Taj Mahal : 1 ಕೋಟಿ ರೂ. ಟ್ಯಾಕ್ಸ್ ಕಟ್ಟಿ, ಇಲ್ಲದಿದ್ರೆ ಸೀಜ್ : ತಾಜಮಹಲ್‌ಗೆ ನೋಟಿಸ್ ಜಾರಿ

ಆಗ್ರಾ : ವಿಶ್ವದ ಏಳು ಅದ್ಬುತಗಳಲ್ಲಿ ಒಂದೆನಿಸಿಕೊಂಡಿರುವ ಆಗ್ರಾದಲ್ಲಿರುವ ತಾಹಮಹಲ್ (Taj Mahal) ಪ್ರವಾಸಿಗರ ನೆಚ್ಚಿನ ತಾಣ. ಕಳೆದ 370 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 1 ಕೋಟಿ ರೂ. ಆಸ್ತಿ ಮತ್ತು ನೀರಿನ ತೆರಿಗೆ ಪಾವತಿಸುವಂತೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನೋಟಿಸ್ ಜಾರಿ ಮಾಡಿದೆ. ಒಂದೊಮ್ಮೆ ತೆರಿಗೆ ಪಾವತಿ ಮಾಡದೇ ಇದ್ರೆ ಸೀಜ್ ಮಾಡುವುದಾಗಿಯೂ ಎಚ್ಚರಿಕೆಯನ್ನು ನೀಡಿದೆ.

ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಇದು ತಪ್ಪು ಹೆಜ್ಜೆಯಾಗಿದೆ. ಕೂಡಲೇ ಮುನ್ಲಿಪಲ್ ಅಧಿಕಾರಿಗಳು ಶೀಘ್ರದಲ್ಲಿಯೇ ತಮ್ಮ ತಪ್ಪನ್ನು ಸರಿ ಪಡಿಸಲಿದ್ದಾರೆ. ಆಗ್ರಾದ ಮುನ್ಸಿಪಲ್ ಕಾರ್ಪೋರೇಷನ್ ಆಸ್ತಿ ತೆರಿಗೆಯಾಗಿ 1.40 ಲಕ್ಷ ಹಾಗೂ 1 ಕೋಟಿ ರೂ.ಗಳನ್ನು ನೀರಿನ ತೆರಿಗೆಯಾಗಿ ಪಾವತಿಸುವಂತೆ ನೋಟಿಸ್‌ನಲ್ಲಿ ತಿಳಿಸಿದೆ ಎಂದು ಎಎಸ್‌ಐಯ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ (ಆಗ್ರಾ ವೃತ್ತ) ರಾಜ್ ಪಟೇಲ್ ಅವರು ಮಾಹಿತಿ ನೀಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಹಲವು ಸ್ಮಾರಕ, ಐತಿಹಾಸಿಕ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. ಇದುವರೆಗೆ ತಾಜ್ ಮಹಲ್ ಗೆ ಎರಡು ಬಾರಿ ಹಾಗೂ ಆಗ್ರಾ ಕೋಟೆಗೆ ಮೂರು ಬಾರಿ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Metro AG : 19 ವರ್ಷದ ಬಳಿಕ ಭಾರತದ ಮಾರುಕಟ್ಟೆ ತೊರೆಯಲಿದೆ ಮೆಟ್ರೋ ಎಜಿ : ಕಾರಣವೇನು ಗೊತ್ತಾ ?

ಇದನ್ನೂ ಓದಿ : LPG Cylinders Just rs 500 : ಕೇವಲ 500 ರೂ. ಇಳಿಕೆಯಾಗಲಿದೆ ಎಲ್‌ಪಿಜಿ ಸಿಲಿಂಡರ್‌ !

ಇದನ್ನೂ ಓದಿ : Manohari tea from Assam : 1 ಕೆಜಿ ಟೀ ಪುಡಿ 1.15 ಲಕ್ಷ ರೂ.ಗೆ ಮಾರಾಟ : ದಾಖಲೆ ಬರೆದ ಅಸ್ಸಾಂನ ಮನೋಹರಿ ಟೀ

ಇನ್ನು ಸ್ಮಾರಕಗಳಿಗೆ ಆಸ್ತಿ ಅಥವಾ ಮನೆ ತೆರಿಗೆ ಅನ್ವಯವಾಗುವುದಿಲ್ಲ. ಅಲ್ಲದೇ ಉತ್ತರ ಪ್ರದೇಶದಲ್ಲಿನ ಕಾನೂನುಗಳು ಕೂಡ ಸ್ಮಾರಕಗಳಿಗೆ ತೆರಿಗೆ ವಿಧಿಸುವುದಕ್ಕೆ ನಿರ್ಬಂಧವನ್ನು ಹೇರಿವೆ. ತಾಜ್ ಮಹಲ್ ವಾಣಿಜ್ಯ ಉದ್ದೇಶಕ್ಕೆ ಬಳಸುವ ಯಾವುದೇ ನೀರಿನ ಸಂಪರ್ಕವನ್ನೂ ಹೊಂದಿಲ್ಲ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಾಜ್ ಮಹಲ್ ಗೆ ತೆರಿಗೆಯನ್ನು ವಿಧಿಸಲಾಗಿದೆ. ಅಲ್ಲದೇ ತಾಜ್ ಕಾಂಪ್ಲೆಕ್ಸ್‌ನ ಒಳಗೆ ನಾವು ನಿರ್ವಹಿಸುವ ಹುಲ್ಲುಹಾಸುಗಳು ಸಾರ್ವಜನಿಕ ಸೇವೆಗಾಗಿ ಮತ್ತು ಬಾಕಿಯ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು. ತಾಜ್ ಮಹಲ್ ಅನ್ನು 1920 ರಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಯಿತು. ಹಾಗೆ ಬ್ರಿಟಿಷರ ಆಳ್ವಿಕೆಯಲ್ಲಿ ಸಹ, ಸ್ಮಾರಕದ ಮೇಲೆ ಯಾವುದೇ ಮನೆ ಅಥವಾ ನೀರಿನ ತೆರಿಗೆಯನ್ನು ವಿಧಿಸಲಾಗಿಲ್ಲ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

1 Crore Rs. Pay tax, otherwise siege: Notice issued to Taj Mahal

Comments are closed.