Pi : ಕೊರೊನಾ ರೂಪಾಂತರಿ ತಳಿಗೆ ಹೆಸರಿಡುವುದು ಹೇಗೆ? ಓಮಿಕ್ರಾನ್ ನಂತರದ ಹೆಸರು ಏನಿರಬಹುದು?

ಕೋವಿಡ್ -19 ರ ಓಮಿಕ್ರಾನ್ ರೂಪಾಂತರವು ಮೊದಲು ಬೆಳಕಿಗೆ ಬಂದಾಗ, ಅದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿತು. ಸಾಕಷ್ಟು ಮೀಮ್ ಕೂಡ ಮಾಡಲಾಗಿತ್ತು. ಓಮಿಕ್ರಾನ್ ಎಂಬ ಗ್ರೀಕ್ ಅಕ್ಷರದ ಉಚ್ಚಾರಣೆಯ ಮೇಲೆ ಗೂಗಲ್ ಹುಡುಕಾಟಗಳು, ಅದೇ ಹೆಸರಿನ ಕ್ರಿಪ್ಟೋ ಟೋಕನ್‌ಗಳು ಸ್ಪ್ರೆಡ್ ಆಗುತ್ತಿವೆ. ಸದ್ಯ ಆತಂಕಕ್ಕೆ ಕಾರಣವಾಗಿರುವ ‘ಓಮಿಕ್ರಾನ್’ (Omicron Covid 19 Variant) ಎಂಬುದು ಗ್ರೀಕ್ ಓ ಮೈಕ್ರಾನ್‌ನಿಂದ, ಅಕ್ಷರಶಃ ‘ಸಣ್ಣ ಓ’ ಎಂದರ್ಥ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಗ್ರೀಕ್ ವರ್ಣಮಾಲೆಯ 15 ನೇ ಅಕ್ಷರದ ನಂತರ ಹೆಸರಿಸಿದೆ. ಯು ಎಸ್ ಮತ್ತು ಯುಕೆ ಎರಡರಲ್ಲೂ ಈ ಹೆಸರನ್ನು ವಿಭಿನ್ನವಾಗಿ ಉಚ್ಚರಿಸಲಾಗುತ್ತದೆ. ಹಾಗಾದರೆ ಓಮಿಕ್ರಾನ್ ನಂತರ ಬರಬಹುದಾದ ಕೊರೊನಾ ರೂಪಾಂತರಿ ತಳಿಯ ಹೆಸರಿನ ಬಗ್ಗೆ ಚರ್ಚೆಯಾಗುತ್ತಿದೆ. ಅದು Pi ಆಗಿರಲಿದೆ ಎಂದು ಹಲವು ವರದಿಗಳು ತಿಳಿಸಿವೆ.

ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ರೂಪಾಂತರಗಳನ್ನು ಹೆಸರಿಸಲು ಗ್ರೀಕ್ ವರ್ಣಮಾಲೆಗಳನ್ನು ಬಳಸುತ್ತಿದೆ, ಓಮಿಕ್ರಾನ್ ಮೊದಲು ಡೆಲ್ಟಾ ರೂಪಾಂತರ ಎಂದು ಕರೆಯಲಾಗಿದೆ. ಫ್ರಾನ್ಸ್‌ನ ವಿಜ್ಞಾನಿಗಳು ಈಗ ಐಎಚ್‌ಯು ಬಿ.1.640.2 ರೂಪಾಂತರದ ಹೊಸ, ಹೆಚ್ಚು ರೂಪಾಂತರಿತ ತಳಿಯನ್ನು ಗುರುತಿಸಿದ್ದಾರೆ. ಬಿ.1.640.2 ರೂಪಾಂತರಿ ತಳಿ ಇಲ್ಲಿಯವರೆಗೆ ಇತರ ದೇಶಗಳಲ್ಲಿ ಕಂಡು ಬಂದಿಲ್ಲ.

ಓಮಿಕ್ರಾನ್ ನಂತರದ ಕೊರೊನಾ ರೂಪಾಂತರಿಯ ಹೆಸರೇನು?
ಗ್ರೀಕ್ ವರ್ಣಮಾಲೆಯು 24 ಅಕ್ಷರಗಳನ್ನು ಹೊಂದಿದೆ. ಓಮಿಕ್ರಾನ್ ಅನ್ನು ಅನುಸರಿಸುವುದು ಬಹುಶಃ ಗ್ರೀಕ್ ವರ್ಣಮಾಲೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ.
ಭಾರತದ ಉನ್ನತ ವೈರಾಲಜಿಸ್ಟ್ ಡಾ ಗಗನ್‌ದೀಪ್ ಕಾಂಗ್ ಅವರು ಕೊರೋನವೈರಸ್ ಮತ್ತು ಅದರ ರೂಪಾಂತರಗಳೊಂದಿಗೆ ಬದುಕಲು ಕಲಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅವುಗಳು ಹೊರಹೊಮ್ಮುತ್ತಲೇ ಇರುತ್ತವೆ. ಸುದ್ದಿ ಸಂಸ್ಥೆ ಎಎನ್‌ ಐ ಪ್ರಕಾರ, ಅನೇಕ ಕೋವಿಡ್ ಅಲೆಗಳು ಇರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ. ಅನೇಕ ಅಲೆಗಳು, ಪದೇ ಪದೇ ಇರುತ್ತದೆ. ಆದರೆ ಅದೃಷ್ಟವಶಾತ್, ಓಮಿಕ್ರಾನ್ ಇತರ ರೂಪಾಂತರಗಳಿಗಿಂತ ತುಲನಾತ್ಮಕವಾಗಿ ಕಡಿಮೆ ತೀವ್ರತೆಯನ್ನು ತೋರುತ್ತಿದೆ” ಎಂದು ಅವರು ಹೇಳಿದರು. ಪೈ ಸೇರಿದಂತೆ ಓಮಿಕ್ರಾನ್ ನಂತರ ಇನ್ನೂ 9 ಅಕ್ಷರಗಳು ಉಳಿದಿವೆ. ಗ್ರೀಕ್ ವರ್ಣಮಾಲೆಯು ಒಮೆಗಾದೊಂದಿಗೆ ಕೊನೆಗೊಳ್ಳುತ್ತದೆ. ಈಗಾಗಲೇ ಗ್ರೀಕ್ ವರ್ಣಮಾಲೆಯ Nu ಅಕ್ಷರವನ್ನು ಬಿಟ್ಟು ಕೊರೊನಾ ರೂಪಾಂತರಿಗೆ ಹೆಸರಿಸಲಾಗಿದೆ. ಇದಕ್ಕೆ ಕಾರಣ Nu ಇಂಗ್ಲೀಶ್‌ನ New (ಹೊಸ) ಎಂದಮತೆ ಕೇಳಿಸುತ್ತದೆ. ಅಲ್ಲದೇ Xi ಅಕ್ಷರವನ್ನೂ ಕೊವಿಡ್ ರೂಪಾಂತರಿಗೆ ಹೆಸರಿಸುವಾಗ ಬಿಡಲಾಗಿದೆ, ಇದು ಚೀನಾದ ನಾಗರಿಕರ ಹೆಸರನ್ನು ಹೊಲುತ್ತದೆ ಎಂಬುದೇ ಮೂಲ ಕಾರಣ.

ಹೇಳಲು ಮತ್ತು ನೆನಪಿಟ್ಟುಕೊಳ್ಳಲು ಸುಲಭವಾಗಿರುವುದರಿಂದ ಕೋವಿಡ್ 19 ರೂಪಾಂತರಗಳನ್ನು ಹೆಸರಿಸಲು ಗ್ರೀಕ್ ವರ್ಣಮಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್ ಹೇಳುತ್ತದೆ. ಈ ನಿರ್ಧಾರಕ್ಕೆ ಬರಲು ವಿಶ್ವದಾದ್ಯಂತ ತಜ್ಞರು ಸಭೆ ನಡೆಸಿದ್ದರು. ವೈಜ್ಞಾನಿಕ ಹೆಸರುಗಳನ್ನು ನೆನಪಿಡಲು ಕಷ್ಟವಾಗಬಹುದು ಮತ್ತು ಆದ್ದರಿಂದ ಆಗಾಗ್ಗೆ ತಪ್ಪಾಗಿ ಉಚ್ಚಾರ ಆಗಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: Xiaomi 11i HyperCharge 5G: ಶಯೋಮಿ ಹೊಸ ಸ್ಮಾರ್ಟ್‌ಫೋನ್; 5ಜಿ, ವೇಗದ ಚಾರ್ಜಿಂಗ್ ಸೌಲಭ್ಯದ ಭರವಸೆ

(Pi Next Letter in Greek Alphabet After Omicron covid 19 variants)

Comments are closed.