grandma burnt to death : ಪೆಟ್ರೋಲ್​ ಸುರಿದು ಸ್ವಂತ ಅಜ್ಜಿಯನ್ನೇ ಸುಟ್ಟು ಕೊಂದ ಮೊಮ್ಮಕ್ಕಳು ಅಂದರ್​

ತಮಿಳುನಾಡು :grandma burnt to death: ಮೊಮ್ಮಕ್ಕಳು ಹಾಗೂ ಅಜ್ಜಿ – ತಾತಂದಿರ ನಡುವಿನ ಬಂಧ ಅದು ವಿಶೇಷವಾಗಿದೆ. ಮಕ್ಕಳಿಗೆ ತಮ್ಮ ತಂದೆ- ತಾಯಿಗಿಂತಲೂ ಅಜ್ಜ- ಅಜ್ಜಿಯಂದಿರ ಮೇಲೆ ವಿಶೇಷವಾದ ಅಕ್ಕರೆ ಇರುತ್ತದೆ. ಆದರೆ ಈ ಮಾತಿಗೆ ವಿರುದ್ಧ ಎಂಬಂತೆ ಅಜ್ಜಿಯನ್ನು ಸಾಕಲು ಇಷ್ಟವಿಲ್ಲದ ಇಬ್ಬರು ಮೊಮ್ಮಕ್ಕಳು ಸೇರಿ ವೃದ್ಧೆಯನ್ನು ಜೀವಂತ ಸುಟ್ಟು ಕೊಲೆ ಮಾಡಿದ್ದಾರೆ. ಈ ಬೆಚ್ಚಿ ಬೀಳಿಸುವ ಘಟನೆಯು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪೇಟ್ಟೈ ಎಂಬಲ್ಲಿ ನಡೆದಿದೆ. ಮೇ 3ರಂದು ಸುಟ್ಟ ಸ್ಥಿತಿಯಲ್ಲಿ ಆಧಾಂ ನಗರದ ಕಸದ ರಾಶಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶವ ಪತ್ತೆಯಾದ ಬಳಿಕ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಮೊದಲು ಆಟೋ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಸಿಸಿ ಕ್ಯಾಮಾರಗಳ ಪರಿಶೀಲನೆ, ಸಾಕ್ಷ್ಯಗಳ ವಿಚಾರಣೆಯ ಬಳಿಕ ಇದು 90 ವರ್ಷದ ಸುಬ್ಬಮ್ಮಳ್​ ಎಂಬವರ ಮೃತ ದೇಹ ಎಂಬುದು ಪೊಲೀಸರಿಗೆ ತಿಳಿದಿತ್ತು. ಈ ವೃದ್ಧೆಯನ್ನು ಮೊಮ್ಮಕ್ಕಳಾದ ಮರಿಯಮ್ಮಾಳ್​ ಹಾಗೂ ಮೇರಿ ಎಂಬವರು ನೋಡಿಕೊಳ್ಳುತ್ತಿದ್ದರು. ಆದರೆ ವೃದ್ಧೆಯನ್ನು ನೋಡಿಕೊಂಡು ಬೇಸತ್ತಿದ್ದ ಈ ಇಬ್ಬರು ಆಕೆಯನ್ನು ಕೊಲ್ಲಲು ಪ್ಲಾನ್​ ಮಾಡಿದ್ದಾರೆ. ಅಧಾಂ ನಗರದಲ್ಲಿ ಸುಬ್ಬಮ್ಮಳ್​ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹೆಚ್ಚಿದ್ದ ಮರಿಯಮ್ಮಳ್​ ಹಾಗೂ ಮೇರಿ ಬಳಿಕ ಶವವನ್ನು ಕಸದ ತೊಟ್ಟಿಗೆ ಎಸೆದಿದ್ದರು.


ಆದರೆ ಸಾಕ್ಷ್ಯಗಳ ಸಂಗ್ರಹಗಳ ಬಳಿಕ ಈ ಇಬ್ಬರು ಮೊಮ್ಮಕ್ಕಳ ಕಳ್ಳಾಟ ಪೊಲೀಸರ ಎದುರು ಬಟಾ ಬಯಾಲಾಗಿದೆ. ಇದೀಗ ಪೊಲೀಸರು ಮರಿಯಮ್ಮಳ್​ ಹಾಗೂ ಮೇರಿಯನ್ನು ಬಂಧಿಸಿದ್ದು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ : MI vs GT IPL 2022 : ಮುಂಬೈ ಇಂಡಿಯನ್ಸ್‌ ಪರ ಕಣಕ್ಕೆ ಇಳಿಯಲಿದ್ದಾರೆ ಅರ್ಜುನ್ ತೆಂಡೂಲ್ಕರ್

ಇದನ್ನೂ ಓದಿ : Akshaya Tritiya : ಧರ್ಮಸಂಘರ್ಷಕ್ಕೆ ಕ್ಯಾರೇ ಎನ್ನದ ಜನರು : ರಾಜ್ಯದಲ್ಲಿ 1680 ಕೋಟಿ ರೂ. ಮೌಲ್ಯದ ಚಿನ್ನ ಮಾರಾಟ

90 year grandma burnt to death by her own granddaughters

Comments are closed.