Deepika Das : ದುಬೈ ಟ್ರಿಪ್‌ನಲ್ಲಿ ಕ್ರಿಸ್ ಗೇಲ್ ಜತೆಗಿನ ಫೋಟೊ ಹಂಚಿಕೊಂಡ ದೀಪಿಕಾ ದಾಸ್ : ವೈರಲ್‌ ಆಯ್ತು ಪೋಟೋ

ನಾಗಿಣಿ ಸಿರೀಯಲ್‌ ಖ್ಯಾತಿಯ ನಟಿ ದೀಪಿಕಾ‌ ದಾಸ್ (Deepika Das) 2014ರಲ್ಲಿ ಬಿಡುಗಡೆಗೊಂಡ ಸ್ಯಾಮುವೆಲ್ ಟೋನಿ ನಿರ್ದೇಶನದ ದೂದ್ ಸಾಗರ್ ಸಿನಿಮಾ ಮೂಲಕ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.ನಂತರ ದಿನಗಳಲ್ಲಿ ನಟಿ ದೀಪಿಕಾ ದಾಸ್ ಬಳಿಕ ತೆಲುಗಿ ಏ ಮನಸೇ ಸಿನಿಮಾದಲ್ಲಿಯೂ ನಟಿಸಿದ್ದರು. ಹೀಗೆ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಅವಕಾಶ ಸಿಕ್ಕರೂ ಸಹ ನಾಗಿಣಿ ಸೀರಿಯಲ್ ಮೂಲಕ ದೀಪಿಕಾ ದಾಸ್ ಹೆಚ್ಚು ಖ್ಯಾತಿಯನ್ನು ಪಡೆದಿದ್ದಾರೆ. ಈ ಧಾರಾವಾಹಿಯಲ್ಲಿ ನಾಗಿಣಿ ಪಾತ್ರದಲ್ಲಿ ಮಿಂಚಿದ್ದ ದೀಪಿಕಾ ದಾಸ್ ಜನಪ್ರಿಯತೆ ಗಳಿಸಿದ್ದರು. ಹೀಗೆ ನಾಗಿಣಿ ಧಾರಾವಾಹಿಯಲ್ಲಿ ಮಿಂಚಿ ಖ್ಯಾತಿಯನ್ನು ಗಳಿಸಿದ ಕಾರಣದಿಂದಾಗಿಯೇ ದೀಪಿಕಾ ದಾಸ್ ಕನ್ನಡದ ಜನಪ್ರಿಯ ಮನರಂಜನಾ ರಿಯಾಲಿಟಿ ಶೋ ಬಿಗ್ ಬಾಸ್‌ಗೂ ಸಹ ಸ್ಪರ್ಧಿಯಾಗಿ ಎಂಟ್ರಿ ಕೊಡುವ ಅವಕಾಶವನ್ನು ಎರಡೆರಡು ಬಾರಿ ಗಿಟ್ಟಿಸಿಕೊಂಡಿದ್ದರು. ಸದ್ಯ ನಟಿ ದೀಪಿಕಾ ದಾಸ್‌ ದುಬೈ ಟ್ರಿಪ್‌ನಲ್ಲಿ ಕ್ರಿಸ್ ಗೇಲ್ ಜತೆಗಿನ ಫೋಟೊ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಕಳೆದ ವರ್ಷ ನಡೆದ ಒಂಬತ್ತನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಸಹ ಸ್ಪರ್ಧಿಯಾಗಿ ಭಾಗವಹಿಸಿದ್ದ ದೀಪಿಕಾ ದಾಸ್ ಸದ್ಯ ವಿದೇಶಿ ಪ್ರವಾಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹೌದು, ದುಬೈ ಪ್ರವಾಸ ಕೈಗೊಂಡಿರುವ ದೀಪಿಕಾ ದಾಸ್ ತಮ್ಮ ಪ್ರವಾಸದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಪ್ರವಾಸದಲ್ಲಿ ಕ್ರಿಸ್ ಗೇಲ್ ಅವರನ್ನೂ ಸಹ ಭೇಟಿಯಾಗಿರುವ ದೀಪಿಕಾ ದಾಸ್ ಗೇಲ್ ಜತೆಗೆ ಫೋಟೊಗೆ ಪೋಸ್ ಕೊಟ್ಟು ಫೋಟೊ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೊಗಳನ್ನೂ ಸಹ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗಳು ವೈರಲ್ ಆಗಿವೆ.

ದೀಪಿಕಾ ದಾಸ್ ಕ್ರಿಸ್ ಗೇಲ್ ಜತೆ ಕ್ಲಿಕ್ಕಿಸಿಕೊಂಡ ಮೂರು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ದಟ್ಸ್ ಎ ಗೇಲ್ ಮೂಮೆಂಟ್. ಅತಿ ಅನಿರೀಕ್ಷಿತ ಭೇಟಿ, ನಮ್ಮ ಆರ್‌ಸಿಬಿ ದಿನಗಳು ನೆನಪಾದವು, ಆರ್‌ಸಿಬಿ ಫ್ಯಾನ್ ಗರ್ಲ್’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ದೀಪಿಕಾ ದಾಸ್ ದುಬೈ ಪ್ರವಾಸದಲ್ಲಿ ಇರುವ ವೇಳೆ ಗೇಲ್ ಅನಿರೀಕ್ಷಿತವಾಗಿ ಸಿಕ್ಕರು ಎಂಬುದನ್ನು ತಿಳಿಸಿದ್ದು ಫೋಟೊ ನೋಡಿದ ಕೂಡಲೇ ಭೇಟಿ ಹಿಂದಿನ ಕಥೆ ಏನು ಎಂದು ಕೇಳುವವರಿಗೆ ಮೊದಲೇ ಉತ್ತರವನ್ನು ನೀಡಿಬಿಟ್ಟಿದ್ದಾರೆ.

ಇನ್ನು ದೀಪಿಕಾ ದಾಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೊಗೆ ನೆಟ್ಟಿಗರು ಕಾಮೆಂಟ್ ಮಾಡಲು ಇರುವ ಆಯ್ಕೆಯನ್ನೇ ರದ್ದುಗೊಳಿಸಿಬಿಟ್ಟಿದ್ದಾರೆ. ಈ ಫೋಟೊಗಳನ್ನು ನೆಟ್ಟಿಗರು ಲೈಕ್ ಮಾಡಬಹುದೇ ಹೊರತು ಕಾಮೆಂಟ್ ಮಾಡಲು ಸಾಧ್ಯವಿಲ್ಲ. ಕೆಲ ನೆಟ್ಟಿಗರು ಈ ಫೋಟೊಗೆ ಅಸಂಬದ್ಧ ಹಾಗೂ ಅಸಹ್ಯಕರವಾದ ಕಾಮೆಂಟ್ ಹಾಕುತ್ತಾರೆ ಎಂಬ ಕಾರಣದಿಂದಾಗಿ ದೀಪಿಕಾ ದಾಸ್ ಮುನ್ನೆಚ್ಚರಿಕೆ ವಹಿಸಿ ಈ ರೀತಿ ಕಾಮೆಂಟ್ ಆಫ್ ಮಾಡಿರಬಹುದು.

ಇದನ್ನೂ ಓದಿ : ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿರುವ ಸ್ಯಾಂಡಲ್‌ವುಡ್‌ನ ಲವ್‌ಸ್ಟೋರಿ ಸಿನಿಮಾಗಳು ಯಾವುವು ಗೊತ್ತಾ ?

ಇದನ್ನೂ ಓದಿ : ನಾಲ್ಕೂವರೆ ತಿಂಗಳ ಬಳಿಕ ಮಗಳೊಂದಿಗೆ ಕಾಣಿಸಿಕೊಂಡ ಧ್ರುವ ಸರ್ಜಾ ಪತ್ನಿ : ಪ್ರಿನ್ಸ್ ಫ್ಯಾನ್ಸ್ ದಿಲ್ ಖುಷ್!

ಇದನ್ನೂ ಓದಿ : ಬಾಲಿವುಡ್‌ಗೆ ಲಗ್ಗೆ ಇಟ್ಟ ಅಲ್ಲು ಅರ್ಜುನ್‌ ಯಾವ ಸಿನಿಮಾ ಗೊತ್ತಾ ?

ಇನ್ಸ್ಟಾಗ್ರಾಮ್‌ನಲ್ಲಿ ಕಾಮೆಂಟ್ ಆಫ್ ಮಾಡಿರುವ ದೀಪಿಕಾ ದಾಸ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕಾಮೆಂಟ್ ಆನ್ ಮಾಡಿ ಇಟ್ಟಿದ್ದು, ಅಲ್ಲಿ ಈ ಫೋಟೊಗಳಿಗೆ ಕೆಲ ಅಶ್ಲೀಲ ಕಾಮೆಂಟ್‌ಗಳು ಬಂದಿವೆ. ವಿದೇಶ ಪ್ರವಾಸದಲ್ಲಿ ತೊಡಗಿರುವ ಸಂದರ್ಭದಲ್ಲಿ ಕ್ರಿಸ್ ಗೇಲ್ ರೀತಿಯ ಗ್ಲೋಬರ್ ಕ್ರಿಕೆಟ್ ಸ್ಟಾರ್ ಸಿಕ್ಕರೆ ಯಾರಾದರೂ ಸಹ ಫೋಟೊ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು ಕಾಮನ್. ದೀಪಿಕಾ ದಾಸ್ ಸಹ ಅದನ್ನೇ ಮಾಡಿದ್ದಾರೆ. ಹೀಗೆ ತನ್ನ ನೆಚ್ಚಿನ ಕ್ರಿಕೆಟರ್‌ ಜತೆ ನಟಿಯರು ಫೋಟೊಗೆ ಪೋಸ್ ಕೊಟ್ಟರೆ ಕೆಟ್ಟ ಕಾಮೆಂಟ್ ಮಾಡುವಂತದ್ದು ಏನಿರುತ್ತೋ ಅನ್ನುವುದು ಅರ್ಥವಾಗಿದೇ ಇರುವುದು.

Deepika Das shared a photo with Chris Gayle on a trip to Dubai: The photo went viral.

Comments are closed.