Xiaomi 11i Hypercharge 5G: ಶಯೋಮಿ ಹೊಸ ಸ್ಮಾರ್ಟ್‌ಫೋನ್; 5ಜಿ, ವೇಗದ ಚಾರ್ಜಿಂಗ್ ಸೌಲಭ್ಯದ ಭರವಸೆ

ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್‌ಗಳಿಂದ ಜನಪ್ರಿಯ ಆಗಿರುವ ಶಯೋಮಿ ಇದೀಗ ಶಯೋಮಿ 11 ಐ (Xiaomi 11i) ಹೈಪರ್‌ಚಾರ್ಜ್ 5ಜಿ ಮತ್ತು ಶಯೋಮಿ 11 ಐ 5ಜಿ (Xiaomi 11i 5G) ಅನ್ನು ಜನವರಿ 6 ರಂದು ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಎರಡೂ ಫೋನ್‌ಗಳು ಒಂದೇ ರೀತಿಯ ವಿಶೇಷತೆಗಳನ್ನು ಹೊಂದಿವೆ. ಶಯೋಮಿ 11 ಐ ಹೈಪರ್‌ಚಾರ್ಜ್ 5 ಜಿ ಅನ್ನು ಒಂದು ಯುನಿಕ್ ಆಯ್ಕೆಯಾಗಿ ವಿನ್ಯಾಸಗೊಳಿಸಲಾಗಿದೆ. ಏಕೆಂದರೆ ಇದು 120 ವ್ಯಾಟ್ ವೇಗದ ಚಾರ್ಜಿಂಗ್ (120W Charging) ಹೊಂದಿದೆ. ಸಾಮಾನ್ಯ ಶಯೋಮಿ 11 ಐ, ಮತ್ತೊಂದೆಡೆ, 67ವೇಗದ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.

ಈ ಸರಣಿಯಲ್ಲಿನ ಎರಡೂ ಮಾದರಿಗಳು 120 ಹರ್ಟ್ಸ್ ಸೂಪರ್ ಅಮೋಲ್ಡ್ ಡಿಸ್ಪ್ಲೇಯೊಂದಿಗೆ ಬರುತ್ತವೆ ಮತ್ತು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ನಿಂದ ಚಾಲಿತವಾಗಿವೆ. ಒಟ್ಟಾರೆಯಾಗಿ, ಶಯೋಮಿ ಹೈಪರ್‌ಚಾರ್ಜ್ 5ಜಿ ರಿಬ್ಯಾಡ್ಜ್ ಮಾಡಲಾದ ರೆಡ್ಮಿ ನೋಟ್ 11 ಪ್ರೊ (Redmi Note 11 Pro+) ನಂತೆ ಕಾಣುತ್ತದೆ, ಎರಡೂ Redmi ಫೋನ್‌ಗಳನ್ನು ಕಳೆದ ವರ್ಷ ಚೀನಾದಲ್ಲಿ ಬಿಡುಗಡೆ ಮಾಡಲಾಯಿತು.

ಭಾರತದಲ್ಲಿ ಶಯೋಮಿ ಹೈಪರ್‌ಚಾರ್ಜ್ 5ಜಿ ಬೇಸ್ 6ಜಿಬಿ ರಾಮ್ + 128ಜಿಬಿ ಸ್ಟೋರೇಜ್ ವೆರೈಟಿಗಳಲ್ಲಿ 26,999. ಹಾಗೂ 8ಜಿಬಿ + 128ಜಿಬಿ ವೆರೈಟಿಗಳಲ್ಲಿ ಬರುತ್ತದೆ. ಶಯೋಮಿ 5ಜಿ ಭಾರತದಲ್ಲಿ ಬುಧವಾರ, ಜನವರಿ 12 ರಿಂದ ಮಾರಾಟವಾಗಲಿದೆ. ಎರಡೂ ಫೋನ್‌ಗಳು ಫ್ಲಿಪ್ ಕಾರ್ಟ್, ರೆಡ್ಮಿ ಹೋಮ್. ಸ್ಟೋರ್‌ಗಳು ಮತ್ತು ಆಫ್‌ಲೈನ್ ವ್ಯಾಪಾರಿಗಳ ಬಳಿಯೂ ಲಭ್ಯವಿರುತ್ತವೆ.

ಈ ಎರಡೂ ಫೋನುಗಳು, ಹ್ಯಾಪಿ ನ್ಯೂ ಇಯರ್ ಆಫರ್ ಅಡಿಯಲ್ಲಿ 1500 ಡಿಸ್ಕೌಂಟ್ ನಲಿ ಸಿಗಲಿವೆ. ಹಾಗೆ ಎಸ್ ಬಿ ಐ ಕಾರ್ಡ್ ಮೂಲಕ ಖರೀದಿ ಮಾಡುವವರಿಗೆ 2500 ವರೆಗೆ ಕ್ಯಾಶ್ ಬ್ಯಾಕ್ ಆಫರ್ ಕೂಡ ಇರಲಿದೆ. ಅಷ್ಟೇ ಅಲ್ಲದೆ, ಈಗ ರೆಡ್ಮಿ ನೋಟ್ ಬಳಸುವ ಗ್ರಾಹಕರಿಗೆ 400ರು ಎಕ್ಸ್‌ಚೇಂಜ್ ಆಫರ್ ಕೂಡ ಇದೆ.

ಶಯೋಮಿ 11ಐ ಹೈಪರ್ ಚಾರ್ಜ್ ಸ್ಪೆಸಿಫಿಕೇಶನ್
6.67 ಫುಲ್ ಎಚ್ ಡಿ ಅಮೋಲ್ಡ್ ಡಿಸ್ಪ್ಲೇ, 120 ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿದೆ. ಟ್ರಿಪಲ್ ಕಾಮೆರ ಹೊಂದಿದ್ದು, 108 ಮೆಗಾ ಪಿಕ್ಸೆಲ್ ಪ್ರೈಮರಿ ಲೆನ್ಸ್, 8 ಎಂಪಿ ಅಲ್ಟ್ರಾ ವಾಯ್ಡ್ ಶೂಟರ್ ಹಾಗೂ 2 ಎಂಪಿ ಮ್ಯಾಕ್ರೋ ಲೆನ್ಸ್ ಇದೆ. ಜೊತೆಗೆ 16 ಮೆಗಾ ಪಿಕ್ಸೆಲ್ ಸೆಲ್ಫಿ ಕಾಮೆರ ಹೊಂದಿದೆ. ವೈ ಫೈ, ಜಿಪಿಎಸ್, ಬ್ಲೂ ಟೂತ್, 5ಜಿ,4 ಜಿ ಹಾಗೂ ಯುಎಸ್ ಬಿ ಸಿ ಟೈಪ್ ಕನೆಕ್ಟಿವಿಟಿ ಹೊಂದಿದೆ.

ಶಯೋಮಿ 11 ಐ 5ಜಿ
ಇದು 5160 ಎಂ ಎ ಎಚ್ ಬ್ಯಾಟರಿ ಹಾಗೂ 67 ವ್ಯಾಟ್ ಚಾರ್ಜಿಂಗ್ ಹೊಂದಿದೆ. ಉಳಿದಂತೆ ಎಲ್ಲವೂ ಶಯೋಮಿ 11 ಐ ಹೈಪರ್ ಚಾರ್ಜ್ 5ಜಿ ಸ್ಪೆಸಿಫಿಕೇಶನ್ ಹೋಲುತ್ತವೆ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Xiaomi 11i HyperCharge 5G With 120W Charging Xiaomi 11i 5G Launched in India read Price Specifications)

Comments are closed.