Britain Visa: ಮೋದಿ- ರಿಷಿ ಸುನಕ್ ಭೇಟಿ ಬೆನ್ನಲ್ಲೇ ವಾರ್ಷಿಕ 3,000 ಭಾರತೀಯ ವೀಸಾಕ್ಕೆ ಬ್ರಿಟನ್ ಗ್ರೀನ್ ಸಿಗ್ನಲ್

ಬ್ರಿಟನ್: Britain Visa: ಪ್ರಧಾನಿ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ 17ನೇ ಆವೃತ್ತಿಯಲ್ಲಿ ಪರಸ್ಪರ ಮಾತುಕತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಭಾರತದ 3 ಸಾವಿರ ಯುವ ವೃತ್ತಿಪರ ಉದ್ಯೋಗಿಗಳಿಗೆ ಬ್ರಿಟನ್ ವೀಸಾ ಪರವಾನಿಗೆ ನೀಡಿದೆ. ಪದವಿ ಹೊಂದಿರುವ, 18ರಿಂದ 30 ವರ್ಷದೊಳಗಿನ 3000 ವೃತ್ತಿಪರರು, 2 ವರ್ಷಗಳ ಕಾಲ ಬ್ರಿಟನ್ ನಲ್ಲಿ ನೆಲೆಸಿ ಉದ್ಯೋಗ ಮಾಡಲು ಅನುಕೂಲವಾಗುವಂತೆ ಈ ವೀಸಾ ನಿಯಮಗಳು ರೂಪುಗೊಂಡಿವೆ.

ಇದನ್ನೂ ಓದಿ: Donald Trump: ಅಮೆರಿಕಾ ಅಧ್ಯಕ್ಷೀಯ ಪಟ್ಟದತ್ತ ಮತ್ತೆ ಒಲವು: 2024ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಟ್ರಂಪ್

ಪ್ರತಿ ವರ್ಷ 3000 ಭಾರತೀಯ ವೃತ್ತಿಪರರಿಗೆ ವೀಸಾ ನೀಡುವುದಾಗಿ ಬ್ರಿಟನ್ ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ. ಇದರೊಂದಿಗೆ ಕಳೆದ ವರ್ಷ ಸಹಿ ಮಾಡಲಾದ ಯುಕೆ ಹಾಗೂ ಭಾರತ ವಲಸೆ ಮತ್ತು ಪ್ರಯಾಣದ ಸಹಭಾಗಿತ್ವ ಒಪ್ಪಂದ ಮತ್ತಷ್ಟು ಗಟ್ಟಿಯಾಗಿದೆ. ವೀಸಾ ಯೋಜನೆಯ ಪ್ರಯೋಜನ ಪಡೆಯುವ ಮೊದಲ ದೇಶ ಭಾರತವಾಗಲಿದೆ ಎಂದು ಬ್ರಿಟನ್ ತಿಳಿಸಿದೆ.

ಈ ಯೋಜನೆಯಡಿ ಬ್ರಿಟನ್ ದೇಶದ ವೃತ್ತಿಪರರಿಗೆ ಭಾರತದಲ್ಲಿ ಕಾರ್ಯಾನುಭವದ ಅವಕಾಶ ಕಲ್ಪಿಸಲಾಗುವುದು ಎಂದು ಬ್ರಿಟನ್ ಹೇಳಿದೆ. ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿನ ಬಾಂಧವ್ಯ ಗಟ್ಟಿಗೊಳೀಸುವ ಮತ್ತು ಭಾರತ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೊಳಿಸುವ ಬಗೆಗಿನ ಬ್ರಿಟನ್ ಬದ್ಧತೆ ಈ ಮೂಲಕ ಸ್ಪಷ್ಟವಾಗಿದೆ. ಇದರಿಂದ ಉಭಯ ದೇಶಗಳ ಆರ್ಥಿಕತೆ ಬಲಗೊಳ್ಳಲಿವೆ ಎಂದು ಡೌನಿಂಗ್ ಸ್ಟ್ರೀಟ್ ಮೂಲಗಳು ತಿಳಿಸಿವೆ. ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅಮೆರಿಕಾದ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಜೊತೆಗಿನ ಮಾತುಕತೆ ಜಿ20 ಶೃಂಗದ ನೇಪಥ್ಯದಲ್ಲಿ ನಡೆದಿದೆ.

ಇಂಡೋ- ಪೆಸಿಫಿಕ್ ಪ್ರಾಂತ್ಯದಲ್ಲಿ ಬೇರೆಲ್ಲಾ ದೇಶಗಳಿಗೆ ಹೋಲಿಸಿದರೆ ಬ್ರಿಟನ್ ಭಾರತದ ಜೊತೆ ಉತ್ತಮ ನಂಟನ್ನು ಹೊಂದಿದೆ. ಬ್ರಿಟನ್ ನಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಶೇ.25ರಷ್ಟು ವಿದ್ಯಾರ್ಥಿಗಳು ಭಾರತದ ಪ್ರಜೆಗಳಾಗಿದ್ದಾರೆ. ಮಾತ್ರವಲ್ಲ ಬ್ರಿಟನ್ ನಲ್ಲಿ ಸುಮಾರು 95 ಸಾವಿರದಷ್ಟು ಉದ್ಯೋಗಗಳು ಭಾರತೀಯ ಹೂಡಿಕೆಯಿಂದಲೇ ಸೃಷ್ಟಿಯಾಗಿವೆ ಎಂಬುದು ಗಮನಾರ್ಹ.

ಇದನ್ನೂ ಓದಿ: Pet Dog Attack : ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ದಾಳಿ ಮಾಡಿದ ಸಾಕು ನಾಯಿ

ಭಾರತದೊಂದಿಗಿನ ವ್ಯಾಪಾರ ಸಂಬಂಧಿ ಮಾತುಕತೆಯಲ್ಲಿ ಬ್ರಿಟನ್ ಈಗಾಗಲೇ ತೊಡಗಿದ್ದು, ಮಾತುಕತೆ ಫಲಪ್ರದವಾದರೆ ಭಾರತದ ಜೊತೆ ಈ ರೀತಿಯ ವಹಿವಾಟಿನಲ್ಲಿ ಭಾಗಿಯಾಗುತ್ತಿರುವ ಮೊದಲ ಐರೋಪ್ಯ ದೇಶ ಬ್ರಿಟನ್ ಆಗಲಿದೆ.

Britain Visa: Britain gives green signal for 3,000 Indian visas per year after Modi and Rishi Sunak meeting

Comments are closed.