Capsicum Benefits : ಕ್ಯಾಪ್ಸಿಕಮ್‌ನ ಈ ಪ್ರಯೋಜನಗಳು ಗೊತ್ತಾದ್ರೆ ನೀವು ಅದನ್ನು ತಿನ್ನದೇ ಇರಲು ಸಾಧ್ಯನೇ ಇಲ್ಲ

ಕ್ಯಾಪ್ಸಿಕಮ್‌ (Capsicum Benefits) ಒಂದು ತರಹದ ಮೆಣಸಿನಕಾಯಿ. ಶಿಮ್ಲಾ ಮಿರ್ಚ್‌, ಡೊಣ್ಣ ಮೆಣಸು, ಬೆಲ್ಲಿ ಪೆಪ್ಪರ್‌ ಎಂದೆಲ್ಲಾ ಇದನ್ನು ಕರೆಯುತ್ತಾರೆ. ಮೂಲತಃ ಮೆಕ್ಸಿಕೊದ ತರಕಾರಿಯಾದ ಕ್ಯಾಪ್ಸಿಕಮ್‌ ಅನ್ನು, ಫ್ರೈಡ್‌ ರೈಸ್‌, ನೂಡಲ್ಸ್‌, ಪಿಜ್ಹಾ ಮುಂತಾದವುಗಳಲ್ಲಿ ಬಳಕೆ ಮಾಡುತ್ತಾರೆ. ಇದಲ್ಲದೇ ಅನೇಕ ಅಡುಗೆಗಳಲ್ಲೂ ಉಪಯೋಗಿಸುತ್ತಾರೆ. ಕ್ಯಾಪ್ಸಿಕಮ್‌ ಸೇವನೆಯಿಂದ ಅನೇಕ ಆರೋಗ್ಯದ ಪ್ರಯೋಜನಗಳಿವೆ (Capsicum Benefits). ಕ್ಯಾಪ್ಸಿಕಮ್‌ನಲ್ಲಿ ಅನೇಕ ರೀತಿಯ ವಿಟಮಿನ್‌ ಮತ್ತು ಪೋಷಕಾಂಶಗಳಿವೆ. ವಿಟಮಿನ್‌ ಬಿ6, ಬಿ2, ಝಿಂಕ್‌, ಕಾಪರ್‌, ವಿಟಮಿನ್‌ ಇ ಮತ್ತು ವಿಟಮಿನ್‌ ಎ ಗಳಿಂದ ಕೂಡಿದೆ. ಇದು ಹೆಚ್ಚಿನ ಆಂಟಿ ಒಕ್ಸಿಡೆಂಟ್‌ ಮತ್ತು ಆಂಟಿ–ಇನ್ಫ್ಲಾಮೆಟರಿ ಗುಣಗಳನ್ನು ಹೊಂದಿದೆ.

ಕ್ಯಾಪ್ಸಿಕಮ್‌ ನ (Capsicum Benefits) ಆರೋಗ್ಯ ಪ್ರಯೋಜನಗಳು :

ಮೆದುಳನ್ನು ಚುರುಕುಗೊಳಿಸುತ್ತದೆ:
ಕ್ಯಾಪ್ಸಿಕಮ್‌ ನಲ್ಲಿರುವ ವಿಟಮಿನ್‌ ಬಿ6 ಮೆದುಳಿನ ಆರೋಗ್ಯ ಕಾಪಾಡಲು ಬಹಳ ಪ್ರಯೋಜನಕಾರಿ. ಇದು ನೆನಪಿನ ಶಕ್ತಿ ಹೆಚ್ಚಿಸಿ, ಅಲ್ಜಮೈರ್‌ ಕಾಯಿಲೆಯನ್ನು ತಡೆಯುತ್ತದೆ.

ರಕ್ತ ಹೀನತೆಯನ್ನು ನಿವಾರಿಸುತ್ತದೆ :
ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಆಮ್ಲಜನಕ ಕಡಿಮೆಯಾದಾಗ ರಕ್ತ ಹೀನತೆ ಕಾಣಿಸಿಕೊಳ್ಳುತ್ತದೆ. ಕ್ಯಾಪ್ಸಿಕಮ್‌ ನಲ್ಲಿರುವ ವಿಟಮಿನ್‌ ಬಿ2 ರಕ್ತಹೀನತೆ ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಅಗತ್ಯವಿರುವ ಕೆಂಪು ರಕ್ತ ಕಣಗಳ ತಯಾರಿಕೆಯನ್ನು ಉತ್ತೇಜಿಸುತ್ತದೆ.

ಕಣ್ಣಿನ ದೃಷ್ಟಿ ಚುರುಕುಗೊಳಿಸುತ್ತದೆ :
ಕ್ಯಾಪ್ಸಿಕಮ್‌ ನಲ್ಲಿರುವ ವಿಟಮಿನ್‌ ಎ ಕುರುಡುತನವನ್ನು ನಿವಾರಿಸಬಲ್ಲದು. ವಿಟಮಿನ್ ಸಿ, ವಿಟಮಿನ್ ಎ, ಸತು, ತಾಮ್ರ ಮತ್ತು ವಿಟಮಿನ್ ಇ ಗಳು ಮ್ಯಾಕ್ಯುಲರ್‌ ಡಿಜೆನರೇಶನ್‌ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಸಂಧಿವಾತ ನಿವಾರಿಸಬಲ್ಲದು :
ಕಾಪರ್‌ ಉರಿಯೂತ ನಿವಾರಿಸು ಗುಣ ಹೊಂದಿದೆ. ಕ್ಯಾಪ್ಸಿಕಮ್‌ ನಲ್ಲಿರವು ಕಾಪರ್‌ (ತಾಮ್ರ) ಸಂಧಿವಾತಕ್ಕೆ ಸಂಬಂಧಿಸಿದ ಬಿಗಿತ ಮತ್ತು ನೋವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಸ್ನಾಯುಗಳನ್ನು ಬಲಪಡಿಸಿ, ಸಂಯೋಜನಕ ಅಂಗಾಶಗಳನ್ನು ಸರಿಪಡಿಸುತ್ತದೆ. ಇದರಿಂದ ಕೀಲು ನೋವು ಕಡಿಮೆಯಾಗುತ್ತದೆ.

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ :
ಕ್ಯಾಪ್ಸಿಕಮ್‌ನಲ್ಲಿರುವ ಕರಗುವ ಫೈಬರ್‌ಗಳು ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರವು ಫೈಬರ್‌ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಖಾಯಿಲೆಗಳನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿ.

ಮೂಳೆಗಳನ್ನು ಬಲಪಡಿಸುತ್ತದೆ :
ದುರ್ಬಲ ಮೂಳೆಗಳು, ಮೂಳೆಗಳ ಮುರಿತ ಅಥವಾ ಒಡೆಯುವಿಕೆಯ ಸಾಧ್ಯತೆಯನ್ನು ಪೊಟ್ಯಾಸಿಯಮ್‌ ತಡೆಯುತ್ತದೆ. ಕ್ಯಾಪ್ಸಿಕಮ್‌ ನಲ್ಲಿ ಪೊಟ್ಯಾಸಿಯಂ ಅಧಿಕವಾಗಿದ್ದು ಮೂಳೆಗಳ ಬಲವರ್ಧನೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ : Anjeer Benefits : ಅಂಜೂರ : ಈ ಒಣ ಹಣ್ಣು ನಿಮ್ಮ ದೇಹದ ತೂಕ ಕಾಪಾಡಲು ಬಹಳ ಪ್ರಯೋಜನಕಾರಿ

ಇದನ್ನೂ ಓದಿ : Right Way of Eating Food : ಆಹಾರ ಸೇವಿಸುವ ಸರಿಯಾದ ರೀತಿ ಹೀಗಿದೆ : ಸಲಹೆ ನೀಡಿದ ಖ್ಯಾತ ಪೌಷ್ಟಿಕತಜ್ಞೆ ರುಜುತಾ ದಿವೇಕರ್‌

(Capsicum Benefits do you know why one should include capsicum in the diet)

Comments are closed.