WhatsApp Latest Feature : ಇನ್ಮುಂದೆ ವಾಟ್ಸಪ್‌ನಲ್ಲಿ ಒರಿಜನಲ್‌ ಕ್ವಾಲಿಟಿಯಲ್ಲೇ ಫೋಟೋ ಶೇರ್‌ ಮಾಡಬಹುದು; ಹೇಗೆ ಗೊತ್ತಾ…

ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುವ ಇನ್ಸ್‌ಟಂಟ್‌ ಮೆಸ್ಸೇಜಿಂಗ್‌ ಆಪ್‌ (Instant Messaging App) ಎಂದರೆ ಅದು ವಾಟ್ಸಪ್‌ (WhatsApp). ಮೆಟಾ (Meta) ದ ಒಡೆತನದಲ್ಲಿರುವ ವಾಟ್ಸಪ್‌, ಹಲವಾರು ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಈ ಮೆಸೇಜಿಂಗ್‌ ವೇದಿಕೆಯಲ್ಲಿ ಮಾಧ್ಯಮ ಫೈಲು (Media Files) ಗಳನ್ನು ಹಂಚಿಕೊಳ್ಳುವಾಗ ಯಾವಾಗಲೂ ಕೇಳಿಬರುವ ವಿಷಯವೆಂದರೆ ಅದು ಚಿತ್ರಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು. ಮತ್ತು ಇದರಿಂದ ಕೆಲವು ಸಲ ಗೊಂದಲವನ್ನು ಉಂಟುಮಾಡುತ್ತದೆ. ಕೆಲವರಿಗೆ ಇದು ಬಹಳ ಚಿಕ್ಕ ವಿಷಯ ಆದರೆ, ಕೆಲವರಿಗೆ ಹೆಚ್ಚಿನ ಗುಣಮಟ್ಟದ ಅವಶ್ಯಕತೆಯಿರುತ್ತದೆ. ಅದಕ್ಕಾಗಿ ವಾಟ್ಸಪ್‌ ಈಗ ಹೊಸ ವೈಶಿಷ್ಟ್ಯವೊಂದನ್ನು (WhatsApp Latest Feature) ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ.

WeBetaInfo ವರದಿಯ ಪ್ರಕಾರ, ವಾಟ್ಸಪ್‌ ಈ ಹೊಸ ವೈಶಿಷ್ಟ್ಯವನ್ನು ಅಳವಡಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಬಳಕೆದಾರರು ತಮ್ಮ ಮೂಲ ಗುಣಮಟ್ಟದಲ್ಲಿಯೇ ಚಿತ್ರಗಳನ್ನು ಡೆಸ್ಕ್‌ಟಾಪ್‌ ಬೀಟಾದಲ್ಲಿ ಕಳುಹಿಸಲು ಅನುವು ಮಾಡಿಕೊಡಲಿದೆ. ಈ ಹೊಸ ವೈಶಿಷ್ಟ್ಯದಿಂದ ಬಳಕೆದಾರರು ತಮ್ಮ ಚಿತ್ರಗಳನ್ನು ಕಳುಹಿಸುವಾಗ ಅದು ಗುಣಮಟ್ಟ ಅಥವಾ ರೆಸಲ್ಯೂಷನ್‌ ಕಳೆದುಕೊಳ್ಳುವ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ ಎಂದು WABetaInfo ವರದಿ ಮಾಡಿದೆ.

ಈ ವೈಶಿಷ್ಟ್ಯವು ಬಳಕೆದಾರರು ತಮ್ಮ ಮೂಲ ಗುಣಮಟ್ಟದಲ್ಲೇ (Original size) ಚಿತ್ರಗಳನ್ನು ಕಳುಹಿಸಲು ಅನುಮತಿಸುತ್ತದ. ಅವುಗಳ ರೆಸಲ್ಯೂಶನ್‌ನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಹೀಗಾಗಿ ಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತದೆ. ಚಿತ್ರಗಳನ್ನು ಕಳುಹಿಸುವಾಗ ಸಂಭವಿಸುವ ಪ್ರಸ್ತುತ ಇಮೇಜ್ ಕಂಪ್ರೆಷನ್‌ಗೆ ಹೋಲಿಸಿದರೆ ಇದು ಉತ್ತಮ ಸುಧಾರಣೆಯಾಗಿದೆ.

ಈ ಹೊಸ ವೈಶಿಷ್ಟ್ಯವು ಬೀಟಾ ಪರೀಕ್ಷಕರಿಗೆ ಲಭ್ಯವಾದಾಗ, ಅವರು ಇನ್ನೂ ಸ್ಟ್ಯಾಂಡರ್ಡ್ ಕಂಪ್ರೆಷನ್ ವಿಧಾನವನ್ನು ಬಳಸಿಕೊಂಡು ಚಿತ್ರಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇದು ಶೇಖರಣಾ ಸ್ಥಳವನ್ನು ಉಳಿಸಲು ಬಯಸುವವರಿಗೆ ಉಪಯುಕ್ತವಾಗಿರುತ್ತದೆ. ಹಾಗೂ ಇದು ಯಾವಾಗಲೂ ಡಿಫಾಲ್ಟ್ ಆಯ್ಕೆಯಾಗಿರುತ್ತದೆ.

ಫೋಟೋಗಳನ್ನು ಅವುಗಳ ಮೂಲ ಗುಣಮಟ್ಟದಲ್ಲಿ ಕಳುಹಿಸುವ ಸಾಮರ್ಥ್ಯವು ಪ್ರಸ್ತುತ ಅಭಿವೃದ್ಧಿಯಲ್ಲಿದೆ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಭವಿಷ್ಯದ ನವೀಕರಣದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಈ ವೈಶಿಷ್ಟ್ಯವು ಬಳಕೆದಾರರಿಗೆ ಅವರು ಕಳುಹಿಸುವ ಫೋಟೋಗಳ ಗುಣಮಟ್ಟದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಒದಗಿಸಲಿದೆ. ವಿಶೇಷವಾಗಿ ಫೋಟೋವನ್ನು ಅದರ ಮೂಲ ಗುಣಮಟ್ಟದಲ್ಲಿ ಕಳುಹಿಸುವುದು ಅವಶ್ಯಕತೆಯಿದ್ದಾಗ.

ಇತ್ತೀಚೆಗೆ, ಐಒಎಸ್ ಬೀಟಾ ಬಳಕೆದಾರರು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 100 ಮೀಡಿಯಾ ಫೈಲ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವ ವೈಶಿಷ್ಟ್ಯವನ್ನು ಹೊರತರುವುದಾಗಿ WhatsApp ಘೋಷಿಸಿದೆ. ಅಂತಿಮವಾಗಿ ಅದರ ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ : Best Mileage Scooters : ಸ್ಕೂಟರ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಮೈಲೇಜ್‌ ಕೊಡುವ ಸ್ಕೂಟರ್‌ಗಳು

ಇದನ್ನೂ ಓದಿ : Oppo Find N2 Flip : ಫೆಬ್ರವರಿ 15 ರಂದು ಮೊದಲ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿರುವ ಓಪ್ಪೋ; ಹೇಗಿದೆ ಓಪ್ಪೋ ಫೈಂಡ್‌ N2 ಫ್ಲಿಪ್‌

(WhatsApp Latest Feature. We will able to send photos in their original size)

Comments are closed.