ದೀಪಾವಳಿ ಪ್ರಯುಕ್ತ ಜಿಯೋ ಕಂಪನಿಯಿಂದ ಆಕರ್ಷಕ ಪ್ರಿಪೇಯ್ಡ್​ ಆಫರ್​ : ಈ ಪ್ರಿಪೇಯ್ಡ್​ ಪ್ಯಾಕ್​ ಮಿಸ್​ ಮಾಡ್ಕೊಳ್ಳಬೇಡಿ

866 ರೂಪಾಯಿಗಳ ಪ್ರಿಪೇಯ್ಡ್​​ ಸೌಕರ್ಯ ಪಡೆದವರು 149 ರೂಪಾಯಿ ಮೇಲ್ಪಟ್ಟ ಆಹಾರ ಪದಾರ್ಥಗಳನ್ನು ಆರ್ಡರ್​ ಮಾಡಿದಾಗ ಉಚಿತ ಹೋಮ್​ ಡೆಲಿವರಿ ಪಡೆಯುತ್ತಾರೆ. 199 ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಆರ್ಡರ್​ಗೆ 10 ಸ್ಪಾಮಾರ್ಟ್​ ಆರ್ಡರ್​​ಗಳ 10 ಉಚಿತ ಹೋಂ ಡೆಲಿವರಿ ಸಿಗಲಿದೆ.

Jio Attractive Prepaid Offers: ಒಳ್ಳೊಳ್ಳೆ ಪ್ರಿಪೇಯ್ಡ್​ ಪ್ಲಾನ್​ಗಳನ್ನು ಗ್ರಾಹಕರಿಗೆ ನೀಡುವುದರಲ್ಲಿ ರಿಲಯನ್ಸ್​ ಜಿಯೋ ಟೆಲಿಕಾಂ ಕಂಪನಿಯು ಎಂದಿಗೂ ಮುಂಚೂಣಿಯಲ್ಲಿ ಇರುತ್ತದೆ. ಗ್ರಾಹಕರಿಗೆ ಸಾಕಷ್ಟು ಲಾಭವನ್ನು ನೀಡಬಲ್ಲ ವಿವಿಧ ಪ್ರಿಪೇಯ್ಡ್​ ಆಫರ್​ಗಳನ್ನು ಜಿಯೋ ಕಂಪನಿ ನೀಡುತ್ತಲೇ ಬರ್ತಿದೆ. ಇದೀಗ ಸಂಪೂರ್ಣ ದೇಶ ದೀಪಾವಳಿ ಹಬ್ಬ(Diwali Festival) ದ ಸಂಭ್ರಮದಲ್ಲಿದೆ.

ಈ ಹಬ್ಬದ ಮೂಡ್​ನಲ್ಲಿ ರಿಲಯನ್ಸ್​ ಜಿಯೋ (Realince jio) ಕೂಡ ತನ್ನ ಗ್ರಾಹಕರಿಗೆ ಬಂಪರ್​ ಪ್ರಿಪೇಯ್ಡ್​ ಪ್ಲಾನ್​ (Prepaid Recharge Plan) ಒಂದನ್ನು ನೀಡುವ ಮೂಲಕ ಹಬ್ಬದ ಗಿಫ್ಟ್​ ನೀಡಿದೆ. ಕಡಿಮೆ ಬೆಲೆಯ ಪ್ರಿಪೇಯ್ಡ್​ ಪ್ಲಾನ್​ನ ಮೂಲಕ ಜಿಯೋ ಕಂಪನಿಯು ಸ್ವಿಗ್ಗಿ ಆನ್​ಲೈಟ್​ ಚಂದಾದಾರಿಕೆ ಯನ್ನೂ ನೀಡುತ್ತಿದೆ. ಜಿಯೋ ಕಂಪನಿ ನೀಡುತ್ತಿರುವ ಈ ಪ್ರೀಪೇಯ್ಡ್​ ಪ್ಲಾನ್​ನ ಬೆಲೆ ಕೇವಲ 866 ರೂಪಾಯಿ ಆಗಿದೆ.

Jio Attractive Prepaid Offers for Diwali, dont miss this prepaid pack
Image Credit to Original Source

ಈ ಮೊತ್ತದ ಹಣವನ್ನು ನೀವು ರಿಚಾರ್ಜ್ ಮಾಡಿಕೊಂಡಲ್ಲಿ ಗ್ರಾಹಕರು ಯಾವುದೇ ಅಡೆತಡೆಯಿಲ್ಲದ ಸೌಕರ್ಯವನ್ನು ಪಡೆಯುತ್ತಾರೆ. ಇದರ ಜೊತೆಯಲ್ಲಿ ಸ್ವಿಗ್ಗಿ ಒನ್ ಲೈಟ್ ​​ ಚಂದಾದಾರಿಕೆ ಕೂಡ ಗ್ರಾಹಕರದ್ದಾಗಲಿದೆ. ಅಂದ್ರೆ ನೀವು ಸ್ವಿಗ್ಗಿಯಲ್ಲಿ ಫುಡ್​ ಆರ್ಡರ್​ ಮಾಡಿದಲ್ಲಿ ನಿಮಗೆ ಯಾವುದೇ ಹೆಚ್ಚುವರಿ ಶುಲ್ಕ ಇರೋದಿಲ್ಲ.

ಇದನ್ನೂ ಓದಿ : ವಾಟ್ಸಾಪ್​ ಬಳಕೆದಾರರಿಗೆ ಖಡಕ್​ ವಾರ್ನಿಂಗ್​ ನೀಡಿದೆ ಸುಪ್ರೀಂಕೋರ್ಟ್: ಇದನ್ನು ಪಾಲಿಸದಿದ್ದಲ್ಲಿ ನಿಮ್ಮ ಗೌಪ್ಯ ಮಾಹಿತಿಗಳಾಗಬಹುದು ಲೀಕ್​

ಇದರ ಜೊತೆಯಲ್ಲಿ ಸ್ವಿಗ್ಗಿ ದಿನಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿಯೂ ನಿಮಗೆ ಫ್ರೀ ಶಿಪ್ಪಿಂಗ್​ ಸೌಕರ್ಯ ಇರಲಿದೆ ಎಂದು ರಿಲಯನ್ಸ್​ ಜಿಯೋ ಕಂಪನಿ ತಿಳಿಸಿದೆ. ಕೇವಲ ಸ್ವಿಗ್ಗಿ ಒನ್ ಲೈಟ್ ​ ಸೌಕರ್ಯ ಮಾತ್ರವಲ್ಲ. 866 ರೂಪಾಯಿ ಮೌಲ್ಯದ ಜಿಯೋ ಪ್ರಿಪೇಯ್ಡ್​ ರಿಚಾರ್ಜ್ ಮಾಡಿಸಿಕೊಳ್ಳುವವರ ಮೈ ಜಿಯೋ ಖಾತೆಗೆ ಐವತ್ತು ರೂಪಾಯಿಗಳ ಕ್ಯಾಶ್​ ಬ್ಯಾಕ್​ ಕೂಡ ಸಿಗಲಿದೆ.

ಅಲ್ಲದೇ ಮೂರು ತಿಂಗಳ ಅವಧಿಗೆ ಸ್ವಿಗ್ಗಿ ಆನ್​ಲೈನ್​ ಸೇವೆ ಬೇಕು ಎನ್ನುವವರು ಹೆಚ್ಚುವರಿ 99 ರೂಪಾಯಿ ಪಾವತಿ ಮಾಡಿದರೆ ಸಾಕು. ಇನ್ನು 866 ರೂಪಾಯಿಗಳ ಪ್ರಿಪೇಯ್ಡ್​ ಚಂದಾದಾರಿಕೆಗೆ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಪಡೆದುಕೊಳ್ಳಲು ಅರ್ಹರಾಗುತ್ತಾರೆ. ಅನಿಮಿಯತ ಕರೆ ಸೌಕರ್ಯ ಕೂಡ ನಿಮ್ಮದಾಗಲಿದೆ. 84 ದಿನಗಳ ಕಾಲ ಈ ಪ್ರಿಪೇಯ್ಡ್​ ಪ್ಯಾಕ್​ನ ವ್ಯಾಲಿಡಿಟಿ ಇರಲಿದೆ ಎಂದು ರಿಲಯನ್ಸ್​ ಜಿಯೋ ಕಂಪನಿ ಮಾಹಿತಿ ನೀಡಿದೆ.

ಇದನ್ನೂ ಓದಿ : ಹ್ಯೂಮನ್‌ AI ಪಿನ್‌ : ನಿಮ್ಮ ಶರ್ಟ್​ನಲ್ಲಿರೋ ಪಿನ್ ಮೊಬೈಲ್​ನಂತೆ ಕಾರ್ಯನಿರ್ವಹಿಸುತ್ತೆ ಅಂದರೆ ನಂಬ್ತೀರಾ ? ಮೂಗಿನ ಮೇಲೆ ಬೆರಳಿಡುವಂತೆ ಮಾಡ್ತಿದೆ ಈ ಹೊಸ ಸ್ಮಾರ್ಟ್​ಫೋನ್

866 ರೂಪಾಯಿಗಳ ಪ್ರಿಪೇಯ್ಡ್​​ ಸೌಕರ್ಯ ಪಡೆದವರು 149 ರೂಪಾಯಿ ಮೇಲ್ಪಟ್ಟ ಆಹಾರ ಪದಾರ್ಥಗಳನ್ನು ಆರ್ಡರ್​ ಮಾಡಿದಾಗ ಉಚಿತ ಹೋಮ್​ ಡೆಲಿವರಿ ಪಡೆಯುತ್ತಾರೆ. 199 ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಆರ್ಡರ್​ಗೆ 10 ಸ್ಪಾಮಾರ್ಟ್​ ಆರ್ಡರ್​​ಗಳ 10 ಉಚಿತ ಹೋಂ ಡೆಲಿವರಿ ಸಿಗಲಿದೆ. ಸಾಮಾನ್ಯ ಸ್ವಿಗ್ಗಿ ಚಂದಾದಾರನಿಗಿಂತ ಹೆಚ್ಚುವರಿ ರೆಸ್ಟಾರೆಂಡ್​ ಡಿಸ್ಕೌಂಟ್​ ಸಿಗಲಿದೆ.

Jio Attractive Prepaid Offers for Diwali, dont miss this prepaid pack
Image Credit to Original Source

ಜೆನಿ ಡೆಲಿವರಿಗಳು ಆರವತ್ತು ರೂಪಾಯಿಗಳ ಮೇಲಿದ್ದರೂ 10 ಪ್ರತಿಶತ ರಿಯಾಯಿತಿ ಕೂಡ ಈ ಪ್ರಿಪೇಯ್ಡ್​ ಖರೀದಿಸಿದ ಗ್ರಾಹಕರದ್ದಾಗಲಿದೆ. ಸ್ಟಾಮಾರ್ಟ್ ಆರ್ಡರ್​ಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ದೀಪಾವಳಿ ಹಬ್ಬಕ್ಕೆ ಉಳಿದೆಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದ್ರೆ ರಿಲಾಯನ್ಸ್​ ಜಿಯೋ ಅತ್ಯಂತ ಲಾಭದ ಪ್ರಿಪೇಯ್ಡ್​ ಆಫರ್​ನ್ನು ಗ್ರಾಹಕರಿಗೆ ನೀಡಿದೆ.

ಇದನ್ನೂ ಓದಿ : 50 MP ಕ್ಯಾಮೆರಾ 64 GB ಸ್ಟೋರೇಜ್ : ಆರ್ಧಕ್ಕೀಂತ ಕಡಿಮೆ ಬೆಲೆಗೆ ಸಿಗುತ್ತೆ ರೆಡ್‌ಮೀ 12C 5G ಸ್ಮಾರ್ಟ್‌ ಪೋನ್‌

ಹೀಗಾಗಿ ಗ್ರಾಹಕರು ಈ ಆಫರ್​ನ ಲಾಭ ಪಡೆದುಕೊಳ್ಳುವುದು ಒಳ್ಳೆಯದು. ಅದರಲ್ಲೂ ನಗರ ಪ್ರದೇಶಗಳಲ್ಲಿ ಸ್ವಿಗ್ಗಿ ಸೌಕರ್ಯವನ್ನು ಹೊಂದಿರುವ ಸಿಟಿಯಲ್ಲಿ ವಾಸಿಸುವವರಿಗೆ ಜಿಯೋ ಕಂಪನಿಯ ಈ ದೀಪಾವಳಿ ಹಬ್ಬದ ಪ್ರಿಪೇಯ್ಡ್​ ಪ್ಲಾನ್​ ಸಿಗಲಿದೆ.

Jio Attractive Prepaid Offers for Diwali, dont miss this prepaid pack

Comments are closed.