Mirjan Fort : ಮಿರ್ಜಾನ್ ಕೋಟೆ’ಯ ಐತಿಹಾಸಿಕ ವೈಶಿಷ್ಟತೆಯನ್ನು ನೀವು ತಿಳಿಯಲೇ ಬೇಕು

ಇತಿಹಾಸ ಹಾಗೂ ಪ್ರಕೃತಿ ಸೌಂದರ್ಯ ಎರಡನ್ನು ನಾವು ಮಿರ್ಜಾನ್‌ ಕೋಟೆಯಲ್ಲಿ ಕಾಣಬಹುದು. ಕುಮಟಾ ದಿಂದ ಸುಮಾರು 12 ಕಿಲೋಮೀಟರ್ ನಷ್ಟು ದೂರದಲ್ಲಿ ಈ ಮಿರ್ಜಾನ್ ಕೋಟೆ ಇದೆ. ಈ ಕೋಟೆಯನ್ನು ಕರಿಮೆಣಸು ರಾಣಿ ಎಂದೇ ಪ್ರಖ್ಯಾತಳಾಗಿರುವ ಗೇರುಸೊಪ್ಪೆ ರಾಣಿ ಚೆನ್ನಭೈರಾದೇವಿ 1608-1640ರ ನಡುವೆ ನಿರ್ಮಿಸಿದಳು ಎಂಬ ನಂಬಿಕೆಯಿದೆ.

ಸುಮಾರು 11.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಇರಬಹುದು. ಅತ್ಯಂತ ಸುಂದರವಾಗಿ ಹಾಗೂ ಹಳೆಯ ಕಾಲದಿಂದಲೂ ಹೆಸರು ಮಾಡಿದ ಕೋಟೆ ಇದು. ಕೋಟೆ ಪ್ರವೇಶಿಸುತ್ತಿದ್ದಂತೆ ಮುಖ್ಯ ದ್ವಾರ ಕಾಣಿಸುತ್ತದೆ. ನಂತರ ಮೂರು ಉಪ ದ್ವಾರಗಳು ಕಂಡುಬರುತ್ತವೆ.

ಇದನ್ನೂ ಓದಿ : Manjarabad Fort : ನಕ್ಷತ್ರಾಕಾರದ ಮಂಜರಾಬಾದ್ ಕೋಟೆ

ಈ ಕೋಟೆಯಲ್ಲಿ 9 ಬಾವಿಗಳನ್ನು ನಾವು ಕಾಣಬಹುದಾಗಿದೆ. ಅಲ್ಲದೇ ಇಲ್ಲಿ ರಾಣಿ ಮಹಾರಾಣಿಯರ ಆಸನ ವ್ಯವಸ್ಥೆ, ಗುಪ್ತ ದ್ವಾರ, ಪಾಕಶಾಲೆ, ದೇವಸ್ಥಾನ ಇತ್ಯಾದಿಗಳೆಲ್ಲವೂ ನೋಡಲು ಸಿಗುತ್ತವೆ. ಸರ್ಪಮಲ್ಲಿಕಾ ಎಂಬ ರಾಜ ಇಲ್ಲಿ ವಾಸವಾಗಿದ್ದಾಗ ಇದಕ್ಕೆ ಮೇರಿ ಜಾನ್ ಎಂದು ಕರಿದಿದ್ದನಂತೆ ಅದಕ್ಕಾಗಿಯೆ ಇದಕ್ಕೆ ಮಿರ್ಜಾನ್ ಎಂಬ ಹೆಸರು ಬಂತು ಎಂಬ ನಂಬಿಕೆಯು ಇದೆ.

ಇದರ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಸುರಂಗ ಮಾರ್ಗಗಳು ಇವೆ. ಒಂದೊಂದು ಸುರಂಗ ಮಾರ್ಗಗಳು ಕಾಶಿ, ಗೋಕರ್ಣ, ಸೋಂದಾ ಕೋಟೆಗಳನ್ನು ತಲುಪುತಿತ್ತು ಎಂಬುದಕ್ಕೆ ಕುರುಹು ಮತ್ತು ನಂಬಿಕೆ ಎರಡು ಇದೆ. ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಹಾಗೂ ರಾಷ್ಟ್ರೀಯ ಹಬ್ಬದ ದಿನದಂದು ಇಲ್ಲಿ ಧ್ವಜ ನೆಡುವುದರ ಮೂಲಕ ಹಬ್ಬದ ಆಚರಣೆಯನ್ನು ನಡೆಸಲಾಗುತ್ತದೆ. ಈ ಕೋಟೆಯನ್ನು ಜಂಬಿಟ್ಟಿಗೆ ಕಲ್ಲಿನಿಂದ (ಲ್ಯಾಟರೈಟ್) ನಿರ್ಮಾಣಮಾಡಿದ್ದು, ಇಂದಿಗೂ ಅದರ ಗೋಡೆಗಳು ಗಟ್ಟಿಯಾಗಿವೆ.

ಇದನ್ನೂ ಓದಿ: ಕಾಫಿ ನಾಡಿನ ಮುಳ್ಳಯ್ಯನಗಿರಿ : ಟ್ರಕಿಂಗ್‌ ಪ್ರಿಯರಿಗೆ ಸ್ವರ್ಗ !

(You must know the historical significance of Mirjan Fort)

Comments are closed.