ಲತಾ ಮಂಗೇಶ್ಕರ್​​ ಪಾರ್ಥೀವ ಶರೀರಕ್ಕೆ ಶಾರೂಕ್​ ಉಗುಳಿದ್ದಾರೆಂದು ಹೇಳಿ ಪೇಚಿಗೆ ಸಿಲುಕಿದ ಬಿಜೆಪಿ ನಾಯಕ

ಭಾರತದ ದಂತಕತೆ, ಗಾನ ಕೋಗಿಲೆ ಲತಾ ಮಂಗೇಶ್ಕರ್​ ನಿಧನಕ್ಕೆ ಸಂಪೂರ್ಣ ಭಾರತವೇ ಕಂಬನಿ ಮಿಡಿದಿದೆ. ಹಿರಿಯ ಗಾಯಕಿ ಲತಾ ಮಂಗೇಶ್ಕರ್​ ಅಂತಿಮ ದರ್ಶನವನ್ನು ಪಡೆದುಕೊಳ್ಳಲು ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ಬಾಲಿವುಡ್​ ನಟ ಶಾರೂಕ್​ ಖಾನ್​ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ನೆಚ್ಚಿನ ಗಾಯಕಿಗೆ ಶಾರೂಕ್​ ಖಾನ್​ (Shah Rukh Khan) ಅಂತಿಮ ವಿದಾಯ ಅರ್ಪಿಸಿದ ದೃಶ್ಯಗಳು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಮುಂಬೈನ ಶಿವಾಜಿ ಪಾರ್ಕ್​ನ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಹಾಜರಿದ್ದ ಶಾರೂಕ್​​ ಖಾನ್​​ ಲತಾ ಮಂಗೇಶ್ಕರ್​ರ ಪಾರ್ಥಿವ ಶರೀರಕ್ಕೆ ಮುಸ್ಲಿಂ ಮಾದರಿಯಲ್ಲಿ ದುವಾ ಮಾಡಿದ್ದರೆ ಅವರ ಮ್ಯಾನೇಜರ್​ ಪೂಜಾ ದದ್ಲಾನಿ ಹಿಂದೂ ಸಂಪ್ರದಾಯದಂತೆ ನಮಸ್ಕಾರ ಮಾಡಿದ್ದಾರೆ. ಇವರಿಬ್ಬರೂ ಜೊತೆಯಾಗಿ ಮುಸ್ಲಿಂ ಹಾಗೂ ಹಿಂದೂ ಮಾದರಿಯಲ್ಲಿ ಲತಾ ಮಂಗೇಶ್ಕರ್​​ ಪಾರ್ಥಿವ ಶರೀರಕ್ಕೆ ನಮಸ್ಕರಿಸುತ್ತಿರುವ ಫೋಟೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಫೋಟೋವನ್ನು ನೋಡಿದ ಅನೇಕರು ಇದು ವಿವಿಧತೆಯಲ್ಲಿ ಏಕತೆ ಎಂಬ ಭಾರತೀಯ ತತ್ವವನ್ನು ಸಾರುತ್ತಿರುವ ಫೋಟೋವಾಗಿದೆ ಎಂದು ಹಾಡಿ ಹೊಗಳಿದ್ದಾರೆ.
ಸೂಪರ್​ ಸ್ಟಾರ್​ ಶಾರೂಕ್​ ಖಾನ್​ರ ಈ ಸಭ್ಯ ನಡೆಗೆ ವಿದ್ಯಾರ್ಥಿಗಳಿಂದ ಹಿಡಿದು ರಾಜಕೀಯ ನಾಯಕರವರೆಗೂ ಎಲ್ಲರೂ ಭೇಷ್​ ಅಂದಿದ್ದಾರೆ.

ಆದರೆ ಇದರ ಜೊತೆಯಲ್ಲಿ ಶಾರೂಕ್​ ಖಾನ್​ ದುವಾ ಮಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಹರಿಯಾಣ ಬಿಜೆಪಿ ನಾಯಕ ಹೊಸದೊಂದು ವಿವಾದವನ್ನು ಎತ್ತಿ ಹಾಕಿದ್ದಾರೆ. ಹರಿಯಾಣ ಬಿಜೆಪಿ ಐಟಿ ಸೆಲ್​ ಇನ್​ಚಾರ್ಜ್ ಆಗಿರುವ ಅರುಣ್​ ಯಾದವ್​ ಶಾರೂಕ್​ ಖಾನ್​ ಲತಾ ಮಂಗೇಶ್ಕರ್​ ಮೃತದೇಹಕ್ಕೆ ಉಗುಳಿದ್ದಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಟ್ವಿಟರ್​ನಲ್ಲಿ ಅರುಣ್​ ಯಾದವ್​, ಶಾರೂಕ್​ ಉಗುಳಿದರೇ..? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ನೋಡಿದ ಬಲಪಂಥೀಯರು ಶಾರೂಕ್​ ಖಾನ್​ ವಿರುದ್ಧ ಆಕ್ರೋಶವನ್ನು ಹೊರ ಹಾಕಲು ಆರಂಭಿಸಿದ್ದಾರೆ. ‘
ಆದರೆ ಅರುಣ್​ ಯಾದವ್​ರ ಈ ಟ್ವೀಟ್​ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾದ ವಿರೋಧವು ವ್ಯಕ್ತವಾಗಿದೆ. ಮುಸ್ಲಿಂ ಸಂಪ್ರದಾಯಗಳಲ್ಲಿ ದುವಾ ಮಾಡಿದ ಬಳಿಕ ದುಷ್ಟ ಶಕ್ತಿಗಳನ್ನು ದೂರವಿಡಲು ಬಾಯಿಯಿಂದ ಗಾಳಿಯನ್ನು ಊದಲಾಗುತ್ತದೆ. ಇಂತಹ ಒಂದು ಸುಂದರ ಕ್ಷಣವನ್ನು ಕೆಡಿಸಿದ ಅರುಣ್​ ಯಾದವ್​ರನ್ನು ಬಹುತೇಕ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನು ಓದಿ : Covid Cases Drop : ಬರೋಬ್ಬರಿ 1 ತಿಂಗಳ ಬಳಿಕ ದೇಶದಲ್ಲಿ ದೈನಂದಿನ ಕೋವಿಡ್​ ಪ್ರಕರಣದಲ್ಲಿ ಭಾರೀ ಇಳಿಕೆ

Shah Rukh Khan Offering ‘Dua’ For Lata Mangeshkar Makes Twitter Emotional

Comments are closed.