Ghar Wapsi: ಘರ್​ ವಾಪಸಿ ಮಾಡಿದ ಒಂದೇ ಕುಟುಂಬದ 9 ಮಂದಿ: ಹಿಂದೂ ಧರ್ಮಕ್ಕೆ ಮರುಮತಾಂತರ

ಶಿವಮೊಗ್ಗ : Ghar Wapsi ಮತಾಂತರ ಹಾಗೂ ಘರ್​ ವಾಪಸಿ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ ರಾಜ್ಯದಲ್ಲಿ ವ್ಯಾಪಕ ವಿರೋಧವನ್ನು ಎದುರಿಸಿದ್ದಾರೆ. ಹಿಂದೂ ಧರ್ಮಕ್ಕೆ ಜನರನ್ನು ಮರಳಿ ತರುವ ವಿಚಾರವಾಗಿ ತೇಜಸ್ವಿ ಸೂರ್ಯ ನೀಡಿದ ಹೇಳಿಕೆಗೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರಿಂದು ಟ್ವಿಟರ್​ನಲ್ಲಿ ಕ್ಷಮೆಯಾಚಿಸಿದ್ದಾರೆ.


ಹೀಗಾಗಿ ರಾಜ್ಯದಲ್ಲಿ ಸದ್ಯ ಘರ್​ ವಾಪಸಿ ಚರ್ಚೆ ಜೋರಾಗಿದೆ. ಈ ನಡುವೆಯೇ ಶಿವಮೊಗ್ಗ ಜಿಲ್ಲೆಯ ಅಂತರಗಂಗೆ ಎಂಬಲ್ಲಿ ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಂಡಿದ್ದ ಒಂದೇ ಕುಟುಂಬದ 9 ಮಂದಿ ಸದಸ್ಯರು ಘರ್​ ವಾಪಸಿ ಮಾಡಿದ್ದಾರೆ.


ಭಜರಂಗದಳ ಹಾಗೂ ವಿಶ್ವಹಿಂದೂಪರಿಷತ್​​ ನೇತೃತ್ವದಲ್ಲಿ ನಡೆದ ಘರ್​ ವಾಪಸಿ ಕಾರ್ಯಕ್ರಮದಲ್ಲಿ ಜಯಶೀಲನ್​ ಹಾಗೂ ಕುಟುಂಬಸ್ಥರು ಹಿಂದೂ ಧರ್ಮಕ್ಕೆ ಪುನರ್​ಮತಾಂತರಗೊಳ್ಳುವ ಮೂಲಕ ಮಾತೃಧರ್ಮಕ್ಕೆ ಮರಳಿದ್ದಾರೆ. ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಂಡಿದ್ದ ಇವರನ್ನು ಪುನಃ ಹಿಂದೂ ಧರ್ಮಕ್ಕೆ ವಿಶ್ವ ಹಿಂದೂ ಪರಿಷತ್​ ಹಾಗೂ ಭಜರಂಗದಳ ಸದಸ್ಯರು ವಾಪಸ್​ ಕರೆದುಕೊಂಡಿದ್ದಾರೆ.


ಕುಟುಂಬದ ಸದಸ್ಯರಾದ ಜಯಶೀಲನ್​, ಅವರ ಪತ್ನಿ ಜಯಮ್ಮ, ಪ್ರಭಾಕರನ್​, ಲಲಿತಾ ಪ್ರಭಾಕರನ್​, ಶ್ವೇತಾ ಪ್ರಕಾಶ್​, ಪ್ರಕಾಶ್​​ , ಭಾವನಾ, ಪೃಥ್ವಿ. ಭರತ್​ ಕುಮಾರ್​ ವಿಶ್ವ ಹಿಂದೂ ಪರಿಷತ್​ ಹಾಗೂ ಭಜರಂಗದಳ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ.

ತೀವ್ರ ವಿರೋಧ ಹಿನ್ನೆಲೆ ಘರ್​ ವಾಪಸಿ ಹೇಳಿಕೆ ಹಿಂಪಡೆದ ಸಂಸದ ತೇಜಸ್ವಿ ಸೂರ್ಯ..!

ಮುಸ್ಲಿಂರನ್ನು, ಕಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ತರುವ ಬಗ್ಗೆ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ತೇಜಸ್ವಿ ಸೂರ್ಯ ಹಿಂಪಡೆದಿದ್ದಾರೆ.


ಈ ಸಂಬಂಧ ಟ್ವೀಟ್​ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಎರಡು ದಿನಗಳ ಹಿಂದೆ ಉಡುಪಿಯಲ್ಲಿ ನಾನು ನೀಡಿರುವ ಹೇಳಿಕೆಯು ತೀವ್ರ ವಿವಾದಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ನನ್ನ ಹೇಳಿಕೆಯನ್ನು ಹಿಂಪಡೆದು ವಿಷಾದಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.


ಎರಡು ದಿನಗಳ ಹಿಂದೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ ಭಾರತದಲ್ಲಿ ಹಿಂದೂ ಪುನರುತ್ಥಾನ ಎಂಬ ವಿಷಯದ ಬಗ್ಗೆ ಮಾತನಾಡಿದ್ದರು. ಹಿಂದೂ , ಮುಸ್ಲಿಮರನ್ನು ಮರಳಿ ಹಿಂದೂ ಮಡಿಲಿಗೆ ತರಬೇಕು. ಅವರನ್ನು ಘರ್​ ವಾಪಸಿ ಮಾಡದೇ ಬೇರೆ ದಾರಿಯಿಲ್ಲ ಎಂದು ಹೇಳಿಕೆ ನೀಡಿದ್ದರು.


ಹಿಂದೂ ಧರ್ಮದ ಶ್ರೇಷ್ಠತೆ ಹಾಗೂ ಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡಿದರೆ ಪೊಲೀಸರು ನೇರವಾಗಿ ಬಂಧಿಸುತ್ತಿದ್ದರು. ಬೇರೆಯವರ ಬಗ್ಗೆ ಮಾತನಾಡುವುದೇ ಅಪರಾಧ ಎಂದು ಜಾತ್ಯಾತೀತರು ಭಯ ಹುಟ್ಟಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ಈಗ ನಾನು ಧೈರ್ಯದಿಂದ ಬಹಿರಂಗವಾಗಿ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಬಹುದು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.


ನಾನು ಎರಡು ದಿನಗಳ ಹಿಂದೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಹಿಂದೂ ಪುನರುತ್ಥಾನ ವಿಚಾರವಾಗಿ ಮಾತನಾಡಿದ್ದೆ.ನನ್ನ ಭಾಷಣದ ಕೆಲವು ಸಾಲುಗಳು ವಿಷಾದನೀಯ ವಿವಾದವನ್ನು ಸೃಷ್ಟಿಸಿವೆ.ಆದ್ದರಿಂದ ನಾನು ನನ್ನ ಹೇಳಿಕೆಗಳನ್ನು ವಿಷಾದದಿಂದ ಹಿಂಪಡೆಯುತ್ತಿದ್ದೇನೆ ಎಂದು ಟ್ವೀಟಾಯಿಸಿದ್ದಾರೆ.

9 people from same family ghar wapsi in shivmogga

ಇದನ್ನು ಓದಿ : Leopard :ಆಹಾರ ಅರಸುತ್ತಾ ಕಾಡಿನಿಂದ ನಾಡಿಗೆ ಬಂದ ಚಿರತೆ..!ಮನೆಯಂಗಳದಲ್ಲೇ ನಿಂತಿದ್ದ ಚಿರತೆ ಕಂಡು ಗ್ರಾಮಸ್ಥರು ಶಾಕ್​​

ಇದನ್ನೂ ಓದಿ : Covid Vaccine : ಕೋಟದಲ್ಲಿ ಕೋವಿಡ್‌ ವ್ಯಾಕ್ಸಿನ್‌ ಪಡೆಯಲು ನಿರಾಕರಿಸಿದವರ ಮನವೊಲಿಸಿದ ಬ್ರಹ್ಮಾವರ ತಹಶೀಲ್ದಾರ್‌

Comments are closed.