WhatsApp : ಕಾಂಟಾಕ್ಟ್‌ ನಂಬರ್‌ ಸೇವ್‌ ಮಾಡ್ದೆನೇ ವ್ಯಾಟ್ಸಅಪ್‌ನಲ್ಲಿ ಮೆಸೇಜ್‌ ಕಳುಹಿಸಬಹುದು! ಹೇಗೆ ಗೊತ್ತೇ‌?

Meta ದ ಒಡೆತನದಲ್ಲಿರುವ WhatsApp ಬಹು ಬೇಡಿಕೆಯ ಇನಸ್ಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನರು ತಮ್ಮ ಕುಟುಂಬ, ಗೆಳಯರ ಬಳಗ ಸಂಪರ್ಕಿಸಲು ಉಪಯೋಗಿಸುವ ಆಪ್‌. ಅದಲ್ಲದೇ ನಮ್ಮ ಕೆಲಸಗಳಿಗೆ ಸಂಬಂಧ ಪಟ್ಟ ಜನರನ್ನು ಸಂಪರ್ಕಿಸಲು ಸಹ ಇದನ್ನೇ ಉಪಯೋಗಿಸುತ್ತವೆ. ವ್ಯಾಟ್ಸಅಪ್‌ನಲ್ಲಿ ಮೆಸೇಜ್‌ ಕಳುಹಿಸಲು ವ್ಯಕ್ತಿಯ ಸಂಪರ್ಕ ಸಂಖ್ಯೆಯನ್ನು ನಮ್ಮ ಕಾಂಟಾಕ್ಟ್‌ ಲಿಸ್ಟ್‌ನಲ್ಲಿ ಸೇವ್‌ ಮಾಡಿಕೊಂಡಿರಬೇಕು ಎಂದು ಎಲ್ಲರಿಗೂ ತಿಳಿದೇ ಇದೆ.

ಆದರೆ, ಕೆಲವೊಮ್ಮೆ ಕೆಲಸದ ನಿಮಿತ್ತ ಮಾತ್ರ ನಮಗೆ ವ್ಯಾಟ್ಸಅಪ್‌ನಲ್ಲಿ ಮೆಸೇಜ್‌ ಸೆಂಡ್‌ ಮಾಡುವುದಿರುತ್ತದೆ. ನಂತರ ಅದರ ಅವಶ್ಯಕತೆ ಇರವುದಿಲ್ಲ ಆಗ ನಾವು ಅವರ ಸಂಪರ್ಕ ಸಂಖ್ಯೆಯನ್ನು ನಮ್ಮ ಕಾಂಟಾಕ್ಟ್‌ ಲಿಸ್ಟ್‌ನಲ್ಲಿ ಸೇರಿಸಲು ಇಚ್ಛಿಸುವುದಿಲ್ಲ. ಇನ್ನು ಗೌಪ್ಯತೆಯ ಬಗ್ಗೆ ಕಾಳಜಿವಹಿಸುವವರಂತೂ ಆ ರೀತಿಯ ಅಪರಿಚಿತರ ಸಂಪರ್ಕವನ್ನು ಬಯಸುವದೇ ಇಲ್ಲ.

ಅದಕ್ಕೊಂದು ದಾರಿಯಿದೆ. ನೀವು ಯಾರದ್ದಾದರೂ ಫೋನ್‌ ನಂಬರ್‌ ಅನ್ನು ನಿಮ್ಮ ಕಾಂಟಾಕ್ಟ್‌ ಲಿಸ್ಟ್‌ನಲ್ಲಿ ಸೇವ್‌ ಮಾಡದೆಯೂ ಅವರಿಗೆ ಮೆಸೇಜ್‌ ಕಳುಹಿಸ ಬಹುದಾಗಿದೆ. ಆದರೆ, ವ್ಯಾಟ್ಸಅಪ್‌ನಲ್ಲಿ ನೇರವಾಗಿ ಕಳುಹಿಸಲಾಗುವುದಿಲ್ಲ. ಅದಕ್ಕಾಗಿ ಕೆಲವೊಂದು ಹೆಚ್ಚುವರಿ ಹಂತಗಳನ್ನು ಮಾಡಬೇಕಾಗುತ್ತದೆ.

ಇದನ್ನೂ ಓದಿ: WhatsApp Web ನಿಮ್ಮ ಮೆಸ್ಸೇಜ್‌ ಡಿಲೀಟ್‌ ಆಗಿದೆಯೇ? ಅದನ್ನು ಪುನಃ ಪಡೆಯಬಹುದು! ಹೇಗೆ ಅಂತೀರಾ?

ವ್ಯಾಟ್ಸಅಪ್‌ನಲ್ಲಿ ಫೋನ್‌ ನಂಬರ್‌ ಸೇವ್‌ ಮಾಡ್ದೇನೆ ಮೆಸೇಜ್‌ ಕಳುಹಿಸುವುದು ಹೇಗೆ?

  1. ನಿಮ್ಮ ಸ್ಮಾರ್ಟಫೋನ್‌ನಲ್ಲಿ ಯಾವುದಾದರೂ ಒಂದು ಬ್ರೌಸರ್‌ ತೆರೆಯಿರಿ. ಸೆರ್ಚ್‌ ಬಾರ್‌ನಲ್ಲಿ “http://wa.me/phonenumber” ಬರೆಯಿರಿ.
    URL ನಲ್ಲಿರುವ ಫೋನ್‌ ನಂಬರ್‌ (phonenumber) ನಮೂದಿಸುವ ಮೊದಲು ಕಂಟ್ರಿ ಕೋಡ್‌ ನಮೂದಿಸಲೇಬೇಕು. ಹೇಗೆಂದರೆ “http://wa.me/919988112233”.
  2. ನಂತರ ಲಿಂಕ್‌ ತೆರೆಯಲು ಟ್ಯಾಪ್‌ ಮಾಡಿ.
  3. ಈಗ ಒಂದು ಹಸಿರು ಬಣ್ಣದ ಬಾಕ್ಸ್‌ ಕಾಣಿಸುವುದು ಅದರಲ್ಲಿ ಕಂಟಿನ್ಯೂ ಟು ಚಾಟ್‌ ಎಂದಿರುವುದು. ಮತ್ತೆ ಅದನ್ನು ಟ್ಯಾಪ್‌ ಮಾಡಿ ಆಗ ವ್ಯಾಟ್ಸಅಪ್‌ ಅಕೌಂಟ್‌ ತೆರೆದುಕೊಳ್ಳುವುದು.
  4. ಅಲ್ಲಿ ಆ ನಂಬರ್‌ನ ಚಾಟ್‌ ವಿಂಡೋ ತೆರೆದುಕೊಳ್ಳುವುದು. ಈಗ ಕಳುಹಿಸಬೇಕಾದ ಮೆಸೇಜ್‌ ಅನ್ನು ಆ ವ್ಯಕ್ತಿಯ ನಂಬರ್‌ಗೆ ಕಳುಹಿಸಬಹುದು.

ಇದನ್ನೂ ಓದಿ: WhatsApp ನಲ್ಲಿ ಬರುವ ಸುಳ್ಳು ಸುದ್ದಿಗಳು ಯಾವುದು ಎಂದು ನೀವು ತಿಳಿಯಬೇಕೆ? ಈ ಟ್ರಿಕ್ಸ್‌ ಉಪಯೋಗಿಸಿ ನೋಡಿ!

WhatsApp How to send messages to someone without saving their contact number

Comments are closed.