Arecanut Farming : ಭಾರೀ ಬೇಡಿಕೆ ಪಡೆದುಕೊಂಡ ಈ ಅಡಿಕೆ ಗಿಡ! ಕುಬ್ಜ ತಳಿ ಅಡಿಕೆ ಗಿಡದ ಬಗ್ಗೆ ನಿಮಗೆ ತಿಳಿದಿದೆಯೇ?

ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕ್ರೇಂದ್ರ ‘ವಿಟಿಎಲ್‌ಎಎಚ್‌–1’ ಮತ್ತು’ವಿಟಿಎಲ್‌ಎಎಚ್‌–2 ‘ ಅನ್ನುವ ಕುಬ್ಜ ಅಡಿಕೆ (Arecanut Farming) ತಳಿಗಳನ್ನು ಸುಮಾರು 15 ವರ್ಷಗಳ ಹಿಂದೆ ಪ್ರಪಂಚಕ್ಕೆ ಪರಿಚಯಿಸಿತ್ತು. 2006 07ರಲ್ಲಿ ‘ವಿಟಿಎಲ್‌ಎಎಚ್‌–1’ ಮತ್ತು’ವಿಟಿಎಲ್‌ಎಎಚ್‌–2 ‘ ಹೆಸರಿನ ಎರಡು ಕುಬ್ಜ ತಳಿಯ ಅಡಿಕೆ ಗಿಡಗಳನ್ನು(Arecanut Farming) ಸಂಶೋಧನಾ ಕೇಂದ್ರ ಬಿಡುಗಡೆ ಮಾಡಿತ್ತು. ಇದು ಭೂಮಿಯ ಮಟ್ಟದಿಂದ ಒಂದು ಅಡಿ ಎತ್ತರಕ್ಕೆ ಬೆಳೆಯುವ ಗಿಡ್ಡ ತಳಿಯಾಗಿದೆ. ಈ ಹೈಬ್ರಿಡ್‌ ತಳಿಯ ಗಿಡಗಳು 15 ವರ್ಷಗಳ ತಮ್ಮ ಬದುಕಿನಲ್ಲಿ ಅಷ್ಟೇ ಎತ್ತರದಲ್ಲೇ ಫಸಲು ಕೊಡುತ್ತದೆ. ಈ ಜಾತಿಯ ಗಿಡಗಳ ಗೊನೆಗಳನ್ನು ನಿಂತುಕೊಂಡೇ ಕೊಯ್ಯಬಹುದಾಗಿದೆ. ಈ ಗಿಡ್ಡ ಮರಗಳ ನಿರ್ವಹಣೆ, ಔಷಧ ಸಿಂಪರಣೆ ಮತ್ತು ಕೊಯ್ಲು ಅತಿ ಸುಲಭ. ಆದರೆ ಈ ತಳಿಗಳು ಎತ್ತರದ ತಳಿಗಳಿಗೆ ಹೋಲಿಸಿದರೆ ಕಡಿಮೆ ಇಳುವರಿಯನ್ನು ಕೊಡುತ್ತದೆ. ಸಾಮಾನ್ಯವಾಗಿ ಎತ್ತರದ ಮರಗಳು ಒಂದು ವರ್ಷಕ್ಕೆ 4 ಕೆಜಿವರೆಗೆ ಅಡಿಕೆ ನೀಡಿದರೆ, ಈ ಕುಬ್ಜ ತಳಿಗಳು ಎರಡೂವರೆ ಕೆಜಿಗಳಷ್ಟು ಮಾತ್ರ ಅಡಿಕೆ ನೀಡುತ್ತದೆ.

ಈ ಕುಬ್ಜ ತಳಿಯು ತಾಯಿ ಮರ ಮತ್ತು ತಂದೆ ಮರಗಳ ಸಂಕರದಿಂದ ಮಾಡಿದ ಹೈಬ್ರಿಡ್‌ ಸಸಿಯಾಗಿದೆ. ಆದರೆ ಈ ಹೊಸ ಹೈಬ್ರಿಡ್‌ ತಳಿಯ ಗಿಡದಿಂದ ಮತ್ತೆ ಸಂಕರ ಮಾಡಲು ಆಗುವುದಿಲ್ಲ. ಹೊಸ ಸಿಸಿ ಬೇಕೆಂದರೆ ಮತ್ತೆ ಮೊದಲಿನರೀತಿಯಲ್ಲಿಯೇ ಪ್ರತಿ ವರ್ಷ ತಾಯಿ ಮರ– ಮತ್ತು ತಂದೆ ಮರಗಳ ಸಂಕರದಿಂದಲೇ ಪಡೆಯಬೇಕಾಗುತ್ತದೆ. ಇದು ಸ್ವಲ್ಪ ಶ್ರಮದಾಯಕವಾಗಿದ್ದು, ಕಾರ್ಮಿಕರ ಅಗತ್ಯವೂ ಹೆಚ್ಚೇ. ಈ ಕಾರಣದಿಂದ ವರ್ಷಕ್ಕೇ ಗರಿಷ್ಠ 3000 ಕುಬ್ಜ ತಳಿಗಳ ಗಿಡಗಳನ್ನಷ್ಟೇ ಉತ್ಪಾದಿಸಲಾಗುತ್ತದೆ ಎಂದು ಸಿಪಿಸಿಆರ್‌ಐ ಹೇಳಿದೆ. ಇದರ ಬೇಡಿಕೆ ಹೋಲಿಸಿದರೆ ಸಸಿಗಳ ಉತ್ಪಾದನೆ ಕಡಿಮೆಯೇ.

ಇದನ್ನೂ ಓದಿ: ­Mango Farming: ಕೃಷಿಕರೇ ಗಮನಿಸಿ: ಮಾವಿನ ಹಣ್ಣಿನ ನೊಣದ ನಿಯಂತ್ರಣಕ್ಕೆ ಮೋಹಕ ಬಲೆ ಬಳಕೆ; ಹೇಗೆ ತಯಾರಿಸುವುದು?

ಎಲ್ಲೆಲ್ಲಿ ಬೇಡಿಕೆ ಹೆಚ್ಚು :
ಕುಬ್ಜ ಅಡಿಕೆ ತಳಿಯ ಮಾದರಿ ತೋಟಗಳನ್ನು 3 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೂಪಿಸಲಾಗಿತ್ತ. ಈಗ ಈ ಮಾದರಿಯ ತೋಟಗಳ ರಚನೆಗೆ ಬೇಡಿಕೆ ಬಂದಿದೆ ಎಂದು ವಿಟ್ಲದ ಸಿಪಿಸಿಆರ್‌ಐನ ತಳಿ ಅಭಿವೃದ್ಧಿ ವಿಭಾಗದ ವಿಜ್ಞಾನಿ ನಾಗರಾಜ್‌ ಹೇಳುತ್ತಾರೆ. ಅವರ ಪ್ರಕಾರ ಕರ್ನಾಟಕ, ಕೇರಳ, ಆಂದ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳು ಸೇರಿದಂತೆ ಇನ್ನು ಸುಮಾರು ಹತ್ತು ರಾಜ್ಯಗಳಿಂದ ಅಡಿಕೆಯ ಈ ಕುಬ್ಜ ತಳಿಗೆ ಬೇಡಿಕೆ ಇದೆ.


ಇದನ್ನೂ ಓದಿ: Apps For Farmers ಕೃಷಿ ಸಮಸ್ಯೆ ನಿವಾರಿಸುವ ಮಾಂತ್ರಿಕ ಕೈಪಿಡಿ

(Arecanut Farming high demand for vtlah1and vtlah2 dwarf areca nut variety plant)

Comments are closed.