ನಿಮ್ಮ ವೆಬ್ಸೈಟ್ ಗೆ ಟ್ರಾಫಿಕ್ ಹೆಚ್ಚಿಸಲು ಇದೆ ಸುಲಭ ವಿಧಾನ ….!

ಪ್ರತಿ ಜಾಲತಾಣವು ಆರಂಭವಾದ ದಿನದಿಂದ ಅಗತ್ಯಕ್ಕೆ ಅನುಗುಣವಾಗಿ ಟ್ರಾಫಿಕ್ ಪಡೆಯಲು ಕೊಂಚ ಕಷ್ಟ ಪಡಲೇಬೇಕಾಗುತ್ತದೆ. ಎಲ್ಲ ಉದ್ಯಮಗಳ ಮುಖ್ಯ ಆಶಯವೇ ಬರುವ ಟ್ರಾಫಿಕ್ ಮೂಲಕ ಲಾಭ ಗಳಿಸುವುದು.ಇದನ್ನೇ ಡಿಜಿಟಲ್ ಮಾರ್ಕೆಟಿಂಗ್ ಭಾಷೆಯಲ್ಲಿ ಕನ್ವರ್ಷನ್ ಎನ್ನಲಾಗುತ್ತದೆ. ಆದರೆ ಈ ಕನ್ವರ್ಷನ್ ಪಡೆಯುವಲ್ಲಿ ಬಹುತೇಕ ಉದ್ಯಮಗಳು ವಿಫಲವಾಗಿಬಿಡುತ್ತವೆ. ಈ ವೈಫಲ್ಯಗಳನ್ನು ದಾಟಿ ಉದ್ಯಮಗಳ ಕನ್ವರ್ಷನ್ ಹೆಚ್ಚಿಸುವ ಬಗ್ಗೆ ನಾವೀಗ ಹೇಳಲಿರುವುದು. ಪಾರಂಪರಿಕ ವಿಧಾನಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವ ಈ ವಿಧಾನದಲ್ಲಿ ನಿಮ್ಮ ಕ್ಷಮತೆ ಹೆಚ್ಚು ಮಹತ್ವ ಪಡೆಯುತ್ತದೆ. ಹಾಗಾಗಿ ಅಡ್ಡ ಆಲೋಚನೆಗಳನ್ನು ಬಿಟ್ಟು ನೇರ ಮಾರ್ಗ ಮಾತ್ರ ಕನ್ವರ್ಷನ್ ಗೆ ರಹದಾರಿ.

ಹಾಗಾಗಿ ಈ ಲೇಖನದಲ್ಲಿ, Google, Bing, Yahoo ಮತ್ತು ಇತರ ಹಲವು ಸರ್ಚ್ ಇಂಜಿನ್ ಗಳಲ್ಲಿ ನಿಮ್ಮ ವೆಬ್‌ಸೈಟ್ ಅನ್ನು ಆಪ್ಟಿಮೈಸ್ ಮಾಡಲು ಬಳಸುವ ಪ್ರಕ್ರಿಯೆಯ ಕುರಿತು ಉಲ್ಲೇಖಿಸಲಾಗಿದೆ.

ಹಾಗಾದರೆ ,ಎಸ್‌ಇಒ ಎಂದರೇನು?
SEO ಎಂದರೆ ಸರ್ಚ್ ಇಂಜಿನ್ ಆಪ್ಟಿಮೈಸೇಷನ್

ಎಸ್‌ಇಒ ಎಂದರೆ ನೀವು ಮಾರಾಟ ಮಾಡುವ, ಪ್ರಚಾರ ಮಾಡುವ ಅಥವಾ ಮಾತನಾಡುವ ಯಾವುದಾದರೂ ವಿಷಯವನ್ನು ಟೈಪ್ ಮಾಡಿದಾಗ ನಿಮ್ಮ ಸೈಟ್ ಅನ್ನು Google ನಲ್ಲಿ ಸಾಧ್ಯವಾದಷ್ಟು ಮೇಲೆ rank ಬರುವ ಹಾಗೆ ಮಾಡುವ ಪ್ರಕ್ರಿಯೆ.

ಇದರಿಂದ ನಿಮ್ಮ ವ್ಯಾಪಾರವು ಹೆಚ್ಚು ಜನರಿಗೆ ಲಭ್ಯವಾಗುವಂತೆ ಮತ್ತು ನಿಮ್ಮ ವ್ಯಾಪಾರವು ಹೆಚ್ಚು ಕನ್ವರ್ಷನ್ ಪಡೆಯುವಂತೆ ಮಾಡಬಹುದು.

SEO ಹೇಗೆ ಕೆಲಸ ಮಾಡುತ್ತದೆ ?

ಸಾಮಾನ್ಯವಾಗಿ ನಮ್ಮಲ್ಲಿ SEO ಬಗ್ಗೆ ಹಲವು ಪ್ರಶ್ನೆಗಳು ಮೂಡುವುದು ಸಹಜ. ಆದರೆ ಒಂದು ಸಲ ನೀವು ಎಸ್ ಇ ಓ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡರೆ ಆಗ ನಿಮ್ಮ ಬ್ಯುಸಿನೆಸ್ ಒಂದು ಉನ್ನತ ಮಟ್ಟವನ್ನು ತಲುಪಬಹುದು.

SEO ದಲ್ಲಿ ಅತ್ಯಂತ ಪ್ರಮುಖವಾದ ಅಂಶ ಏನು ?
ಎಸ್ ಇ ಓ ದಲ್ಲಿ ಲಿಂಕ್ ಗಳು’ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ನಿಮ್ಮ ವೆಬ್ಸೈಟ್ ನಲ್ಲಿ ಹಾಕುವ ಕಂಟೆಂಟ್ ಗೆ ಪ್ರಾಮುಖ್ಯತೆ ಇದೆಯೇ ?
ಹೌದು , ನೀವು ನಿಮ್ಮ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ಬಳಸಿದಂತೆ ಹಾಗೂ ಹೆಚ್ಚು ಸಬ್ ಹೆಡ್ಡಿಂಗ್ ಇರುವ ದೀರ್ಘ ಲೇಖನಗಳನ್ನು ಬರೆದಷ್ಟೂ ಉತ್ತಮ.

ಎಸ್ ಇ ಓ ಹೇಗೆ ಕೆಲಸ ಮಾಡುತ್ತದೆ ?
ಗೂಗಲ್ ಅಲ್ಲಿ ನಿಮ್ಮ ವೆಬ್ಸೈಟ್ rank ಆಗಬೇಕು. ಹೇಗೆ ರಾಂಕ್ ಮಾಡಬೇಕು ಎನ್ನುವುದೇ ನಮ್ಮ ಮುಂದಿರುವ ಪ್ರಶ್ನೆ ಆಗಿರುತ್ತದೆ.
ಎಸ್ ಇ ಓ ನಿಮ್ಮ ವೆಬ್ಸೈಟ್ ಗೆ ಕಾರ್ಯ ನಿರ್ವಹಿಸಬೇಕೆಂದಿದ್ದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಆದರೆ ಒಂದು ಸಲ ನಿಮ್ಮ ಸೈಟ್ rank ಆದರೆ ನಂತರ ನಿಮ್ಮ ಸೈಟ್ ಗೆ ಬಹಳಷ್ಟು ಪ್ರಾಮುಖ್ಯತೆ ಸಿಗುತ್ತದೆ.

ಹಾಗಾದರೆ ಗೂಗಲ್ ಲಿ ವೆಬ್ಸೈಟ್ ನ rank ಮಾಡುವುದಾದರೂ ಹೇಗೆ ?
ಎಸ್ ಇ ಓ ಅಂದರೆ rank ಮಾಡುವುದು ಅಥವಾ ಸರ್ಚ್ ಇಂಜಿನ್ ಗಳಲ್ಲಿ ಆಪ್ಟಿಮೈಸ್ ಮಾಡುವುದು.
ಕೀವರ್ಡ್ ಗಳನ್ನು ಬಳಸಿ ವೆಬ್ಸೈಟ್ ನ್ನು rank ಮಾಡಬಹುದಾಗಿದೆ.
ಈ ಕೀವರ್ಡ್ ಎಂದರೆ ಏನು ?
ವೆಬ್ಸೈಟ್ ನ ವಿಷಯದಲ್ಲಿ ಇರುವ ಒಂದು ಪ್ರಮುಖ ಪದವನ್ನು ಕೀವರ್ಡ್ ನ್ನಾಗಿ ಬಳಸಿಕೊಳ್ಳಬೇಕು.
ನೀವು ಬಳಸುವ ಕೀವರ್ಡ್ ಗಳು ಜನರು ಸಾಮಾನ್ಯವಾಗಿ ಬಳಸುವ ವರ್ಡ್ ಆಗಿರಬೇಕು. ಆಗ ಜನರು ಒಂದು ಕೀವರ್ಡ್ ನ ಸರ್ಚ್ ಇಂಜಿನ್ ಲಿ ಸರ್ಚ್ ಕೊಟ್ಟಾಗ ನೀವು ನಿಮ್ಮ ವೆಬ್ ಸೈಟ್ ನಲ್ಲಿ ಆ ಕೀವರ್ಡ್ ನ್ನು rank ಮಾಡಿದ್ದರೆ ಆಗ ನಿಮ್ಮ ಸಂಪೂರ್ಣ ವೆಬ್ಸೈಟ್ rank ಆದಹಾಗೆ . ಗೂಗಲ್ ನಲ್ಲಿ ನಿಮ್ಮ ವೆಬ್ಸೈಟ್, ಜನರಿಗೆ ಬೇರೆಯವರ ವೆಬ್ಸೈಟ್ ಗಳ ಮುಂಚೆ ಕಾಣಲು ಬಳಸುವ ತಂತ್ರವೇ ಎಸ್ ಇ ಓ.

ಇದರಲ್ಲಿ ಆಫ್ ಪೇಜ್ ಎಸ್ ಸಿ.ಓ ಹಾಗೂ ಆನ್ ಪೇಜ್ ಎಸ್ ಸಿ ಓ ಎಂಬ ಎರಡು ಭಾಗಗಳಿದ್ದು ಇವುಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ.

Easiest Way to gain traffic to your website..!

Comments are closed.