Karnataka Covid-19 Updates : ಕರ್ನಾಟಕದಲ್ಲಿಂದು 8,906 ಹೊಸ ಕೋವಿಡ್​ ಪ್ರಕರಣ

Karnataka Covid-19 Updates  : ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕು (Karnataka Covid-19 Updates ) ಮತ್ತೊಮ್ಮೆ ಸ್ಪೋಟಗೊಂಡಿದೆ. ರಾಜ್ಯದಲ್ಲಿ ಇಂದು ಒಂದೇ ದಿನ ಬರೋಬ್ಬರಿ 8,906 ಪ್ರಕರಣ ದಾಖಲಾಗಿದೆ. ಅದ್ರಲ್ಲೂ ಬೆಂಗಳೂರಲ್ಲಿ 7113 ಹೊಸ ಪ್ರಕರಣ ದೃಢಪಟ್ಟಿದೆ. ಜೊತೆಗೆ ದಕ್ಷಿಣ ಕನ್ನಡ,ಬೆಂಗಳೂರು ಗ್ರಾಮಾಂತರ,ಹಾಸನ, ಮಂಡ್ಯ, ಮೈಸೂರು, ಉಡುಪಿಯಲ್ಲಿ ಕೊರೊನಾ ಆರ್ಭಟ ಜೋರಾಗಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನೇ ದಿನೇ ಸೋಂಕಿತ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇಂದು 7113 ಹೊಸ ಪ್ರಕರಣ ಪತ್ತೆಯಾಗಿದ್ದು, ಮೂವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 32,157ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಕೊರೊನಾ ಸೋಂಕಿತರ ಪಟ್ಟು ಸಂಖ್ಯೆ 1290299 ದಾಟಿದೆ. ಕೊರೊನಾ ಜೊತೆ ಜೊತೆ ಓಮಿಕ್ರಾನ್‌ ಪ್ರಕರಣ ಏರಿಕೆ ಕಾಣುತ್ತಿರುವುದು ರಾಜ್ಯ ಸರಕಾರ ತಲೆನೋವು ತರಿಸಿದೆ.

ಇನ್ನೊಂದೆಡೆಯಲ್ಲಿ ರಾಜ್ಯ ದಕ್ಷಿಣ ಕನ್ನಡ,ಬೆಂಗಳೂರು ಗ್ರಾಮಾಂತರ,ಹಾಸನ, ಮಂಡ್ಯ, ಮೈಸೂರು, ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ಆರ್ಭಟಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 295 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇತ್ತ ಬೆಂಗಳೂರು ಗ್ರಾಮಾಂತರದಲ್ಲಿ 111 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.


ಹಾಸನದಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 139 ಕೊರೊನಾ ಪ್ರಕರಣಗಳು ಧೃಡಪಟ್ಟಿವೆ. ಇನ್ನುಳಿದಂತೆ ಕಳೆದೊಂದು ದಿನದಲ್ಲಿ ಬಾಗಲಕೋಟೆಯಲ್ಲಿ 6, ಬಳ್ಳಾರಿಯಲ್ಲಿ 43, ಬೆಳಗಾವಿಯಲ್ಲಿ 70, ಬೀದರ್​ನಲ್ಲಿ 13, ಚಾಮರಾಜನಗರದಲ್ಲಿ 10, ಚಿಕ್ಕಬಳ್ಳಾಪುರದಲ್ಲಿ 36, ಚಿಕ್ಕಮಗಳೂರಿನಲ್ಲಿ 22, ಚಿತ್ರದುರ್ಗದಲ್ಲಿ 15, ದಾವಣೆಗೆರೆಯಲ್ಲಿ 12, ಧಾರವಾಡದಲ್ಲಿ 56, ಗದಗದಲ್ಲಿ 16, ಕಲಬುರಗಿಯಲ್ಲಿ 58, ಕೊಡಗುವಿನಲ್ಲಿ 26, ಕೋಲಾರದಲ್ಲಿ 65, ಕೊಪ್ಪಳದಲ್ಲಿ 3, ಮಂಡ್ಯದಲ್ಲಿ 183, ಮೈಸೂರಿನಲ್ಲಿ 203, ರಾಯಚೂರಿನಲ್ಲಿ 4, ರಾಮನಗರದಲ್ಲಿ 28, ಶಿವಮೊಗ್ಗದಲ್ಲಿ 66, ತುಮಕೂರಿನಲ್ಲಿ 53, ಉಡುಪಿಯಲ್ಲಿ 186, ಉತ್ತರ ಕನ್ನಡದಲ್ಲಿ 52, ವಿಜಯಪುರದಲ್ಲಿ 22 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದೆ. ಸಮಾಧಾನಕರ ವಿಚಾರ ಎಂಬಂತೆ ಕಳೆದೊಂದು ದಿನದಲ್ಲಿ ಯಾದಗಿರಿ ಹಾಗೂ ಹಾವೇರಿಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿದೆ.
ರಾಜ್ಯದಲ್ಲಿಂದು 508 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ, ಈ ಮೂಲಕ ಒಟ್ಟೂ ಡಿಸ್ಚಾರ್ಜ್ ಆದವರ ಸಂಖ್ಯೆ 2963056 ಆಗಿದೆ. ರಾಜ್ಯದಲ್ಲಿ ಪ್ರಸ್ತುತ 38507 ಆ್ಯಕ್ಟಿವ್​ ಕೊರೊನಾ ಪ್ರಕರಣಗಳಿವೆ.

karnataka covid-19 updates today 8,906 corona case

ಇದನ್ನು ಓದಿ : Curfew Relaxation : ಕಾಂಗ್ರೆಸ್ ಗಾಗಿ ಕರ್ಪ್ಯೂ ಸಡಿಲಿಕೆ : ರೆಸಾರ್ಟ್, ರೆಸ್ಟೋರೆಂಟ್ ಗೆ ಅವಕಾಶ ಕೊಟ್ಟ ಸರ್ಕಾರ

ಇದನ್ನೂ ಓದಿ : cloth mask : ಓಮಿಕ್ರಾನ್​ ರೂಪಾಂತರಿಯ ವಿರುದ್ಧ ಬಟ್ಟೆ ಮಾಸ್ಕ್​ ಪರಿಣಾಮಕಾರಿಯಲ್ಲ : ಅಧ್ಯಯನ

Comments are closed.