಕ್‌ ಅನ್ನು 30 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡು ನಂತರ ತಣ್ಣಿರಿನಲ್ಲಿ ಮುಖ ತೊಳೆಯಬೇಕು. ಈ ಫೇಸ್‌ ಮಾಸ್ಕ್‌ ಅನ್ನು ಮುಖಕ್ಕೆ ಹಚ್ಚಿಕೊಂಡು ಕೂಡ ಮಲಗಬಹುದು.ಹೀಗೆ ಪ್ರತಿನಿತ್ಯ ಫೇಸ್‌ ಪ್ಯಾಕ್‌ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಮಾಯಿಶ್ಚರೈಸರ್‌
ಚಳಿಗಾಲ ಬರುತ್ತಿದ್ದ ಹಾಗೆ ಅತಿಯಾಗಿ ತ್ವಚೆ ಒಡೆಯುತ್ತದೆ. ಈ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದು. ಮನೆಯಲ್ಲಿ ಮಾಯಿಶ್ಚರೈಸರ್‌ ತಯಾರಿಸಿ ಹಚ್ಚಿಕೊಳ್ಳಬಹುದು. ಮಾಯಿಶ್ಚರೈಸರ್‌ ಹೇಗೆ ತಯಾರಿಸುವುದು ಎಂಬ ಮಾಹಿತಿಯ ಕುರಿತು ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು:

  • ಬೆಣ್ಣೆ
  • ಆಲವೇರಾ
  • ಬಾದಾಮಿ ಎಣ್ಣೆ

ಮಾಡುವ ವಿಧಾನ:
ಒಂದು ಬೌಲ್‌ ಗೆ ಒಂದು ಚಮಚ ಬೆಣ್ಣೆ, ಎರಡು ಚಮಚ ಆಲವೇರಾ, ಒಂದು ಚಮಚ ಬಾದಾಮಿ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಂಡು ಮಾಯಿಶ್ಚರೈಸರ್‌ ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ದೇಹದ ಚರ್ಮಕ್ಕೆ ಮಾಯಿಶ್ಚರೈಸರ್‌ ಹಚ್ಚಬೇಕು. ಹೀಗೆ ಪ್ರತಿನಿತ್ಯ ಈ ಮಾಯಿಶ್ಚರೈಸರ್‌ ಹಚ್ಚುವುದರಿಂದ ಚರ್ಮ ಒಡೆಯುವುದನ್ನು ತಡೆಯಬಹುದು.

Follow these four beauty tips to enhance facial beauty

Comments are closed.