Egg Yolk: ಮೊಟ್ಟೆಯಲ್ಲಿರುವ ಹಳದಿ ಭಾಗ ತಿನ್ನಬೇಕಾ ಅಥವಾ ಬೇಡವಾ?

ಕೆಲವರಿಗೆ ಬೆಳಗ್ಗಿನ ತಿಂಡಿಯಲ್ಲಿ ಬ್ರೆಡ್‌ ಆಮ್ಲೇಟ್‌ (Bread- Omelet) ಎಂದರೆ ಬಹಳ ಇಷ್ಟ. ಇನ್ನು ಕೆಲವರಿಗೆ ಮದ್ಯಾಹ್ನದ ಊಟದಲ್ಲಿ ಎಗ್‌ ಕರಿ, ಎಗ್‌ ರೈಸ್‌ ಅಂದರೆ ಇಷ್ಟ. ಹಲವರು ಇದನ್ನು ಬೇಯಿಸಿ (Boiled Egg) ಸೈಡ್‌ ಡಿಶ್‌ ನಂತೆಯೂ ತಿನ್ನತ್ತಾರೆ. ಹೀಗೆ ಅನೇಕ ರೀತಿಯಲ್ಲಿ ಮೊಟ್ಟೆ (Egg) ಯನ್ನು ಸೇವಿಸುತ್ತಾರೆ. ಇದು ದಿನವಿಡೀ ದೇಹಕ್ಕೆ ಶಕ್ತಿ ನೀಡುತ್ತದೆ. ಮೊಟ್ಟೆ ಅಗಾಧವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಮೊಟ್ಟೆಯಲ್ಲಿ ಎರಡು ಭಾಗಗಳಿವೆ, ಮೊದಲನೆಯದು ಬಿಳಿ ಭಾಗವಾದರೆ, ಎರಡನೇಯದು ಹಳದಿ. ಅದನ್ನು ಯೋಕ್‌ (Egg Yolk) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇಡೀ ಮೊಟ್ಟೆಯನ್ನು ತಿಂದರೆ ಆರೋಗ್ಯಕ್ಕೆ ಲಾಭವಿದೆಯೇ? ಅಥವಾ ಬಿಳಿ ಭಾಗವನ್ನಷ್ಟೇ ತಿನ್ನಬೇಕೋ, ಇಲ್ಲವೇ ಹಳದಿ ಭಾಗವನ್ನೂ ತಿನ್ನಬೇಕೋ ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡುತ್ತದೆ. ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರ ಬಗ್ಗೆ ಹಲವರಲ್ಲಿ ಗೊಂದಲವಿದೆ. ಹಾಗಾದರೆ ಮೊಟ್ಟೆಯ ಹಳದಿ ಭಾಗ ಏನನ್ನು ಹೊಂದಿರುತ್ತದೆ ಎಂದು ತಿಳಿಯಲು ಇದನ್ನು ಓದಿ.

ಮೊಟ್ಟೆಯ ಹಳದಿ ಭಾಗ ಅಂದರೆ ಯೋಕ್‌ ವಿಟಮಿನ್ ಜೊತೆಗೆ ಅತಿ ಹೆಚ್ಚು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಇಡೀ ಮೊಟ್ಟೆಯಲ್ಲಿ ಅತಿ ಹೆಚ್ಚಿನ ಅಂದರೆ ಸುಮಾರು 185 ಗ್ರಾಂ ಗಳಷ್ಟು ಕೊಲೆಸ್ಟ್ರಾಲ್ ಈ ಭಾಗದಲ್ಲಿಯೇ ಇರುತ್ತದೆ. ಈ ಕಾರಣದಿಂದಾಗಿಯೇ, ಕೊಲೆಸ್ಟ್ರಾಲ್ ಅಥವಾ ಹೃದ್ರೋಗದಿಂದ ಬಳಲುತ್ತಿರುವವರಿಗೆ ಅಥವಾ ಇತರೆ ಆರೋಗ್ಯ ಸಮಸ್ಯೆ ಇರುವವರಿಗೆ ಮೊಟ್ಟೆಯ ಹಳದಿ ಭಾಗ ಅಂದರೆ ಯೋಕ್ ಅನ್ನು ತಿನ್ನದಿರಲು ವೈದ್ಯರು ಸಲಹೆ ನೀಡುತ್ತಾರೆ.

ಯಾರು ಪೂರ್ತಿ ಮೊಟ್ಟೆಯನ್ನು ತಿನ್ನಬಹುದು?
ಪೂರ್ತಿ ಮೊಟ್ಟೆಯನ್ನು ಅಂದರೆ ಮೊಟ್ಟೆಯ ಬಿಳಿ ಭಾಗ ಮತ್ತು ಯೋಕ್‌ ಅನ್ನು ಯಾವುದೇ ಕಾಯಿಲೆಗಳಲ್ಲದವರು ಸೇವಿಸಬಹುದು. ಆರೋಗ್ಯ ಸಮಸ್ಯೆಯಲ್ಲದವರು ಪೂರ್ತಿ ಮೊಟ್ಟೆಯನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರಲ್ಲೂ ಬೆಳವಣಿಗೆ ಹೊಂದುತ್ತಿರುವ ಮಕ್ಕಳಿಗೆ ಇದು ಉತ್ತಮವಾಗಿದೆ. ಇದು ಎಲ್ಲ ರೀತಿಯ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.

ಮೊಟ್ಟೆ ಹೇಗೆ ಉತ್ತಮವಾಗಿದೆ?
ಮೊಟ್ಟೆಯಲ್ಲಿ ವಿಟಮಿನ್ ಡಿ, ಎ, ಬಿ ಮತ್ತು ಕೆ ಹೇರಳವಾಗಿ ಕಂಡುಬರುತ್ತದೆ. ಇದು ಹೆಚ್ಚಿನ ಪ್ರಮಾಣದ ಕಬ್ಬಿಣವನ್ನು ಹೊಂದಿದೆ. ರೈಬೋಫ್ಲಾವಿನ್ ಕೂಡ ಇರುವುದರಿಂದ ಇದು ದೇಹವನ್ನು ಆರೋಗ್ಯವಾಗಿಡುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ ಕೋಲೀನ್ ಕಂಡುಬರುತ್ತದೆ. ಅಂದರೆ ಯೋಕ್‌ ನಲ್ಲಿ. ಇದು ಒಂದು ರೀತಿಯ ವಿಟಮಿನ್. ಇದು ನಮ್ಮ ಮೆದುಳಿನ ಬೆಳವಣಿಗೆಗೆ ಬಹಳ ಪ್ರಯೋಜನಕಾರಿಯಾಗಿದೆ. ಸ್ನಾಯುಗಳನ್ನು ನಿಯಂತ್ರಿಸಲು ಮತ್ತು ಸ್ಮರಣ ಶಕ್ತಿ ಬಲಪಡಿಸಲು ಸಹಕಾರಿಯಾಗಿದೆ. ಯೋಕ್‌ನಲ್ಲಿ ಕಂಡುಬರುವ ಕೋಲೀನ್, ಆಂಟಿ ಇನ್‌ಫ್ಲಮೆಟರಿ ಗುಣಲಕ್ಷಣಗಳನ್ನು ಹೊಂದಿದೆ. ಮೊಟ್ಟೆಯ ಸೇವನೆಯು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : Tomato Soup Benefits : ಟೊಮೆಟೊ ಸೂಪ್‌ ಕುಡಿಯಿರಿ, ತೂಕ ಇಳಿಸಿಕೊಳ್ಳಿ ಅಂದರೆ ನಿಮಗೆ ಆಶ್ಚರ್ಯವಾಗುತ್ತಿದೆಯಾ…

ಇದನ್ನೂ ಓದಿ : Paneer Tikka : ಮನೆಯಲ್ಲೂ ಮಾಡಿ ಪನ್ನೀರ್ ಟಿಕ್ಕಾ

(Egg Yolk is healthy or not? what are the benefits of egg yolk)

Comments are closed.