Home Remedies For Dandruff : ಚಳಿಗಾಲದ ಡಾಂಡ್ರಫ್‌ ಸಮಸ್ಯೆಗೆ ಮನೆಮದ್ದುಗಳೇ ಉತ್ತಮ ಪರಿಹಾರ

ಚಳಿಗಾಲ (Winter) ದಲ್ಲಿ ಬಹಳಷ್ಟು ಜನರು ಡಾಂಡ್ರಫ್‌ (Dandruff) ಸಮಸ್ಯೆಯನ್ನು ಎದುರಿಸುತ್ತಾರೆ. ಬಿಳಿ ಬಣ್ಣದ ಹೊಟ್ಟು ಗಾಢ ಬಣ್ಣದ ಬಟ್ಟೆಗಳ ಮೇಲೆ ಬಿದ್ದು ಮುಜುಗರವನ್ನುಂಟು ಮಾಡುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಬ್ಯೂಟಿ ಪ್ರಾಡೆಕ್ಟ್‌ಗಳು ದೊರೆಯುತ್ತವೆ. ಆದರೆ ಅವೆಲ್ಲವೂ ರಾಸಾಯನಿಕಗಳಿಂದ ಕೂಡಿವೆ. ಅವು ನೀಡುವ ಪರಿಹಾರ ಬಹಳ ದಿನಗಳವರೆಗೆ ಇರುವುದಿಲ್ಲ. ಜೊತೆಗೆ ಅವುಗಳು ಕೂದಲಿಗೂ ಹಾನಿಯನ್ನುಂಟು ಮಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ಕಾಡುವ ಡಾಂಡ್ರಫ್‌ ಸಮಸ್ಯೆಗೆ ಮನೆ ಮದ್ದುಗಳೇ ಬೆಸ್ಟ್‌ (Home Remedies For Dandruff). ಅವುಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಇಲ್ಲಿ ಹೇಳಿರುವ ಮನೆಮದ್ದುಗಳು ಬಹಳ ಸುಲಭವಾಗಿ ದೊರೆಯುತ್ತದೆ ಮತ್ತು ಅದನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು.

ಚಳಿಗಾಲದಲ್ಲಿ ಕಾಡುವ ಡಾಂಡ್ರಫ್‌ ಸಮಸ್ಯೆಗೆ ಮನೆಮದ್ದುಗಳು :

ತೆಂಗಿನ ಎಣ್ಣೆ, ಆಲೀವ್‌ ಎಣ್ಣೆ ಮತ್ತು ಮೊಸರು :
ತೆಂಗಿನ ಎಣ್ಣೆ 2 ಚಮಚ, ಆಲೀವ್‌ ಎಣ್ಣೆ 2 ಚಮಚ ಮತ್ತು 3 ಚಮಚ ಮೊಸರು ಇವುಗಳನ್ನು ಒಂದು ಚಿಕ್ಕ ಬೌಲ್‌ಗೆ ಹಾಕಿ ಪೇಸ್ಟ್‌ ತಯಾರಿಸಿಕೊಳ್ಳಿ. ಅದು ಜೆಲ್‌ನ ರೀತಿಯಲ್ಲಿರಲಿ. ಆ ಪೇಸ್ಟ್‌ ಅನ್ನು ನೆತ್ತಿಗೆ ಹೆಚ್ಚಿ ನಿಧಾನವಾಗಿ ಮಸಾಜ್‌ ಮಾಡಿ. ಮುಕ್ಕಾಲು ಗಂಟೆಯ ನಂತರ ಮೈಲ್ಡ್‌ ಶಾಂಪು ಉಪಯೋಗಿಸಿ ನೀರಿನಿಂದ ತೊಳೆಯಿರಿ.

ಕಹಿ ಬೇವಿನ ನೀರು :
ಕಹಿ ಬೇವು ಕೂದಲಿನ ಯಾವುದೇ ಸಮಸ್ಯೆಗೆ ಉತ್ತಮ ಎಂದು ನಮಗೆಲ್ಲರಿಗೂ ತಿಳಿದಿದೆ. 4 ಚಮಚ ಆಲೀವ್‌ ಎಣ್ಣೆಗೆ ಒಣಗಿದ ಬೇವಿನ ಎಲೆ ಸೇರಿಸಿ ಬಿಸಿ ಮಾಡಿ. ಒಂದು ಗಂಟೆಯ ಕಾಲ ಹಾಗೆ ಇಡಿ. ನಂತರ ಅದನ್ನು ತಲೆಗೆ ಹಚ್ಚಿ. ಅರ್ಧ ಗಂಟೆಯ ನಂತರ ತೊಳೆಯಿರಿ.

ಟೀ ಟ್ರೀ ಎಣ್ಣೆ :
ಟೀ ಟ್ರೀ ಎಣ್ಣೆ ತುರಿಕೆ ಮತ್ತು ಡಾಂಡ್ರಫ್‌ ಅನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೀವು ಯಾವಾಗಲೂ ಬಳಸುವ ಆಂಟಿ–ಡಾಂಡ್ರಫ್‌ ಶಾಂಪೂವನ್ನು ತೆಗೆದುಕೊಳ್ಳಿ. ಅದಕ್ಕೆ ಕೆಲವು ಹನಿ ಟೀ ಟ್ರೀ ಎಣ್ಣೆ ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ. ಅದರಿಂದ ನಿಮ್ಮ ಕೂದಲು ತೊಳೆಯಿರಿ.

ಮೊಸರು :
ಮೊಸರಿನಲ್ಲಿರುವ ಲ್ಯಾಕ್ಟಿಕ್‌ ಆಸಿಡ್‌ ಡಾಂಡ್ರಫ್‌ ಹೋಗಲಾಡಿಸುತ್ತದೆ. ಜೊತೆಗೆ ಇದು ಕೂದಲನ್ನು ಬುಡದಿಂದ ಗಟ್ಟಿಯಾಗಿಸುತ್ತದೆ. ಮೊಸರನ್ನು ನೇರವಾಗಿ ತಲೆಗೆ ಹಚ್ಚಿಕೊಳ್ಳಿ. 4 ನಿಮಿಷಗಳ ಕಾಲ ಮಸ್ಸಾಜ್‌ ಮಾಡಿ. 15 ನಿಮಿಷ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ.

ತೆಂಗಿನ ಎಣ್ಣೆ:
ತೆಂಗಿನ ಎಣ್ಣೆ ಡಾಂಡ್ರಫ್‌ ಸಮಸ್ಯೆಗೆ ಮತ್ತು ಕೂದಲಿನ ಬೆಳವಣಿಗೆಗೆ ಉತ್ತಮವಾಗಿದೆ. ತೆಂಗಿನ ಎಣ್ಣೆಯ ಚಿಕಿತ್ಸೆಗೆ ಮೊದಲು ಮೈಲ್ಡ್‌ ಶಾಂಪುವಿನಿಂದ ಕೂದಲನ್ನು ತೊಳೆಯಿರಿ ನಂತರ ಸಂಪೂರ್ಣವಾಗಿ ಒಣಗಿಸಿ. ಸ್ವಲ್ಪ ತೆಂಗಿನ ಎಣ್ಣೆ ತೆಗೆದುಕೊಳ್ಳಿ ಕೂದಲಿನ ಬುಡಕ್ಕೆ ಹಚ್ಚಿ. ಸ್ವಲ್ಪ ಸಮಯ ಹಾಗೆ ಬಿಡಿ. ನಂತರ ಮತ್ತೆ ನೀರಿನಿಂದ ಕೂದಲನ್ನು ತೊಳೆಯಿರಿ.

ಇದನ್ನೂ ಓದಿ : Walnut Benefits During Pregnancy: ಪ್ರಗ್ನೆನ್ಸಿ ಮತ್ತು ವಾಲ್ನಟ್‌; ನಿಮ್ಮ ಮಗುವಿನ ಬೆಳವಣಿಗೆಗೆ ಇದು ಸೂಪರ್‌ ಫುಡ್‌

ಇದನ್ನೂ ಓದಿ : Omicron BF.7: ಕೋವಿಡ್ ಹೊಸ ರೂಪಾಂತರ : ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಿ

(5 effective Home Remedies For Dandruff during this winter)

Comments are closed.