Wife murder: ಪತ್ನಿಯನ್ನು ಕೊಂದು ಡ್ರಮ್ ನಲ್ಲಿ 1 ವರ್ಷ ಶವ ಬಚ್ಚಿಟ್ಟ ಪತಿ: ಮನೆ ಮಾಲೀಕನಿಂದ ಬಯಲಾಯ್ತು ಕೃತ್ಯ

ಆಂಧ್ರಪ್ರದೇಶ: Wife murder: ಕಳೆದ ತಿಂಗಳು ದೆಹಲಿಯಲ್ಲಿ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ತನ್ನ ಪ್ರೇಯಸಿ ಶೃದ್ಧಾ ವಾಕರ್ ಎಂಬಾಕೆಯನ್ನು ಅಫ್ತಾಬ್ ಎಂಬಾತ ಕೊಲೆಗೈದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಘಟನೆಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಈ ಬೆನ್ನಲ್ಲೇ ಅಲ್ಲಲ್ಲಿ ಇಂಥ ಕ್ರೂರ ಕೃತ್ಯಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ಹೈದರಾಬಾದ್ ನಲ್ಲೂ ನಡೆದ ಕೊಲೆ ಪ್ರಕರಣವೊಂದು 1 ವರ್ಷದ ಬಳಿಕ ಬಯಲಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಧುರವಾಡದಲ್ಲಿ ಬೀಗ ಹಾಕಿದ್ದ ಮನೆಯೊಳಗೆ ಇರಿಸಲಾಗಿದ್ದ ಡ್ರಮ್ ಒಂದರಲ್ಲಿ ಕೊಳೆತ ಮಹಿಳೆಯ ಮೃತದೇಹಗಳು ಪತ್ತೆಯಾಗಿವೆ. ಕಳೆದ ಒಂದು ವರ್ಷದ ಹಿಂದೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: Jenavac JE vaccine: ಮೆದುಳು ಜ್ವರ ಲಸಿಕೆ ಪಡೆದ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಬಾಡಿಗೆ ಮನೆಯೊಂದರಲ್ಲಿ ನಡೆದ ಈ ಪ್ರಕರಣ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಬಾಡಿಗೆದಾರ ಸತತ 1 ವರ್ಷದಿಂದ ಬಾಡಿಗೆ ಪಾವತಿಸಿಲ್ಲ ಎಂದು ಬೇಸತ್ತ ಮನೆ ಮಾಲೀಕ ಮನೆಯ ಬಾಗಿಲಿನ ಬೀಗ ಒಡೆದು ನೋಡಿದಾಗ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ.

2021ರ ಜೂನ್ ನಲ್ಲಿ ಬಾಡಿಗೆದಾರ ತನ್ನ ಹೆಂಡತಿ ಗರ್ಭಿಣಿ ಎಂದು ಮನೆ ಮಾಲೀಕನ ಬಳಿ ಹೇಳಿ ಬಾಡಿಗೆ ಪಾವತಿಸದೇ ಮನೆಗೆ ಬೀಗ ಹಾಕಿ ಊರಿಗೆ ತೆರಳಿದ್ದ. ಆದಷ್ಟು ಬೇಗ ಹೆಂಡತಿ, ಮಗುವನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದ. ಆದರೆ ಆಗಾಗ ಯಾರಿಗೂ ತಿಳಿಯದಂತೆ ಹಿಂಬಾಗಿಲಿನಿಂದ ಮನೆಗೆ ಬಂದು ಹೋಗುತ್ತಿದ್ದ. ಸತತ ಒಂದು ವರ್ಷದಿಂದ ಬಾಡಿಗೆ ಪಾವತಿಸಿರಲಿಲ್ಲ. ಇದರಿಂದ ಬೇಸತ್ತ ಮನೆ ಮಾಲೀಕ ಬೀಗ ಒಡೆದು ಮನೆ ಪ್ರವೇಶಿಸಿ ಬಾಡಿಗೆದಾರನ ವಸ್ತುಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಕೊಳೆತ ವಾಸನೆ ಬಂದು ಡ್ರಮ್ ಪರಿಶೀಲಿಸಿದಾಗ ಅದರಲ್ಲಿ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿವೆ.

ಇದನ್ನೂ ಓದಿ: MP Tejaswi Surya: ಚಪ್ಪಲಿ ಧರಿಸಿ ದೈವದ ದೀವಟಿಕೆ ಹಿಡಿದ ಸಂಸದ ತೇಜಸ್ವಿ ಸೂರ್ಯ: ಹಿಂದೂಗಳ ಆಕ್ರೋಶ

ಒಂದು ವರ್ಷದ ಹಿಂದೆ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಆ ಮೃತದೇಹ ಬಾಡಿಗೆದಾರನ ಪತ್ನಿಯದ್ದೇ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Wife murder: Andhra Woman’s Body Parts Found In A Drum Cops Suspect Over A Year Old

Comments are closed.