Car accident: ವೇಗದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ: ಇಂಜಿನಿಯರ್ ಸೇರಿದಂತೆ ಮೂವರಿಗೆ ಗಾಯ
ಉಡುಪಿ : Car accident: ಉಡುಪಿ ಜಿಲ್ಲೆಯ ಕಾರ್ಕಳದಿಂದ ಹೆಬ್ರಿ(Hebri) ಕಡೆಗೆ ವೇಗವಾಗಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ. ಅಪಘಾತದ ಪರಿಣಾಮ ಕಾರ್ಕಳ ಪಂಚಾಯತ್ ರಾಜ್ ವಿಭಾಗದ ಇಂಜಿನಿಯರ್ ಸದಾನಂದ ನಾಯ್ಕ್, ಅವರ ಪತ್ನಿ ಹಾಗೂ ಮಗುವಿಗೆ ಗಾಯವಾಗಿದೆ.
ಹಿರ್ಗಾನ ಗ್ರಾಮದ ಮೂರೂರು ಬಳಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಸದಾನಂದ ನಾಯ್ಕ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಕಾರಿನಲ್ಲಿ ಬ್ರಹ್ಮಾವರದ ಚಾಂತಾರಿಗೆ ಹೊರಟಿದ್ದ ವೇಳೆ, ರಸ್ತೆಯಲ್ಲಿ ಏಕಾಏಕಿ ಸೈಕಲ್ ಅಡ್ಡ ಬಂದ ಕಾರಣ ಕಾರಿನ ನಿಯಂತ್ರಣ ಕಳೆದು ವಿದ್ಯುತ್ ಕಂಬಕ್ಕೆ ಗುದ್ದಿಕೊಂಡಿದೆ.
Also Read: ಬೆನ್ನು ನೋವಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂಐಟಿ ವಿದ್ಯಾರ್ಥಿನಿ ಸಾವು
ಘಟನೆಯ ನಂತರ ಗಾಯಗೊಂಡವರನ್ನು ತಕ್ಷಣ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.



