WhatsApp outage triggers meme:ವಾಟ್ಸಾಪ್​ ಸೇವೆ ಡೌನ್​ : ಟ್ವಿಟರ್​ನಲ್ಲಿ ಹರಿದಾಡಿದ ತರಹೇವಾರಿ ಮೀಮ್​ಗಳು, ವಾಟ್ಸಾಪ್​​ ಕಾಲೆಳೆದ ನೆಟ್ಟಿಗರು

WhatsApp outage triggers meme : ಮೆಸೇಜ್​ಗಳನ್ನು ಕಳುಹಿಸಿಕೊಳ್ಳಲು ಪ್ರಪಂಚದಾದ್ಯಂತ ಹೆಚ್ಚಾಗಿ ಬಳಕೆ ಮಾಡುವ ಅಪ್ಲಿಕೇಶನ್​ ಅಂದರೆ ಅದು ವಾಟ್ಸಾಪ್​. ಆದರೆ ಇದೀಗ ವಾಟ್ಸಾಪ್​ ಪ್ರಪಂಚಾದ್ಯಂತ ತನ್ನ ಸೇವೆಯನ್ನು ಒದಗಿಸುವಲ್ಲಿ ಅಡಚಣೆಯನ್ನು ಎದುರಿಸುತ್ತಿದೆ. ಪ್ರತಿನಿತ್ಯ ಮೆಸೇಜ್​ಗಳನ್ನು ಕಳುಹಿಸಲು,ಕಚೇರಿ ಕೆಲಸ ಹೀಗೆ ಅನೇಕ ಕಾರಣದಿಂಧಾಗಿ ಲಕ್ಷಾಂತರ ಬಳಕೆದಾರರು ವಾಟ್ಸಾಪ್​ಗೆ ಅವಲಂಬಿತರಾಗಿದ್ದಾರೆ.


ಡೌನ್​ಡೆಕೋರ್​.ಕಾಮ್​ ನೀಡಿರುವ ಮಾಹಿತಿಯ ಪ್ರಕಾರ 20 ಸಾವಿರಕ್ಕೂ ಅಧಿಕ ಬಳಕೆದಾರರು ವಾಟ್ಸಾಪ್​ನಲ್ಲಿ ಸಮಸ್ಯೆಯನ್ನು ಎದುರಿಸಿದ್ದಾರೆ.ವಾಟ್ಸಾಪ್​ ಈ ರೀತಿ ಡೌನ್​ ಆಗಿರುವುದು ಇದೇ ಮೊದಲನೇಲ್ಲ. ಆದರೆ ಇಷ್ಟೊಂದು ದೀರ್ಘ ಸಮಯದಿಂದ ವಾಟ್ಸಾಪ್​​ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಅನೇಕರು ಅಡಚಣೆಯನ್ನು ಅನುಭವಿಸಿದ್ದಾರೆ. ಈ ಎಲ್ಲದರ ನಡುವೆಯೇ ಟ್ವಿಟರ್​ನಲ್ಲಿ ವಾಟ್ಸಾಪ್​ ಸೇವೆ ಡೌನ್​ ಆಗಿರುವ ಬಗ್ಗೆ ತರಹೇವಾರಿ ಮೀಮ್ಸ್​ಗಳು ಹರಿದಾಡುತ್ತಿವೆ .


ಪ್ರತಿಷ್ಠಿತ ಸುದ್ದಿ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ವಾಟ್ಸಾಪ್​ ಮಾಲೀಕ ಕಂಪನಿ ಮೆಟಾ ವಾಟ್ಸಾಪ್​ ಡೌನ್​ ಆಗಿರುವ ವಿಚಾರವನ್ನು ಒಪ್ಪಿಕೊಂಡಿದೆ. ಹಾಗೂ ಈ ದೋಷವನ್ನು ಸರಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಕೆಲವರು ವಾಟ್ಸಾಪ್​ ಸಂದೇಶವನ್ನು ಸ್ವೀಕರಿಸಲು ಹಾಗೂ ಕಳುಹಿಸಲು ಕಷ್ಟಪಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಮೆಟಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : feeding stray dogs:‘ಬೀದಿ ನಾಯಿಗಳ ಮೇಲೆ ಪ್ರೀತಿ ಇರುವವರು ಕಂಡಕಂಡಲ್ಲಿ ಆಹಾರ ನೀಡಬೇಡಿ, ಮನೆಗೆ ತಂದು ಸಾಕಿ’ : ಶ್ವಾನಪ್ರಿಯರಿಗೆ ಹೈಕೋರ್ಟ್ ಆದೇಶ

ಇದನ್ನೂ ಓದಿ : T20 World Cup 2022 : ಟಿ20 ವಿಶ್ವಕಪ್: ಸಕ್ಸಸ್’ಫುಲ್ ಚೇಸ್’ನಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ 500ಕ್ಕೂ ಹೆಚ್ಚು!

WhatsApp outage triggers meme fest on Twitter, here are few of the best ones

Comments are closed.