ಕೊರೊನಾದಿಂದ 20 ಲಕ್ಷ ಸಾಲದ ಹೊರೆ, 4 ಹೆಣ್ಣು ಮಕ್ಕಳೊಂದಿಗೆ ಹೊಳೆಗೆ ಹಾರಿದ ಮಹಿಳೆ

ಗದಗ : ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ತಾಯಿಯೋರ್ವಳು ತನ್ನ ನಾಲ್ಕು ಮಂದಿ ಹೆಣ್ಣು ಮಕ್ಕಳ ಜೊತೆಗೆ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆಯ ರೋಣಾ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.

ಉಮಾದೇವಿ ( 45 ವರ್ಷ) ಹಾಗೂ ಹೆಣ್ಣು ಮಗಳು ನಾಪತ್ತೆಯಾಗಿದ್ದಾರೆ. ಉಳಿದಂತೆ ಮೂವರು ಹೆಣ್ಣು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಮಾದೇವಿ ಅವರ ಪತಿ ಶಿಕ್ಷಕರಾಗಿದ್ದು ಸುಮಾರು 20 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಆದ್ರೆ ಪತಿಯ ಸಾವಿನ ಬೆನ್ನಲ್ಲೇ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು.

ಇದೇ ಕಾರಣಕ್ಕೆ ಉಮಾದೇವಿ ತನ್ನ ನಾಲ್ಕು ಮಂದಿ ಹೆಣ್ಣು ಮಕ್ಕಳ ಜೊತೆಗೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ಉಮಾದೇವಿ ಅವರು ಹೊಳೆ ಆಲೂರು ಗ್ರಾಮದ ಹೊಳೆಗೆ ಹಾರಿದ್ದಾಳೆ. ಈ ಪೈಕಿ ಮೂವರು ಹೆಣ್ಣು ಮಕ್ಕಳು ತಾಯಿಯ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲದೇ ನೀರು ಪಾಲಾಗುತ್ತಿದ್ದ ತಾಯಿಯ ರಕ್ಷಣೆಗೂ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ನದಿಯ ದಡದಲ್ಲಿ ಉಮಾದೇವಿ ಅವರ ಸೀರೆ ಪತ್ತೆಯಾಗಿದೆ. ಗ್ರಾಮದ ಜನರು ಹ್ರದಯ ವಿದ್ರಾವಕ ಘಟನೆಗೆ ಕಂಬನಿ ಮಿಡಿಯುತ್ತಿದ್ದಾರೆ. ಸ್ಥಳಕ್ಕೆ ರೋಣಾ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ನಾಪತ್ತೆಯಾಗಿರುವ ಉಮಾದೇವಿ ಹಾಗೂ ಆಕೆಯ ಎಂಟು ವರ್ಷದ ಮಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ :  ಡೆತ್‌ನೋಟ್‌ ಬರೆದಿಟ್ಟು ಎಂ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಇದನ್ನೂ ಓದಿ : ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಸಾಮೂಹಿಕ ಅತ್ಯಾಚಾರ

( 20 lakh debt burden from Corona, a woman who committed suicide with 4 girls )

Comments are closed.