Pune road accident: ರಸ್ತೆ ದಾಟುತ್ತಿದ್ದ ಮಹಿಳೆಯ ಗುಂಪಿಗೆ ಎಸ್‌ ಯುವಿ ಢಿಕ್ಕಿ: 5 ಮಹಿಳೆಯರ ಸಾವು, 3 ಮಂದಿಗೆ ಗಾಯ

ಪುಣೆ: (Pune road accident) ರಸ್ತೆ ದಾಟುತ್ತಿದ್ದ ಗುಂಪಿಗೆ ಎಸ್‌ಯುವಿ ಢಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಪುಣೆ ನಾಸಿಕ್-ಪುಣೆ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯ ಬಳಿಕ ಎಸ್‌ ಯುವಿ ಕಾರು ಚಾಲಕ ಅಪಘಾತದ ಸ್ಥಳದಿಂದ ಯು-ಟರ್ನ್‌ ತೆಗೆದುಕೊಂಡು ಹಿಂದಿರುಗಿದ್ದಾನೆ ಎನ್ನಲಾಗಿದೆ.

ಪುಣೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಿರೋಲಿ ಗ್ರಾಮದ ಬಳಿ ರಾತ್ರಿ 10.45 ರ ಸುಮಾರಿಗೆ 17 ಮಹಿಳೆಯರ ಗುಂಪು ಅಡುಗೆ ಕೆಲಸಕ್ಕಾಗಿ ಮದುವೆ ಮಂಟಪವನ್ನು ತಲುಪಲು ಹೆದ್ದಾರಿಯನ್ನು ದಾಟುತ್ತಿದ್ದು, ವೇಗವಾಗಿ ಬಂದ ಎಸ್‌ ಯುವಿ ಕಾರು ಮಹಿಳೆಯರ ಗುಂಪಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಸಾವನ್ನಪ್ಪಿದ್ದಾರೆ. ಇನ್ನೂ ಮೂರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಈ ಮಹಿಳೆಯರು ಪುಣೆಯಿಂದ ಪುಣೆ-ನಾಸಿಕ್ ಹೆದ್ದಾರಿಯ ಪಕ್ಕದಲ್ಲಿರುವ ಮದುವೆ ಮಂಟಪಕ್ಕೆ ಅಡುಗೆ ಕೆಲಸಕ್ಕಾಗಿ ಬಂದಿದ್ದರು. ಅವರು ಹೆದ್ದಾರಿ ದಾಟುತ್ತಿದ್ದಾಗ, ಎಸ್‌ಯುವಿ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ನಂತರ, ಎಸ್‌ಯುವಿ ಚಾಲಕನು ಯು-ಟರ್ನ್ ತೆಗೆದುಕೊಂಡು ಪುಣೆ ಕಡೆಗೆ ಹಿಂದಿರುಗಿದ್ದಾನೆ” ಎಂದು ಖೇಡ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಘಟನೆಯ ಕುರಿತು ಖೇಡ್‌ ಪೊಲೀಸ್‌ ಠಾಣೆಯಲ್ಲಿ ಅಪರಿಚಿತ ಎಸ್‌ಯುವಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸ್ಥಳದಿಂದ ಪರಾರಿಯಾದ ಚಾಲಕ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಆದಷ್ಟು ಬೇಗ ಚಾಲಕನ ಗುರುತನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Rape with drugs: ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಗೆ ಮಾದಕವಸ್ತು ನೀಡಿ ಕಾರಿನೊಳಗೆ ಅತ್ಯಾಚಾರ

ಇದನ್ನೂ ಓದಿ : Drug consumption case: ಗಂಗೊಳ್ಳಿ: ಮಾದಕ ವಸ್ತು ಸೇವನೆ ಪ್ರಕರಣ: ಮೂವರು ಅರೆಸ್ಟ್‌

ಇದನ್ನೂ ಓದಿ : Bomb Threat Call : ಗೂಗಲ್‌ನ ಮುಂಬೈ ಕಚೇರಿಗೆ ಬಾಂಬ್ ಬೆದರಿಕೆ : ಕರೆ ಮಾಡಿದವರ ಬಂಧನ

Pune road accident: SUV hits a group of women crossing the road: 5 women killed, 3 injured

Comments are closed.