Exclusive: Srinivas Chandrasekaran Video analyst: ಭಾರತ ವಿರುದ್ಧ ಬಾಂಗ್ಲಾದೇಶದ ಐತಿಹಾಸಿಕ ಸರಣಿ ಗೆಲುವಿನ ಹಿಂದೆ ಕನ್ನಡಿಗನ ಕಮಾಲ್

ಮೀರ್’ಪುರ:(Exclusive: Srinivas Chandrasekaran Video analyst) ಪ್ರವಾಸಿ ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಆತಿಥೇಯ ಬಾಂಗ್ಲಾದೇಶ (India vs Bangladesh ODI Series) ಗೆದ್ದುಕೊಂಡಿದೆ. ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಬಳಗಕ್ಕೆ ಶಾಕ್ ಕೊಟ್ಟಿರುವ ಬಾಂಗ್ಲಾ ಸರಣಿ ಕೈವಶ ಮಾಡಿಕೊಂಡಿದೆ.

(Exclusive: Srinivas Chandrasekaran Video analyst)ಬಾಂಗ್ಲಾದೇಶದ ಈ ಐತಿಹಾಸಿಕ ಸಾಧನೆಯ ಹಿಂದೆ ಕರ್ನಾಟಕದವರೊಬ್ಬರ ಪಾತ್ರವಿದೆ. ಬಾಂಗ್ಲಾದೇಶ ತಂಡದ ಯಶಸ್ಸಿನಲ್ಲಿ ಅವರ ಪಾತ್ರವೂ ದೊಡ್ಡದು. ಅವರು ಬೇರಾರೂ ಅಲ್ಲ, ಈ ಹಿಂದೆ ಕರ್ನಾಟಕ ರಣಜಿ ತಂಡದ ವಿಡಿಯೊ ವಿಶ್ಲೇಷಕರಾಗಿದ್ದ (Video analyst) ಶ್ರೀನಿವಾಸ್ ಚಂದ್ರಶೇಖರನ್.

ಕಳೆದ ನಾಲ್ಕೈದು ವರ್ಷಗಳಿಂದ ಶ್ರೀನಿವಾಸ್ ಬಾಂಗ್ಲಾದೇಶ ತಂಡದ ವೀಡಿಯೊ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೆರೆಯ ಹಿಂದಿನ ಮಾಸ್ಟರ್ ಮೈಂಡ್ ಎಂದೇ ಕರೆಸಿಕೊಂಡಿರುವ ಶ್ರೀನಿವಾಸ್ ಚಂದ್ರಶೇಖರನ್, ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾ ದೇಶ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದ್ದಾರೆ.

ಮೂಲತಃ ತಮಿಳುನಾಡಿನ ಚೆನ್ನೈನವರಾದ ಶ್ರೀನಿವಾಸ್ ಚಂದ್ರಶೇಖರನ್ ಬದುಕು ಕಟ್ಟಿಕೊಂಡದ್ದು ಕರ್ನಾಟಕದಲ್ಲಿ. ಕರ್ನಾಟಕ ತಂಡ 2013-14 ಮತ್ತು 2014-15ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದಾಗ ಕರ್ನಾಟಕ ತಂಡಕ್ಕೆ ಶ್ರೀನಿವಾಸ್ ವಿಡಿಯೊ ವಿಶ್ಲೇಷಕರಾಗಿದ್ದರು. ಅದಕ್ಕೂ ಮೊದಲು ಕರ್ನಾಟಕ ಪ್ರೀಮಿಯರ್ ಲೀಗ್’ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ವೀಡಿಯೊ ಅನಾಲಿಸ್ಟ್ ಆಗಿದ್ದ ಶ್ರೀನಿವಾಸ್ ಚಂದ್ರಶೇಖರನ್ ಅವರನ್ನು ಕರ್ನಾಟಕ ತಂಡಕ್ಕೆ ಪರಿಚಯಿಸಿದ್ದು ಈಗಿನ ಭಾರತ ತಂಡದ ಉಪನಾಯಕ ಕೆ.ಎಲ್ ರಾಹುಲ್. ರಾಹುಲ್ ಅವರಿಂದ ಕರ್ನಾಟಕ ತಂಡಕ್ಕೆ ಬಂದ ಶ್ರೀನಿವಾಸ್ ನಂತರ ಹಿಂದಿರುಗಿ ನೋಡಿದ್ದೇ ಇಲ್ಲ.

ಇದನ್ನೂ ಓದಿ:Batting trio failure: ತ್ರಿಮೂರ್ತಿಗಳ ಭಾರೀ ವೈಫಲ್ಯ… ಹೀಗಾದ್ರೆ ವಿಶ್ವಕಪ್ ಗೆಲ್ಲೋದು ಹೇಗೆ?

ಇದನ್ನೂ ಓದಿ:Tamil Talaiwas enters play off : ಅದ್ಭುತ ಕಂಬ್ಯಾಕ್‌ನೊಂದಿಗೆ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟ ತಮಿಳ್ ತಲೈವಾಸ್

ಕರ್ನಾಟಕ ತಂಡದಲ್ಲಿ 4 ವರ್ಷ ವೀಡಿಯೊ ವಿಶ್ಲೇಷಕರಾಗಿ ಕೆಲಸ ಮಾಡಿದ ಶ್ರೀನಿವಾಸ್ ನಂತರ ಐಪಿಎಲ್’ನಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡದ ವೀಡಿಯೊ ಅನಾಲಿಸ್ಟ್ ಆಗಿ ನೇಮಕಗೊಂಡರು. ಈಗಲೂ ಸನ್ ರೈಸರ್ಸ್ ತಂಡದ ವೀಡಿಯೊ ವಿಶ್ಲೇಷಕರಾಗಿರುವ ಶ್ರೀನಿವಾಸ್, ಬಾಂಗ್ಲಾದೇಶ ತಂಡದ ಪರ ಫುಲ್ ಟೈಮ್ ಆಗಿ ಕೆಲಸ ಮಾಡುತ್ತಿದ್ದಾರೆ.

Exclusive: Srinivas Chandrasekaran Video analyst Kannadiga’s Kamal is behind Bangladesh’s historic series win

Comments are closed.