YouTube Shorts ಅನ್ನು ಸುಲಭವಾಗಿ ರಚಿಸುವುದು ಹೇಗೆ ಗೊತ್ತೇ?

ಇಂಟರ್ನೆಟ್‌ (Internet) ಬಳಕೆದಾರರ ಅಭ್ಯಾಸಗಳು ಕಾಲಕಾಲಕ್ಕೆ ಬದಲಾಗುತ್ತಿವೆ. ಜನರು ಕಡಿಮೆ ಸಮಯದಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಬಯುಸುತ್ತಾರೆ. ಈ ಹೆಚ್ಚುತ್ತಿರುವ ಅಗತ್ಯದಿಂದಾಗಿ ಟಿಕ್‌ಟಾಕ್‌, ಇನ್‌ಸ್ಟಾಗ್ರಾಮ್ ರೀಲ್ಸ್‌ ಮತ್ತು ಈಗ ಯೂಟ್ಯೂಬ್‌ ಶಾರ್ಟ್‌ಗಳನ್ನು ರಚಿಸಲಾಗಿದೆ. YouTube Shorts ಗಳ ಬಗ್ಗೆ ಹೇಳುವುದಾದರೆ, ನೀವು ವೇಗವಾಗಿ ಬೆಳೆಯಲು ಸಹಾಯ ಮಾಡಲು ಅವುಗಳನ್ನು ನಿಮ್ಮ ಕಂಟೆಂಟ್‌ ಮಾರ್ಕೆಟಿಂಗ್‌ ಕಾರ್ಯತಂತ್ರದಲ್ಲಿ ಸೇರಿಸಿಕೊಳ್ಳಬಹುದು. ಪ್ರತಿದಿನ, 15 ಬಿಲಿಯನ್‌ ಕಿರುಚಿತ್ರ(Shorts) ಗಳನ್ನು ವೀಕ್ಷಿಸಲಾಗುತ್ತದೆ. ಅವುಗಳು ನಿಮಗೆ ಒಂದು ಕಲ್ಪನೆಯನ್ನು ನೀಡುತ್ತವೆ. YouTube ವಿಡಿಯೋ ವಸ್ತುಗಳೊಂದಿಗೆ ಹೋಲಿಸಿದಾಗ ಶಾರ್ಟ್ಸ್‌ಗಳು ಕಡಿಮೆ ಸಮಯದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಪಡೆಯಲು ನಿಮಗೆ ಸಹಾಯ ಮಾಡಬಹುದು.

ಜನರು ಶಾರ್ಟ್ಸ್‌(ಕಿರುಚಿತ್ರಗಳನ್ನು) ವೀಕ್ಷಿಸುವುದನ್ನು ಆನಂದಿಸುತ್ತಾರೆ ಮತ್ತು ಅದರ ಅಲ್ಗಾರಿದಮ್‌ಗಳು YouTube Shorts ಜನಪ್ರಿಯತೆ ಪಡೆಯಲು ಸಹಾಯ ಮಾಡುತ್ತಿವೆ. ಶಾರ್ಟ್ಸ್‌ ಅನ್ನು ಬಳಸಲು ಕೆಲವು ಉಪಯುಕ್ತ ಹಿಂಟ್‌ಗಳು ಯಾವುದು? ಅದನ್ನು ಬಳಸಿಕೊಳ್ಳುವುದು ಹೇಗೆ? ಅದನ್ನು ಸರಿಯಾಗಿ ತಿಳಿದುಕೊಳ್ಳೋಣ. ನಿಮ್ಮ YouTube ಚಾನಲ್‌ ಅನ್ನು ವಿಸ್ತರಿಸಲು YouTube Shorts ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ.

  • ಶಾರ್ಟ್ಸ್‌ಗಳಿಗೆ ಶಿಫಾರಸು ಮಾಡಲಾದ ಸಮಯವು 60 ಸೆಕೆಂಡ್‌ಗಳು ಅಥವಾ ಅದಕ್ಕಿಂತ ಕಡಿಮೆಯಿರುತ್ತದೆ. ಆದರೆ ನೀವು ಸಂಪೂರ್ಣ ನಿಮಿಷಗಳನ್ನು ಬಳಸಿಕೊಳ್ಳುವ ಅಗತ್ಯವಿಲ್ಲ ಎಂದು ನೆನಪಿಡಿ.
  • ನಿಮ್ಮ ವಿಷಯವನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ತರಲು ಗಮನಹರಿಸಿ.
  • ನಿಮ್ಮ ಪ್ರೇಕ್ಷಕರ ಸಮಯವನ್ನು ಪರಿಗಣಿಸಿ.
  • ನಿರ್ದಿಷ್ಟ ಮತ್ತು ನಿಮ್ಮ ಪ್ರೇಕ್ಷಕರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಿ. ಏಕೆಂದರೆ ವಿಕ್ಷಕರು ನಿಮ್ಮ ಚಾನಲ್‌ನೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.

YouTube Shorts ರಚಿಸಲು ಹೀಗೆ ಮಾಡಿ:

  • YouTube ತೆರೆಯಿರಿ.
  • ಎಡಗಡೆಯ ಮೆನ್ಯುವಿನಲ್ಲಿ Shorts ಆಯ್ದುಕೊಳ್ಳಿ.
  • ಅಲ್ಲಿ ಬಲಗಡೆ ಇರುವ ವೀಡಿಯೋ ಐಕಾನ್‌(ಕ್ರಿಯೇಟ್‌) ಕ್ಲಿಕ್ಕಿಸಿ.
  • ಕ್ರಿಯೇಟ್‌ ಅಲ್ಲಿ ಅಪ್‌ಲೋಡ್‌ ವಿಡಿಯೋ ಆಯ್ದುಕೊಳ್ಳಿ.
  • ನೀವು ಮಾಡಿಟ್ಟುಕೊಂಡ ಶಾರ್ಟ್‌ ವಿಡಿಯೋ ಸೆಲೆಕ್ಟ್‌ ಮಾಡಿ, ಅಗತ್ಯ ಮಾಹಿತಿ ಒದಗಿಸಿ.

ಇದನ್ನೂ ಓದಿ :BMTC Digital Bus Pass : ಪೇಪರ್ ಲೆಸ್ ಪಾಸ್ : ಬಿಎಂಟಿಸಿಯಲ್ಲಿ ಮೊಬೈಲ್ ತೋರಿಸಿ ಪ್ರಯಾಣಿಸಿ

ಇದನ್ನೂ ಓದಿ : Facebook ಫೇಸ್‌ಬುಕ್ ಇನ್ನು ಔಟ್‌ಆಫ್ ಟ್ರೆಂಡ್ !

(YouTube Shorts steps to make and promote youtube shorts)

Comments are closed.