ಪಾಕಿಸ್ತಾನ, ನ್ಯೂಜಿಲೆಂಡ್‌, ಅಫ್ಘಾನಿಸ್ತಾನ : ಯಾರಿಗೆ ಸಿಗುತ್ತೆ ವಿಶ್ವಕಪ್‌ ಸೆಮಿಫೈನಲ್‌ ಟಿಕೆಟ್‌

ಭಾರತ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ ಗೆ ಎಂಟ್ರಿ ಕೊಟ್ಟಿದ್ದು, ಉಳಿದ ಒಂದು ಸ್ಥಾನಕ್ಕಾಗಿ ಪಾಕಿಸ್ತಾನ (Pakistan), ನ್ಯೂಜಿಲೆಂಡ್‌ (Newzealand) ಹಾಗೂ ಅಫ್ಘಾನಿಸ್ತಾನ (afghanistan) ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

World Cup 2023 Semi Final : ಏಕದಿನ ವಿಶ್ವಕಪ್‌ 2023 ನ ಲೀಗ್‌ ಪಂದ್ಯಗಳು ಸದ್ಯ ಅಂತಿಮ ಹಂತದಲ್ಲಿವೆ. ಭಾರತ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ ಗೆ ಎಂಟ್ರಿ ಕೊಟ್ಟಿದ್ದು, ಉಳಿದ ಒಂದು ಸ್ಥಾನಕ್ಕಾಗಿ ಪಾಕಿಸ್ತಾನ (Pakistan), ನ್ಯೂಜಿಲೆಂಡ್‌ (Newzealand) ಹಾಗೂ ಅಫ್ಘಾನಿಸ್ತಾನ (afghanistan) ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಮೂರು ತಂಡಗಳ ಪೈಕಿ ಸೆಮಿಫೈನಲ್‌ಗೆ ಏರುವ ಅವಕಾಶ ಯಾವ ತಂಡಕ್ಕಿದೆ ಅನ್ನೋ ಸ್ಟೋರಿ ಇಲ್ಲಿದೆ.

ಆಸ್ಟ್ರೇಲಿಯಾದ ಖ್ಯಾತ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಆರ್ಭಟಕ್ಕೆ ಕ್ರಿಕೆಟ್‌ ಜಗತ್ತು ಬೆರಗಾಗಿದೆ. ಆಫ್ಘಾನಿಸ್ತಾನದ ವಿರುದ್ದದ ಗೆಲುವಿನ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡ ವಿಶ್ವಕಪ್‌ 2023 ರ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಆಸ್ಟ್ರೇಲಿಯಾ ತಂಡ ಲೀಗ್‌ ಹಂತದಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿದ್ದು, ಈಪೈಕಿ 6 ಪಂದ್ಯಗಳಲ್ಲಿ ಜಯಿಸಿ 12 ಅಂಕ ಸಂಪಾದಿಸಿದೆ.

Pakistan New Zealand Afghanistan Who will get the World Cup 2023 semi-final ticket
Image credit to Original Source

ವಿಶ್ವಕಪ್‌ ಅಂಕಪಟ್ಟಿಯಲ್ಲಿ ಭಾರತ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. 8 ಪಂದ್ಯಗಳ ಪೈಕಿ 6 ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಕೂಡ 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸಮಾನ ಅಂಕ ಪಡೆದಿದ್ದರೂ ಕೂಡ ರನ್‌ ರೇಟ್‌ ಆಧಾರದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾಕ್ಕಿಂತ ಮುಂದಿದೆ. ಈ ಮೂರು ತಂಡಗಳು ಈಗಾಗಲೇ ವಿಶ್ವಕಪ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಅಫ್ಘಾನಿಸ್ತಾನ : ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ

ಭಾರತ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ಲೀಗ್‌ ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿ ಉಳಿದಿದೆ. ಆದರೆ ಈ ಸೋಲು ಗೆಲುವು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಸ್ಥಾನಗಳ ಬದಲಾವಣೆಗೆ ಕಾರಣವಾಗಲಿದೆ. ಉಳಿದಂತೆ ಒಂದು ಸ್ಥಾನಕ್ಕಾಗಿ ನ್ಯೂಜಿಲೆಂಡ್‌, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

Pakistan New Zealand Afghanistan Who will get the World Cup 2023 semi-final ticket
Image credit to Original Source

ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ವಿರುದ್ದ ಪಂದ್ಯವನ್ನು ಆಡಲಿದೆ. ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಹಾಗೂ ಪಾಕಿಸ್ತಾನ ತಂಡ ಇಂಗ್ಲೆಂಡ್‌ ವಿರುದ್ದ ಕೊನೆಯ ಲೀಗ್‌ ಪಂದ್ಯವನ್ನು ಆಡಲಿವೆ. ಒಂದೊಮ್ಮೆ ಮೂರು ತಂಡಗಳು ಗೆಲವು ದಾಖಲಿಸಿದ್ರೆ ಅತೀ ಹೆಚ್ಚು ರನ್‌ ರೇಟ್‌ ಹೊಂದಿರುವ ತಂಡ ಸೆಮಿಫೈನಲ್‌ಗೆ ಎಂಟ್ರಿ ಪಡೆಯಲಿವೆ.

ಇದನ್ನೂ ಓದಿ : ವಿಶ್ವಕಪ್‌ ಸೆಮಿಫೈನಲ್‌ : ಪಾಕಿಸ್ತಾನಕ್ಕೆ ಇನ್ನೂ ಇದೆ ಅವಕಾಶ, ಭಾರತ – ಪಾಕಿಸ್ತಾನ ಮುಖಾಮುಖಿ ?

ಸದ್ಯದ ಲೆಕ್ಕಾಚಾರದ ಪ್ರಕಾರ ನ್ಯೂಜಿಲೆಂಡ್ ತಂಡ ಎರಡೂ ತಂಡಗಳಿಗಿಂತಲೂ ರನ್‌ರೇಟ್‌ ಆಧಾರದಲ್ಲಿ ಮುಂದಿದೆ. ಮುಂದಿನ ಪಂದ್ಯಗಳಲ್ಲಿ ಮೂರು ತಂಡಗಳು ಸೋಲನ್ನು ಕಂಡ್ರೆ, ಇಲ್ಲಾ ಮೂರು ತಂಡಗಳು ಗೆಲವು ಕಂಡ್ರೂ ಕೂಡ ಸದ್ಯದ ಲೆಕ್ಕಾಚಾರದ ಪ್ರಕಾರ ನ್ಯೂಜಿಲೆಂಡ್‌ ತಂಡಕ್ಕೆ ಹೆಚ್ಚಿನ ಅವಕಾಶವಿದೆ.

Pakistan New Zealand Afghanistan, Who will get the World Cup 2023 semi-final ticket
Image credit to Original Source

ಒಂದೊಮ್ಮೆ ಪಾಕಿಸ್ತಾನ, ನ್ಯೂಜಿಲೆಂಡ್‌ ತಂಡಗಳು ಮುಂದಿನ ಲೀಗ್‌ ಪಂದ್ಯದಲ್ಲಿ ಸೋಲನ್ನು ಕಂಡ್ರೆ ಅಪ್ಘಾನಿಸ್ತಾನ ತಂಡ ಸೆಮಿಫೈನಲ್‌ಗೆ ಎಂಟ್ರಿ ಕೊಡಲಿದೆ. ಕಳೆದ ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ ತಂಡ ಅಂಕ ಪಟ್ಟಿಯಲ್ಲಿ ಸದ್ಯ ಕೊನೆಯ ಸ್ಥಾನದಲ್ಲಿದೆ. ರನ್ನರ್‌ ಅಪ್‌ ನ್ಯೂಜಿಲೆಂಡ್‌ ತಂಡ ಕೂಡ ಈ ಬಾರಿ ಸೆಮಿಫೈನಲ್‌ಗೆ ಎಂಟ್ರಿ ಕೊಡಲು ಪರದಾಡುತ್ತಿದೆ.

ಇದನ್ನೂ ಓದಿ : ವಿಶ್ವಕಪ್‌ 2023 : ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಯಾರಾಗ್ತಾರೆ ಟೀಂ ಇಂಡಿಯಾ ನಾಯಕ ?

ನೆದರ್‌ಲ್ಯಾಂಡ್‌ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸದ್ಯ 4 ಅಂಕ ಪಡೆದುಕೊಂಡಿದೆ. ಆದರೆ ಮುಂದಿನ 2 ಲೀಗ್‌ ಪಂದ್ಯಗಳನ್ನು ಭರ್ಜರಿ ರನ್‌ರೇಟ್ ಆಧಾರದಲ್ಲಿ ಗೆದ್ದು, ಪಾಕಿಸ್ತಾನ, ನ್ಯೂಜಿಲೆಂಡ್‌ ಹಾಗೂ ಅಪ್ಘಾನಿಸ್ತಾನ ತಂಡಗಳು ಮುಂದಿನ ಲೀಗ್‌ ಹಂತದ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡ್ರೆ ಆಗ ನೆದರ್‌ಲ್ಯಾಂಡ್‌ ತಂಡಕ್ಕೆ ಅವಕಾಶವಿದೆ.

Pakistan New Zealand Afghanistan, Who will get the World Cup 2023 semi-final ticket ?

Comments are closed.