ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ

Monsoon Tour best place : ತುಂಬಿ ಹರಿಯುತ್ತಿರುವ ಮೂವತ್ತಕ್ಕೂ ಅಧಿಕ ಜಲಪಾತಗಳಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ ಭಾರತದ ಜಲಪಾತಗಳ ಗ್ರಾಮ ಇಂದು ಖ್ಯಾತಿಗಳಿಸಿದೆ. ರುದ್ರರಮಣೀಯ ಜಲಪಾತಗಳು ಈ ಭಾಗದ ವಿಶೇಷತೆಗಳಲ್ಲಿ ಒಂದು. ಪಶ್ಚಿಮಘಟ್ಟದ ಬ್ರಹ್ಮಗಿರಿಯ ಮೂಲಕ ಸೃಷ್ಟಿಯಾಗುವ ಜಲಪಾತಗಳು 30 ಕಿಲೋಮೀಟರ್ ರಸ್ತೆಯನ್ನು ಸುಂದರವಾದ ಪ್ರವಾಸಿ ಸ್ಥಳವನ್ನಾಗಿಸಿದೆ. ನಾವು 30 ಕಿಲೋಮೀಟರ್ ರಸ್ತೆಯನ್ನು ಬ್ರಹ್ಮಗಿರಿಯ ರಾಷ್ಟ್ರೀಯ ಉದ್ಯಾನವನದ ಒಳಗೆ ಚಲಿಸುವ ಕಾರಣ, ಇದು ಅದ್ಭುತ ಲೋಕವನ್ನು ಸೃಷ್ಟಿ ಮಾಡಿದೆ.

Monsoon Tour best place Kodagu karike madikeri

ಕೊಡಗು ಜಿಲ್ಲೆಯ ಗಡಿಯಂಚಿನ ಗ್ರಾಮ ಕರಿಕೆ ದೇಶದಲ್ಲಿಯೇ ಜಲಪಾತಗಳ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಭಾಗಮಂಡಲದಿಂದ ಕರಿಕೆ ಗೆ ಬರುವ ಹೆದ್ದಾರಿಯಲ್ಲಿ 30ಕ್ಕೂ ಅಧಿಕ ಜಲಪಾತಗಳು ಪ್ರವಾಸಿಗರನ್ನು ನಿಬ್ಬೆರಗಾಗಿಸುತ್ತದೆ. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಈ ದೃಶ್ಯಗಳನ್ನು ನೋಡಲು ಕರಿಕೆ ಗ್ರಾಮಕ್ಕೆ ನೂರಾರು ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಬರುತ್ತಿದ್ದಾರೆ. ಮೂವತ್ತಕ್ಕೂ ಅಧಿಕ ಜಲಪಾತಗಳು ಹೆದ್ದಾರಿಯ ಪಕ್ಕದಲ್ಲಿ ಕಾಣಸಿಗುವುದು ಇಲ್ಲಿಯ ವಿಶೇಷ.

Monsoon Tour best place Kodagu karike madikeri

30 ಕಿಲೋಮೀಟರ್ ದೂರದ ರಸ್ತೆಯಲ್ಲಿ ಪ್ರತಿ ಕಿಲೋಮೀಟರಿಗೂ ಒಂದಂತೆ ಜಲಪಾತಗಳು ಈ ಭಾಗದಲ್ಲಿ ಕಾಣಸಿಗುತ್ತದೆ. ಸುಳ್ಯದಿಂದ 30 ಕಿಲೋಮೀಟರ್ ದೂರದಲ್ಲಿದೆ ಇದು. ಮಡಿಕೇರಿಯಿಂದ 35 ಕಿಲೋಮೀಟರ್ ದೂರದಲ್ಲಿದೆ. ಇನ್ನೊಂದು ಕೇರಳದ ಮುಖಾಂತರವೂ ಈ ಭಾಗಕ್ಕೆ ನಾವು ಪ್ರವೇಶಿಸಬಹುದು. ಕಾಸರಗೋಡಿನಿಂದ ಪಾಣತ್ತೂರು ಭಾಗಕ್ಕೆ ನಾವು ಬಂದು ಕರಿಕೆ ತಲುಪಬಹುದು.

Monsoon Tour best place Kodagu karike madikeri

ಕರಿಕೆಯಿಂದ ಭಾಗಮಂಡಲ ರಸ್ತೆಯಲ್ಲಿ ಮಳೆಗಾಲದಲ್ಲಿ ಧುಮ್ಮಿಕ್ಕುವ ಈ ಜಲಪಾತಗಳು ಸ್ವರ್ಗವನ್ನೇ ಸೃಷ್ಟಿಸುತ್ತವೆ. ಮಾನ್ಸೂನ್ ಪ್ರವಾಸಕ್ಕೆ ಕರಿಕೆ ಹೇಳಿ ಮಾಡಿದ ಸ್ಥಳ ದಂತಿದೆ.

ಇದನ್ನೂ ಓದಿ : South Indian Tourism: ಮಾನ್ಸೂನ್ ನಲ್ಲಿ ಮಿಸ್ ಮಾಡದೆ ಭೇಟಿ ನೀಡಬೇಕಾದ ಟಾಪ್ ಪ್ರವಾಸಿ ತಾಣಗಳು

ಇದನ್ನೂ ಓದಿ : Caravan Tourism: ಕೇರಳದಲ್ಲಿ ಜನಪ್ರಿಯತೆ ಪಡೆಯುತ್ತಿದೆ ‘ಕ್ಯಾರವಾನ್ ಟೂರಿಸಂ’

Monsoon Tour best place Kodagu karike madikeri

Comments are closed.