WhatsApp services restored :ವಾಟ್ಸಾಪ್​​ ಸೇವೆ ಪುನಾರಂಭ : ನಿಟ್ಟುಸಿರು ಬಿಟ್ಟ ಬಳಕೆದಾರರು

WhatsApp services restored : ಭಾರೀ ದೊಡ್ಡ ಅಡಚಣೆಯ ಬಳಿಕ ವಾಟ್ಸಾಪ್​ ಸೇವೆಗಳು ಮತ್ತೆ ಪುನಾರಂಭಗೊಂಡಿವೆ. ವಾಟ್ಸಾಪ್​ ಇದೀಗ ಆಂಡ್ರಾಯ್ಡ್​ ಹಾಗೂ ಐಓಎಸ್​​ಗಳಲ್ಲಿ ಮತ್ತೆ ಸೇವೆಯನ್ನು ನಿರ್ವಹಿಸಲು ಆರಂಭಿಸಿದೆ. ಆದರೆ ಇನ್ನೂ ಕೆಲವರ ಮೊಬೈಲ್​ಗಳಲ್ಲಿ ವಾಟ್ಸಾಪ್ ಸೇವೆಗಳು ಆರಂಭಗೊಂಡಿಲ್ಲ ಎಂಬ ಮಾಹಿತಿ ಕೇಳಿ ಬಂದಿದೆ. ಈ ಸಮಸ್ಯೆ ಶೀಘ್ರದಲ್ಲಿಯೇ ಸರಿಹೊಂದಲಿದೆ.

ಮೆಟಾ ಒಡೆತನದ ಜನಪ್ರಿಯ ಸಂವಹನ ಅಪ್ಲಿಕೇಶನ್​ ವಾಟ್ಸಾಪ್​ನ್ನು ತ್ವರಿತ ಪಠ್ಯ ಸಂದೇಶಗಳನ್ನು ಕಳುಹಿಸಲು ಅನೇಕರು ಬಳಕೆ ಮಾಡುತ್ತಾರೆ. ಆದರೆ ಇಂದು ಬರೋಬ್ಬರಿ ಎರಡು ಗಂಟೆಗಳಿಗೂ ಅಧಿಕ ಕಾಲ ವಾಟ್ಸಾಪ್​ ಸೇವೆಗಳನ್ನು ಬಳಕೆ ಮಾಡಲು ಪರದಾಡಿದ್ದಾರೆ. ವಾಟ್ಸಾಪ್​ ಬರೋಬ್ಬರಿ ಎರಡು ಗಂಟೆಗಳ ಕಾಲ ಬಂದ್​ ಆಗಿದ್ದರಿಂದ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ತೊಂದರೆಯಾಗಿದೆ.ವಾಟ್ಸಾಪ್​​ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಅನೇಕರು ಅಡಚಣೆಯನ್ನು ಅನುಭವಿಸಿದ್ದಾರೆ. ಈ ಎಲ್ಲದರ ನಡುವೆಯೇ ಟ್ವಿಟರ್​ನಲ್ಲಿ ವಾಟ್ಸಾಪ್​ ಸೇವೆ ಡೌನ್​ ಆಗಿರುವ ಬಗ್ಗೆ ತರಹೇವಾರಿ ಮೀಮ್ಸ್​ಗಳು ಹರಿದಾಡಿದ್ದವು .

ವೈಯಕ್ತಿಕ ಚಾಟ್​ ಹಾಗೂ ಗ್ರೂಪ್​ ಚಾಟ್​ಗಳೆರಡರಲ್ಲಿಯೂ ವಾಟ್ಸಾಪ್​ ಸೇವೆ ಡೌನ್​ ಆಗಿತ್ತು. ಡೆಸ್ಕ್​ಟಾಪ್​ ಹಾಗೂ ಲ್ಯಾಪ್​ಟಾಪ್​ಗಳಲ್ಲಿ ಕೂಡ ವಾಟ್ಸಾಪ್​ ವೆಬ್​ ಸೇವೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಈ ಎಲ್ಲಾ ಸೇವೆಗಳು ಪುನಾರಂಭಗೊಂಡಿವೆ.


ವಾಟ್ಸಾಪ್​ ಸೇವೆ ಸ್ಥಗಿತಗೊಂಡ ಬಗ್ಗೆ ಪ್ರಪಂಚಾದ್ಯಂತ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೆಟಾ ಸಂಸ್ಥೆ ಕೂಡ ಈ ಬಗ್ಗೆ ಕ್ಷಮೆಯಾಚನೆ ಮಾಡಿತ್ತು. ವಾಟ್ಸಾಪ್​ ಸೇವೆಗಳು ಬಂದ್ ಆಗಿರುವ ಬಗ್ಗೆ ನಮಗೆ ದೂರುಗಳು ಕೇಳಿ ಬಂದಿದ್ದು ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿ ವಾಟ್ಸಾಪ್​ ಸೇವೆಯನ್ನು ಪುನಾರಂಭಿಸಲಿದ್ದೇವೆ ಎಂದು ಮಾಹಿತಿಯನ್ನು ನೀಡಿತ್ತು. ಅದರಂತೆ ಎರಡು ಗಂಟೆಗಳ ಸ್ಥಗಿತದ ಬಳಿಕ ವಾಟ್ಸಾಪ್​ ಸೇವೆ ಇದೀಗ ಪುನಾರಂಭಗೊಂಡಿದೆ.

ಇದನ್ನು ಓದಿ : T20 World Cup 2022 : ಟಿ20 ವಿಶ್ವಕಪ್: ಸಕ್ಸಸ್’ಫುಲ್ ಚೇಸ್’ನಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ 500ಕ್ಕೂ ಹೆಚ್ಚು!

ಇದನ್ನೂ ಓದಿ : WhatsApp outage triggers meme:ವಾಟ್ಸಾಪ್​ ಸೇವೆ ಡೌನ್​ : ಟ್ವಿಟರ್​ನಲ್ಲಿ ಹರಿದಾಡಿದ ತರಹೇವಾರಿ ಮೀಮ್​ಗಳು, ವಾಟ್ಸಾಪ್​​ ಕಾಲೆಳೆದ ನೆಟ್ಟಿಗರು

WhatsApp Outage: WhatsApp services restored after major outage

Comments are closed.