ವಾಟ್ಸಾಪ್​ನಲ್ಲಿ ಶೀಘ್ರದಲ್ಲಿಯೇ ಬರ್ತಿದೆ ಹೊಸ ವೈಶಿಷ್ಟ್ಯ : ಇನ್ಮೇಲೆ ನೀವು ಮಾಡಬಹುದು ಮತದಾನ

Android 2.23.24.12 ಆವೃತ್ತಿಯ ಇತ್ತೀಚಿನ WhatsApp ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ನೀಡಲಾಗಿದೆ ಎನ್ನಲಾಗಿದೆ. ವಾಟ್ಸಾಪ್​ ಚಾನೆಲ್​ನ ಅಡ್ಮಿನ್​ ಯಾವುದೇ ವಿಷಯಗಳ ಬಗ್ಗೆ ಇಲ್ಲಿ ಸಮೀಕ್ಷೆ ನಡೆಸುವ ಮೂಲಕ ಅಭಿಪ್ರಾಯ ಸಂಗ್ರಹ ಮಾಡಬಹುದಾಗಿದೆ.

ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಟ್ಸಾಪ್​ (Whatsapp)  ಒಂದಿಲ್ಲೊಂದು ಅಪ್​ಡೇಟ್​ಗಳನ್ನು ನೀಡುತ್ತಲೇ ಇರುತ್ತದೆ. ಸಿಮ್​ ಇಲ್ಲದೆಯೂ ವಾಟ್ಸಾಪ್​ ಲಾಗಿನ್ ಆಗುವ ವೈಶಿಷ್ಟ್ಯದ ಬಗ್ಗೆ ಸದ್ಯ ವಾಟ್ಸಾಪ್​  ಕೆಲಸ ಮಾಡ್ತಿದೆ. ಶೀಘ್ರದಲ್ಲಿಯೇ ವಾಟ್ಸಾಪ್​ ಬಳಕೆದಾರರು ತಮ್ಮ ಇ ಮೇಲ್​ ಖಾತೆಯ ಮೂಲಕವೂ ವಾಟ್ಸಾಪ್​ ಖಾತೆಗೆ ಲಾಗಿನ್​ ಆಗಬಹುದು ಅಂತಾ ಮೆಟಾ (Meta) ಕಂಪನಿ ಹೇಳಿದೆ.

whatsapp to soon allow channel admins to share polls reports
Image credit to Original Source

ವಾಟ್ಸಾಪ್​ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಾಟ್ಸಾಪ್​ ಚಾನೆಲ್​ನ್ನು ಅರಂಭಿಸಿತ್ತು. ಈಗಾಗಲೇ ಅನೇಕರು ವಾಟ್ಸಾಪ್​ ಚಾನೆಲ್​ (Whatsapp Channel ) ಹೊಂದಿದ್ದಾರೆ. ಸ್ವತಃ ಪ್ರಧಾನಿ ಮೋದಿ ಕೂಡ ತಮ್ಮದೇ ವಾಟ್ಸಾಪ್​ ಚಾನೆಲ್​ ಹೊಂದಿದ್ದಾರೆ. ಇನ್ನು ವಾಟ್ಸಾಪ್​ ಚಾನೆಲ್​ ಹೊಂದಿರುವವರಿಗೆ ಹೊಸ ವೈಶಿಷ್ಟ್ಯವನ್ನು ಶೀಘ್ರದಲ್ಲಿಯೇ ನೀಡಲು ಮೆಟಾ ಕಂಪನಿ ಮುಂದಾಗಿದೆ.

ಇದನ್ನೂ ಓದಿ : ಕಾರು ಅಪಘಾತವಾದ್ರೆ ಜೀವ ಉಳಿಸುತ್ತೆ ಗೂಗಲ್‌ ! ಭಾರತದಲ್ಲಿ ರಿಲಿಸ್‌ ಆಯ್ತು ಗೂಗಲ್‌ ಫಿಕ್ಸೆಲ್‌ ಫೀಚರ್ಸ್‌

ಈ ಹೊಸ ವೈಶಿಷ್ಟ್ಯದ ಮೂಲಕ ವಾಟ್ಸಾಪ್​ ಚಾನೆಲ್​ನ ಸದಸ್ಯರು ಸಮೀಕ್ಷೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಮೆಟಾ ಕಂಪನಿಯು ತಿಳಿಸಿದೆ. ಹಾಗಾದರೆ ಏನಿದು ವಾಟ್ಸಾಪ್​ ಚಾನೆಲ್​ನ (Whatsapp Channel New Features) ಹೊಸ ವೈಶಿಷ್ಟ್ಯ..? ಏನಿದರ ವಿಶೇಷತೆ..? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವಾಟ್ಸಾಪ್​ ಚಾನೆಲ್​ಗಳಲ್ಲಿ (Whatsapp pool) ಸಮೀಕ್ಷೆಗಳನ್ನು ಹಂಚಿಕೊಳ್ಳುವ ವೈಶಿಷ್ಟ್ಯವನ್ನು ನೀಡುವ ಬಗ್ಗೆ ಮೆಟಾ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಅಂದರೆ ನೀವು ಇಲ್ಲಿ ಯಾವುದೇ ಪೋಲ್​ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಪ್ರವೇಶಿಸಬಹುದಾದ Android 2.23.24.12 ಆವೃತ್ತಿಯ ಇತ್ತೀಚಿನ WhatsApp ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ನೀಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಮೊಬೈಲ್​ ನಂಬರ್​​ 6,7,8 ಅಥವಾ 9 ಅಂಕೆಯಿಂದಲೇ ಆರಂಭಗೊಳ್ಳುವ ಹಿಂದಿನ ಸಿಕ್ರೇಟ್​ ಗೊತ್ತೇ..?

ವಾಟ್ಸಾಪ್​ ಚಾನೆಲ್​ನ ಅಡ್ಮಿನ್​ ಯಾವುದೇ ವಿಷಯಗಳ ಬಗ್ಗೆ ಇಲ್ಲಿ ಸಮೀಕ್ಷೆ ನಡೆಸುವ ಮೂಲಕ ಅಭಿಪ್ರಾಯ ಸಂಗ್ರಹ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ವಾಟ್ಸಾಪ್​​ನಲ್ಲಿ ಈ ಹೊಸ ಅಪ್​ಡೇಟ್​ ಬರಲಿದೆ ಎನ್ನಲಾಗಿದೆ. ವಾಟ್ಸಾಪ್​ ಚಾನೆಲ್​ಗಳಲ್ಲಿ ಸಮೀಕ್ಷೆಗಳನ್ನು ನಡೆಸಲು ಅಡ್ಮಿನ್​ಗೆ ಸಾಧ್ಯವಾಗುತ್ತದೆ.

whatsapp to soon allow channel admins to share polls reports
Image credit to Original Source

ನಿಮ್ಮ ಸಂಭಾಷಣೆಗಳು ಹಾಗೂ ಗುಂಪುಗಳಂತೆಯೇ ಈ ಸಮೀಕ್ಷೆಗಳು ಉತ್ತರವನ್ನು ನಿಮ್ಮ ಒಂದು ಆಯ್ಕೆಯ ಮೂಲಕ ನೀಡಬಹುದಾಗಿದೆ. ಇದು ಥೇಟ್​ ಮತದಾನ ಪ್ರಕ್ರಿಯೆಯ ತರವೇ ಇರಲಿದೆ. ಈ ಪೋಲಿಂಗ್​ ಮೂಲಕ ನೀವು ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಬಹುದಾಗಿದೆ. ಅಲ್ಲದೇ ಇದು ಸಿಕ್ರೇಟ್​ ಕೂಡ ಆಗಿ ಇರಲಿದೆ.

ಅಲ್ಲದೆ ಈ ಮತದಾನ ಪ್ರಕ್ರಿಯೆ ನಡೆಯುವಾಗ ಯಾರು ಯಾವುದಕ್ಕೆ ಮತ ಹಾಕಿದರು ಎಂಬ ವಿಚಾರವನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ವರದಿಗಳು ಮಾಹಿತಿ ನೀಡಿವೆ. ಇದರರ್ಥ ಏನೆಂದರೆ ನೀವು ಯಾವುದೇ ಒಂದು ವಾಟ್ಸಾಪ್​ ಚಾನೆಲ್​ನ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಹೆಸರು ಎಲ್ಲಿಯೂ ರಿವೀಲ್​ ಆಗುವುದಿಲ್ಲ.

ಇದನ್ನೂ ಓದಿ : ಮೊಬೈಲ್‌ನಲ್ಲಿ ಹೆಚ್ಚು ರೀಲ್ಸ್‌ ನೋಡೋ ಅಭ್ಯಾಸವಿದೆಯಾ ? ಹಾಗಾದ್ರೆ ನಿಮ್ಮ ಕಣ್ಣನ್ನೂ ಕಾಡಬಹುದು ಮೆಳ್ಳೆಗಣ್ಣಿನ ಸಮಸ್ಯೆ

ನೀವು ಯಾರಿಗೆ ಮತ ಹಾಕಿದ್ದೀರಿ ಎನ್ನುವುದು ಚಾನೆಲ್​ನ ಅಡ್ಮಿನ್​ ಆಗಲಿ ಅಥವಾ ಚಾನೆಲ್​ನ ಇತರೆ ಯಾವುದೇ ಸದಸ್ಯರಿಗೆ ಮಾಹಿತಿ ತಿಳಿಯುವುದಿಲ್ಲ. ಹೀಗಾಗಿ ನೀವು ನಿಮ್ಮ ಅಭಿಪ್ರಾಯವನ್ನು ಯಾವುದೇ  ಭಯವಿಲ್ಲದೇ ಶೇರ್​ ಮಾಡಬಹುದಾಗಿದೆ. ಚಾನೆಲ್​ನ ಅಡ್ಮಿನ್​ಗಳಿಗೆ ತನ್ನ ಚಾನೆಲ್​ನಲ್ಲಿ ಇರುವ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಲು ಈ ವೈಶಿಷ್ಟ್ಯವು ನಿಜಕ್ಕೂ ಅನುಕೂಲಕಾರಿಯಾಗಿದೆ. ಇದರಿಂದ ವಾಟ್ಸಾಪ್​ ಚಾನೆಲ್​ನ ಚಟುವಟಿಕೆಗಳಲ್ಲಿ ಸದಸ್ಯರೂ ಸಹ ಭಾಗಿಯಾದಂತೆ ಆಗುತ್ತದೆ.

whatsapp to soon allow channel admins to share polls reports

Comments are closed.