Vivo Y02 : ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾದ ಅಗ್ಗದ ಸ್ಮಾರ್ಟ್‌ಫೋನ್‌ ವಿವೋ ವೈ02

ವಿವೋ, ವೈ 01ನ ಮುಂದಿನ ಸರಣಿ ಫೋನ್‌ನಂತೆ ವೈ02 (Vivo Y02 ) ಅನ್ನು ಬಿಡುಗಡೆ ಮಾಡಿದೆ. ಈಗ ಬಿಡುಗಡೆಯಾಗಿರುವ ವೈ02 ಅನ್ನು ವೈ01ಗೆ ಹೋಲಿಸಿದರೆ ಸುಧಾರಿತ ವಿನ್ಯಾಸ, ದೊಡ್ಡ ಬ್ಯಾಟರಿ ಮತ್ತು ಉತ್ತಮ ಡಿಸ್ಪ್ಲೇಯನ್ನು ನೀಡುತ್ತದೆ. ಮುಂಭಾಗದ ಕ್ಯಾಮೆರಾ, ವೃತ್ತಾಕಾರದ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್‌ಗಳು ಮತ್ತು ವಾಟರ್‌ಪ್ರೂಫ್‌ ನಾಚ್ ಡಿಸ್ಪ್ಲೇ ಮುಂತಾದ ವೈಶಿಷ್ಟ್ಯಗಳಿವೆ. ಇದು 5,000mAh ನ ಶಕ್ತಿಶಾಲಿ ಬ್ಯಾಟರಿ ಹೊಂದಿದೆ. ಇದರ ಬೆಲೆಯೂ ಕೈಗೆಟುಕುವಂತೆ ಇದೆ. ಈ ಸ್ಮಾರ್ಟ್‌ಫೋನ್‌ ಈಗಾಗಲೇ ಬ್ರ್ಯಾಂಡ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ವಿವೋ ವೈ 02ನ ವೈಶಿಷ್ಟ್ಯಗಳು:
ಈಗ ಹೊಸದಾಗಿ ಬಿಡುಗಡೆಯಾಗಿರುವ ವಿವೋನ ವೈ02 ವೈಶಿಷ್ಟ್ಯಗಳು ಹೀಗಿವೆ. ಇದು 720 x 1600 ಪಿಕ್ಸೆಲ್‌ಗಳ HD+ ರೆಸಲ್ಯೂಶನ್ ಇರುವ ಫೋನ್‌ ಆಗಿದ್ದು ಇದರ ರಿಫ್ರೆಶ್ ದರವು 60Hz ಆಗಿದೆ. ಇದು 6.51-ಇಂಚಿನ IPS LCD ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್‌ನ ಡಿಸ್ಪ್ಲೇಯು ಐ-ಪ್ರೊಟೆಕ್ಷನ್ ಮೋಡ್ ಅನ್ನು ಹೊಂದಿದೆ. ಇದರ ಆಕಾರವು 20:9 ಅನುಪಾತದಲ್ಲಿದೆ. ಈ ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇಯಲ್ಲಿ 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ LED ಫ್ಲ್ಯಾಷ್‌ನೊಂದಿಗೆ 8MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದು ಮುಖದ ಸೌಂದರ್ಯ ಮತ್ತು ಟೈಮ್‌ಲ್ಯಾಪ್ಸ್‌ನಂತಹ ಫೋಟೋಗ್ರಫಿ ವೈಶಿಷ್ಟ್ಯಗಳನ್ನು ನೀಡುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್ Helio P22 ಚಿಪ್‌ಸೆಟ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಇದು ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು 3GB RAM ಮತ್ತು 32GB ಆಂತರಿಕ ಸಂಗ್ರಹಣೆಯನ್ನು ನೀಡುತ್ತದೆ. ಮೈಕ್ರೊ ಎಸ್‌ಡಿ ಕಾರ್ಡ್‌ನೊಂದಿಗೆ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ.

ವಿವೋ ವೈ02 ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ. ಇದು FunTouch OS 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್‌ 12 ಅನ್ನು ಬೆಂಬಲಿಸುತ್ತದೆ. ಈ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಬ್ಲೂಟೂತ್ 5.0, ಮೈಕ್ರೋ USB 2.0 ಪೋರ್ಟ್, ವೈಫೈ 5, 4G VoLTE ಮತ್ತು 3.5-ಎಂಎಂ ಆಡಿಯೊ ಜ್ಯಾಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ವಿವೋ ವೈ02 ಬೆಲೆ ಮತ್ತು ಲಭ್ಯತೆ:
ವಿವೋ ವೈ02 ಇದು ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಆಗಿದೆ. ಅದಕ್ಕಾಗಿ ಇದರ ಬೆಲೆ 8,999 ರೂ. ಆಗಿದೆ. ವಿವೋನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಿದೆ. ಇದನ್ನು ಗ್ರಾಹಕರು ಆರ್ಕಿಡ್ ಬ್ಲೂ ಮತ್ತು ಕಾಸ್ಮಿಕ್ ಗ್ರೇ‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಇದನ್ನೂ ಓದಿ : DigiYatra in 3 Airports : 3 ಏರ್‌ಪೋರ್ಟ್‌ಗಳಲ್ಲಿ ಡಿಜಿಯಾತ್ರಾ ಸೇವೆ ಆರಂಭ: ನೋಂದಣಿ ಮಾಡಿಕೊಳ್ಳುವುದು ಹೇಗೆ…

ಇದನ್ನೂ ಓದಿ : Honda Cars : ಹೊಂಡಾ ಕಾರು ಖರೀದಿಸುವವರಿಗೆ ಸಿಹಿ ಸುದ್ದಿ; 72,340 ರೂ.ಗಳ ವರಗೆ ಭಾರಿ ಡಿಸ್ಕೌಂಟ್‌ ಘೋಷಣೆ

(Vivo Y02 launched in India. Powerful battery, octa core mediatek processor, and many more)

Comments are closed.