ಬ್ರಹ್ಮಾವರ : ನೀಲಾವರದಲ್ಲಿ ಬಾರೀ ಬೆಂಕಿ, ಸುಟ್ಟು ಕರಕಲಾದ ಫೈನಾಪಲ್‌ ತೋಟ

brahmavara Fire : ಬ್ರಹ್ಮಾವರ : ಬೆಂಕಿ ಕಾಣಿಸಿಕೊಂಡು ಫೈನಾಪಲ್‌ ತೋಟ ಸೇರಿದಂತೆ ಗಿಡಗಂಟಿಗಳು ಸುಟ್ಟು ಕರಕಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರದಲ್ಲಿ ನಡೆದಿದೆ.

ಬ್ರಹ್ಮಾವರದ ಮಟಪಾಡಿ ಗ್ರಾಮದಿಂದ ನೀಲಾವರ ಕಡೆ ಸಾಗುವ ಮಾರ್ಗದ ಅಕ್ಕ ಪಕ್ಕದ ರಸ್ತೆಗಳಲ್ಲಿ ಬೆಂಕಿ ಅಬ್ಬರ ಜೋರಾಗಿತ್ತು. ಜೆನಿತ್ ಡೈ ಮೇಕರ್ ಇಂಡಸ್ಟ್ರಿ ಸಮೀಪದ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಹಬ್ಬಲಾರಂಭಿಸಿದೆ.

brahmavara Fire breaks out in Neelavar, pineapple orchard burnt to ashes

ಬೆಂಕಿಯ ಕೆನ್ನಾಲಗೆಗೆ ಪೈನಾಪಲ್ ತೋಟ ಹಾಗೂ ಒಣಹುಲ್ಲು, ಗಿಡ ಗಂಟಿಗಳು ಸುಟ್ಟು ಕರಕಲಾಗಿವೆ. ಪರಿಸರದ ಅಡಿಕೆ ತೋಟ, ತೆಂಗು, ಹಲಸು ಗಿಡಗಳು ಕೂಡ ಸುಟ್ಟು ಹೋಗಿವೆ.

ಇದನ್ನೂ ಓದಿ : ಕುಂದಾಪುರ : ಮಂಗನ ಕಾಯಿಲೆ ಆತಂಕ, ಒಂದೇ ವಾರದಲ್ಲಿ 5 ಮಂಗಗಳ ಸಾವು

ಪರಿಸರದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳಿದ್ದು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳೀಯರು ಮತ್ತು ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಅನಾಹುತ ತಪ್ಪಿದೆ.

brahmavara Fire breaks out in Neelavar, pineapple orchard burnt to ashes

ಇತ್ತೀಚಿನ ದಿನಗಳಲ್ಲಿ ಬ್ರಹ್ಮಾವರ ಪರಿಸರದಲ್ಲಿ ಪದೇ ಪದೇ ಅಗ್ನಿ ಅವಘಡಗಳು ಸಂಭವಿಸುತ್ತಿದ್ದು ತಾಲೂಕು ಕೇಂದ್ರದಲ್ಲಿ ಶಾಶ್ವತ ಅಗ್ನಿಶಾಮಕ ಠಾಣೆ ಬೇಕೆಂಬ ಬೇಡಿಕೆ ಹೆಚ್ಚಿದೆ.

ಯಾವುದೇ ಅವಘಡ ಸಂಭವಿಸಿದರೆ, ಉಡುಪಿ ಇಂದ ಅಗ್ನಿಶಾಮಕ ವಾಹನ ಹೋಗಬೇಕಾಗಿದೆ. ಇದು ಸಾರ್ವಜನಿಕ ರ ಆಕ್ರೋಶ ಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಬಿರುಗಾಳಿಗೆ ಕುಸಿದ ಕೋಳಿ ಫಾರಂ ಶೆಡ್ : 20 ಲಕ್ಷಕ್ಕೂ ಅಧಿಕ ನಷ್ಟ..

brahmavara Fire breaks out in Neelavar, pineapple orchard burnt to ashes

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories