Shabrimala Yatre : ಶಬರಿಮಲೆ ಯಾತ್ರಿಕರಿಗಾಗಿ ಕೊಟ್ಟಾಯಂ ರೈಲು ನಿಲ್ದಾಣದಲ್ಲಿ ಪ್ರಾರಂಭವಾದ ‘ಶಬರಿಮಲೆ ಯಾತ್ರಿಕ ಕೇಂದ್ರ’

ಪ್ರತಿ ವರ್ಷ ಸಾವಿರಾರು ಭಕ್ತರು ಭೇಟಿ ನೀಡುವ ಪವಿತ್ರ ಶಬರಿಮಲೆ ದೇಗುಲದ ಯಾತ್ರಾ ಸಮಯವು ಪ್ರಾರಂಭವಾಗುತ್ತಿದೆ. ಎರಡು ತಿಂಗಳುಗಳ ಕಾಲ ನಡೆಯುವ ಯಾತ್ರೆಯು ನವೆಂಬರ್‌ ತಿಂಗಳಿನ ಮಧ್ಯದಿಂದ ಪ್ರಾರಂಭವಾಗುತ್ತದೆ. ಸಾವಿರಾರು ಭಕ್ತರು ಈ ಅವಧಿಯಲ್ಲಿ ಶಬರಿಮಲೆಗೆ (Shabrimala Yatre) ತೆರಳಿ ದೇವರ ದರ್ಶನ ಪಡೆಯುತ್ತಾರೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಕೇರಳದ ಕೊಟ್ಟಾಯಂ ರೈಲು ನಿಲ್ದಾಣದಲ್ಲಿ ಹೊಸ ಯಾತ್ರಾ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಯಾತ್ರೆಯ ಸಮಯ ಪ್ರಾರಂಭವಾಗುವ ಮೊದಲೇ ಹೊಸ ಶಬರಿಮಲೆ ಯಾತ್ರಿಕ ಕೇಂದ್ರ ತೆರೆಯಲಾಗಿದೆ.

ಇದನ್ನು ಭಾರತದ ಕಿರಿಯ ವಿದೇಶಾಂಗ ಸಚಿವ ವಿ ಮುರಳೀಧರನ್ ಅವರು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಉದ್ಘಾಟನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಬರಿಮಲೆ ಯಾತ್ರೆ ಪ್ರಾರಂಭಕ್ಕೂ ಮುಂಚಿತವಾಗಿ ಕೊಟ್ಟಾಯಂ ರೈಲ್ವೇ ನಿಲ್ದಾಣದಲ್ಲಿ ಉದ್ಘಾಟಿನೆಯಾದ ಹೊಸ ಯಾತ್ರಿಕ ಕೇಂದ್ರವು ನರೇಂದ್ರ ಮೋದಿ ಸರ್ಕಾರದ ಸಮಯೋಚಿತ ಉಡುಗೊರೆ. ಇದು ಹಲವಾರು ಯಾತ್ರಿಕರು ಮತ್ತು ಪ್ರವಾಸಿಗರಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Karnataka rains: ರಾಜ್ಯದಲ್ಲಿ ಮುಂದುವರಿದ ಮಳೆ: ತಮಿಳುನಾಡಿನ ಶಾಲೆಗಳಿಗೆ ಇಂದು ರಜೆ ಘೋಷಣೆ

ಶಬರಿಮಲೆ ಯಾತ್ರೆಯ ಋತುವು ನವೆಂಬರ್‌ 16, ಬುಧವಾರದಿಂದ (ಇಂದು) ಪ್ರಾರಂಭವಾಗುತ್ತದೆ. ದೇವಾಲಯದ ಗರ್ಭಗುಡಿ ತೆರೆದ ನಂತರ ಮೊದಲ ದಿನ ಅರ್ಚಕರು ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅವರು ಸಂಜೆ ಸುಮಾರು 5 ಗಂಟೆಗೆ ಪ್ರವೇಶಿಸುತ್ತಾರೆ. ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಭಕ್ತರು ಮತ್ತು ಯಾತ್ರಾರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಲು ಪ್ರಾರಂಭಿಸಬಹುದು ಎಂದು ಡೈಲಿ ಹಂಟ್ ವರದಿ ಮಾಡಿದೆ. ಪವಿತ್ರ ಶಬರಿಮಲೆ ಯಾತ್ರೆಯ ಋತುವನ್ನು 2 ಹಂತಗಳಲ್ಲಿ ಆಚರಿಸಲಾಗುತ್ತದೆ. ಮೊದಲ ಹಂತದ ಯಾತ್ರೆಯು ಡಿಸೆಂಬರ್ 27 ರವರೆಗೆ ನಡೆದರೆ ಎರಡನೇ ಹಂತವು ಡಿಸೆಂಬರ್ 30 ರಂದು ಪ್ರಾರಂಭವಾಗುತ್ತದೆ. ಇದು ಜನವರಿ 14 ಮಕರ ವಿಳಕ್ಕುನೊಂದಿಗೆ ಯಾತ್ರೆಯು ಸಂಪೂರ್ಣಗೊಳ್ಳುತ್ತದೆ.

ಮಕರ ವಿಳಕ್ಕು ಎಂದರೇನು?

ಕೇರಳದಲ್ಲಿ ಪ್ರತಿವರ್ಷ ಮಕರ ಸಂಕ್ರಾತಿಯಂದು ಆಚರಿಸಲಾಗುವ ಹಬ್ಬವನ್ನು ಮಕರ ವಿಳಕ್ಕು ಎಂದು ಕರೆಯುತ್ತಾರೆ. ಶಬರಿಮಲೆ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಸಾವಿರಾರು ಭಕ್ತರು ಸೇರಿ ಇದನ್ನು ಆಚರಿಸುತ್ತಾರೆ. ಪೆರಿನಾಡ್ ಗ್ರಾಮದಲ್ಲಿ ನೆಲೆಸಿರುವ ಈ ದೇವಾಲಯವನ್ನು ತಲುಪುವುದೇ ಒಂದು ವಿಶಿಷ್ಟ ಅನುಭವ. ವಿವಿಧ ಸಾರಿಗೆ ಸಂಪರ್ಕಗಳ ಮೂಲಕ ಪಂಬಾ ತಲುಪಿದ ನಂತರ, ಭಕ್ತರು ಪಾದಯಾತ್ರೆಯ ಮೂಲಕವೇ ಶಬರಿಮಲೆ ದೇವಸ್ಥಾನವನ್ನು ತಲುಪಬೇಕು. ಇದು ದೇವಸ್ಥಾನ ತಲುಪಲು ಇರುವ ಏಕೈಕ ಮಾರ್ಗವಾಗಿದೆ.

(ಆಧಾರ: ಡೇಲಿಹಂಟ್‌)

ಇದನ್ನೂ ಓದಿ : Winter Tour : ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕಾ? ಈ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ

(Shabrimala Yatre Kottayam Railway station gets a new Sabarimala Pilgrim Centre ahead of the yatra season)

Comments are closed.