Onam in Kerala : ಓಣಂ ಹಬ್ಬ ನೋಡಲು ಭೇಟಿ ನೀಡಬಹುದಾದ ಕೇರಳದ 5 ಪ್ರಸಿದ್ಧ ಸ್ಥಳಗಳು

ದೇವರುಗಳ ನಾಡು ಎಂದೇ ಖ್ಯಾತಿ ಪಡೆದ ಕೇರಳ (Kerala)ದ ಪ್ರಸಿದ್ಧ ಹಬ್ಬ ಓಣಂ (Happy Onam 2022) . ಕೇರಳದವರು ಈ ಹಬ್ಬವನ್ನು (Onam in Kerala) ರಾಜ್ಯಾದ್ಯಂತ ಆಚರಿಸುತ್ತಾರೆ. ಬಹಳ ಸಡಗರ ಮತ್ತು ಸಂಭ್ರಮದಿಂದ ಇದನ್ನು ಆಚರಿಸಲಾಗುತ್ತದೆ. ಆದರೆ ಕೆಲವು ಸ್ಥಳಗಳು ಇತರ ಸ್ಥಳಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಾಗಿಯೇ ವಿಜ್ರಂಭಣೆಯಿಂದ ಆಚರಿಸುತ್ತಾರೆ. ಸುದೀರ್ಘ 10 ದಿನಗಳ ಕಾಲ ನೆಡೆಯುವ ಓಣಂ ಮಂಗಳಕರವಾದ ಹಬ್ಬವಾಗಿದೆ. ನೃತ್ಯ, ಸಂಗೀತ, ಹೂವಿನ ಅಲಂಕಾರ, ದೀಪ, ಕಹಳೆ, ಡ್ರಮ್ಸ್‌, ದೋಣಿ ಸ್ಪರ್ಧೆ ಮತ್ತು ಬಣ್ಣಗಳೊಂದಿಗೆ ಇದನ್ನು ಆಚರಿಸುತ್ತಾರೆ. ಈ ಎಲ್ಲಾ ಸಂಪ್ರದಾಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಆನಂದಿಸಲು ಕೇರಳದಲ್ಲಿ ಕೆಲವು ಪ್ರಶಸ್ತ ಸ್ಥಳಗಳಿವೆ. ಆ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ ನೀವೂ ಆ ಹಬ್ಬದಲ್ಲಿ ಭಾಗಿಯಾಗಬಹುದು.

ಕೆಲವರು ಓಣಂ (Onam 2022) ನೋಡಲೆಂದೇ ಕೇರಳಕ್ಕೆ ಹೋಗುತ್ತಾರೆ. ಹಾಗೇನಾದರೂ ನಿಮ್ಮ ಯೋಜನೆಯಿದ್ದರೆ ಇಲ್ಲಿ ಹೇಳಿರುವ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ. ಓಣಂ ಅನ್ನು ಬಹಳ ಸಡಗರಿಂದ ಆಚರಿಸುವ ಕೇರಳದ ಪ್ರಸಿದ್ಧ ಸ್ಥಳಗಳು:

ತಿರುವನಂತಪುರಂ :
ಕೇರಳದ ರಾಜಧಾನಿಯಾದ ತಿರುವಂತಪುರಂ ನಲ್ಲಿ ಓಣಂ ಅನ್ನು ವಿಶೇಷವಾಗಿ ಆಚರಿಸುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹಿಡಿದು ದೋಣಿ ಸ್ಪರ್ಧೆಯವರೆಗೆ ಇಲ್ಲಿ ಆಚರಿಸಲಾಗುತ್ತದೆ. ಬೀದಿಗಳಲ್ಲಿನ ಸುಂದರ ಅಲಂಕಾರಗಳು, ವಿವಿಧ ಆಹಾರ ಮಳಿಗೆಗಳಿಂದ ಈ ಊರು ಸಿಂಗರಿಸಿಕೊಂಡಿರುತ್ತದೆ.

ಅಲೆಪ್ಪಿ:
ದೇವರುಗಳ ನಾಡಿನಲ್ಲಿ ಅಲೆಪ್ಪಿ ಎಂದು ಕರೆಯಲ್ಪಡುವ ನಗರವಿದೆ. ಇದು ಹಿನ್ನೀರು, ಕಡಲತೀರಗಳು, ಅಲ್ಲಿನ ಸೂರ್ಯಾಸ್ತ ಎಲ್ಲವನ್ನೂ ಸಂಯೋಜಿಸಲ್ಪಟ್ಟ ಈ ಪ್ರದೇಶವು ಪ್ರಮುಖವಾಗಿದೆ. ಅಲೆಪ್ಪಿಯು ಓಣಂ ಹಬ್ಬದಲ್ಲಿ ಪಾಕಪದ್ಧತಿ, ಹೌಸ್‌ಬೋಟ್‌ಗಳು, ಎಲ್ಲೆಲ್ಲೂ ಸೊಂಪಾಗಿ ಕಾಣಿಸುವ ಹಸಿರು, ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅದ್ಭುತವಾದ ದೇವಾಲಯಗಳು ಮತ್ತು ಪುರಾತನ ತಾಣಗಳೊಂದಿಗೆ ಸಂತೋಷಪಡುವ ಪ್ರವಾಸಿ ತಾಣವಾಗಿದೆ.

ತ್ರಿಶೂರ್:
ಕೇರಳದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತಿದ್ದ ತ್ರಿಶೂರ್‌, ಓಣಂ ಅನ್ನು ಬಹಳ ಉಲ್ಲಾಸದಿಂದ ಆಚರಿಸುವ ಸ್ಥಳವಾಗಿದೆ. ಹುಲಿ ಮತ್ತು ಪುಲಿ-ಕಾಳಿ ನೃತ್ಯ ಇಲ್ಲಿನ ಸಾಂಸ್ಕೃತಿಕ ವಿಶೇಷತೆಯಾಗಿದೆ. ಇದಲ್ಲದೆ, ಓಣಂ ಸಮಯದಲ್ಲಿ ಇತರ ವಿಶೇಷ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಓಣಂ ಆಚರಣೆಯ ಭಾಗವಾಗಿ, ಆನಂದವನ್ನು ಅನುಭವಿಸಲು ಈ ಸ್ಥಳಕ್ಕೆ ಖಂಡಿತ ಭೇಟಿ ಕೊಡಿ.

ಎರ್ನಾಕುಲಂ:
ಓಣಂ ಅನ್ನು ಅತಿ ಉತ್ಸಾಹದಿಂದ ಆಚರಿಸುವ ಸ್ಥಳಗಳಲ್ಲಿ ಎರ್ನಾಕುಲಂ ಸಹ ಒಂದಿ . ಈ ಸಂದರ್ಭದಲ್ಲಿ, ಈ ನಗರವು ಹೂವುಗಳು, ದೀಪಗಳು, ನೃತ್ಯಗಳು ಮತ್ತು ಸಂಪ್ರದಾಯಗಳು ಮುಂತಾದವುಗಳಿಂದ ಅಲಂಕರಿಸಲ್ಪಟ್ಟಿದೆ. ಎರ್ನಾಕುಲಂ ಈ ಸಮಯದಲ್ಲಿ ಲೆಕ್ಕವಿಲ್ಲದಷ್ಟು ದೀಪಗಳಿಂದ ಅಲಂಕರಿಸಲ್ಪಟ್ಟ ಸ್ಥಳವಾಗಿರುತ್ತದೆ. ತ್ರಿಪುಣಿತುರಾ ಜಿಲ್ಲೆಯಲ್ಲಿ ಆಚರಿಸಲಾಗುವ ಅಥಾಚಮಯಂ ಉತ್ಸವಕ್ಕೆ ಭೇಟಿ ನೀಡಲು ನೀವು ಮರೆಯದಿರಿ. ಬೀದಿ ಮೆರವಣಿಗೆ, ಸಾಂಪ್ರದಾಯಿಕ ಸಂಗೀತ ಮತ್ತು ಹಲವಾರು ಸಾಂಪ್ರದಾಯಿಕ ಕಲಾಕೃತಿಗಳನ್ನು ಅನ್ವೇಷಿಸುವ ಮೂಲಕ ಈ ಹಬ್ಬವು ನಿಮ್ಮ ಎಲ್ಲಾ ಇಂದ್ರಿಯಗಳನ್ನು ಬೆರಗುಗೊಳಿಸುತ್ತದೆ.

ಕಣ್ಣೂರ್‌ :
ಓಣಂ ಹಬ್ಬವನ್ನು ಕಣ್ಣೂರಿನಲ್ಲಿ ತೆಯ್ಯಂ ಎಂದು ಕರೆದು ವಿಶೇಷ ರೀತಿಯಿಂದ ಆಚರಿಸುತ್ತಾರೆ. ತೆಯ್ಯಂ ಅನ್ನು ಕಲಿಯಾಟಂ ಎಂದೂ ಕರೆಯುತ್ತಾರೆ. ಇದು ಸಾಂಪ್ರದಾಯಿಕ ನೃತ್ಯದಲ್ಲಿ ಸಂಗೀತವನ್ನು ಸಂಯೋಜಿಸಿ ಪೂಜಿಸುವ ಆಚರಣೆಯಾಗಿದೆ. ಇದನ್ನು ಒಂದು ವರ್ಗದ ಜನರು ಈ ಕಲೆಯನ್ನು ಪ್ರದರ್ಶಿಸುತ್ತಾರೆ.

ಇದನ್ನೂ ಓದಿ : Onam 2022 : ಕೇರಳದ ಜನಪ್ರಿಯ ಸುಗ್ಗಿ ಹಬ್ಬ ಓಣಂ : ಏನಿದರ ವಿಶೇಷತೆ ?

ಇದನ್ನೂ ಓದಿ : Avial Onam Special : ಓಣಂಗೆ ಕೇರಳದ ಸ್ಪೆಷಲ್‌ ಡಿಶ್‌ ಆವಿಯಲ್‌ ಹೀಗೆ ಮಾಡಿ

(Onam in Kerala visit these places to see Onam festival)

Comments are closed.